
ಬೆಂಗಳೂರು(ಏ.26): ಮನಸ್ಸು, ಹೃದಯ ಗಟ್ಟಿ ಮಾಡಿಕೊಳ್ಳಿ. ಅಂತಹ ಭೀಕರ ಅಪಘಾತವಿದು.ಆದರೆ ತಾಯಿಯ ಧೈರ್ಯ, ಸಮಯ ಪ್ರಜ್ಞೆಯಿಂದ ಪುಟ್ಟ ಮಗನನ್ನು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಮಹಾತಾಯಿ ಎಂದು ಕರೆದಿದ್ದಾರೆ.
ಬೈಕ್ ನಲ್ಲಿ ಪತಿ, ಪತ್ನಿ ಹಾಗೂ ಪುಟ್ಟ ಮಗ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಯಾರ ತಂಟೆಯೂ ಇಲ್ಲದೆ ಬೈಕ್ ಚಲಿಸುತ್ತಿತ್ತು. ಆದರೆ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಚಲಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಮಗ ಹೆದ್ದಾರಿಗೆ ಉರುಳಿಸಿದ್ದಾರೆ.
ತಲೆ ತಿರುಗಿ ರೈಲಡಿ ಬಿದ್ದ ಮಹಿಳೆ ಪವಾಡಸದೃಶ ಪಾರು
ಮುಂಭಾಗದಿಂದ ಬಂದ ಟ್ರಕ್ ಅಡಿಗೆ ಬಿದ್ದಿದ್ದಾರೆ. ಆದರೆ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ತಾಯಿ ಅಷ್ಟೇ ವೇಗದಲ್ಲಿ ಮಗನ ಹಿಡಿದು ಟ್ರಕ್ ಅಡಿಯಿಂದ ಇತ್ತ ಹೊರಳಿದ್ದಾರೆ. ಟ್ರಕ್ ವೇಗವಾಗಿ ಮುಂದೆ ಸಾಗಿದೆ. ಎಲ್ಲವೂ ಕಣ್ಮುಚ್ಚಿ ತೆರೆಯುವುದರೊಳಗೆ ನಡೆದು ಹೋಗಿದೆ. ನೆಲಕ್ಕೆ ಬಿದ್ದ ರಭಸಕ್ಕೆ ಪುಟ್ಟ ಮಗ ಹಾಗೂ ತಾಯಿಗೆ ಗಾಯಗಳಾಗಿದೆ. ಆದರೆ ಟ್ರಕ್ ಅಪಘಾತದಿಂದ ಪಾರಾಗಿದ್ದಾರೆ. ಪುಟ್ಟ ಮಗನನ್ನು ರಕ್ಷಿಸುವಲ್ಲಿ ತಾಯಿ ಯಶಸ್ವಿಯಾಗಿದ್ದಾರೆ.
ತಾಯಿ ಹಾಗೂ ಮಗ ರಸ್ತೆಗೆ ಬಿದ್ದು ಅಪಘಾತದಿಂದ ಪಾರಾದರೆ ಅತ್ತ ಬೈಕ್‌ನಲ್ಲಿದ್ದ ಪತಿ ಯಾವುದೇ ಅಪಾಯವಿಲ್ಲದೆ ಬೈಕ್ ನಿಲ್ಲಿಸಿ ಓಡೋಡಿ ಬಂದಿದ್ದಾರೆ. ತಾಯಿ ಮಗನಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಆದರೆ ಅಪಘಾತಕ್ಕೆ ಕಾರಣವಾದ ಕಾರು ನೇರವಾಗಿ ಮುಂದಕ್ಕೆ ಚಲಿಸಿದೆ. ಅಪಘಾತ ಸೃಷ್ಟಿಸಿ ಏನೂ ಮಾಡಿಲ್ಲ ಅನ್ನುವಂತೆ ಸಾಗಿದೆ.
7.62 MM ಬುಲೆಟ್ ತಡೆದು ಉಕ್ರೇನ್ ಯೋಧನ ಜೀವ ಉಳಿಸಿದ ಸ್ಮಾರ್ಟ್‌ಫೋನ್: ಇಲ್ಲಿದೆ ವೈರಲ್ ವಿಡಿಯೋ
ಈ ಘಟನೆ ನಡೆದಿರುವುದು 2019ರ ಅಸುಪಾಸಿನಲ್ಲಿ. 2019ರಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಈ ವಿಡೋಯವನ್ನು ಜೋಫ್ರಾ ಆರ್ಚರ್ ಹಂಚಿಕೊಂಡಿದ್ದಾರೆ. ಮದರ್ ಆಫ್ ದಿ ಇಯರ್ ಎಂದು ಕರೆದಿದ್ದಾರೆ. ನಿಜಕ್ಕೂ ಈಕೆ ಮಹಾತಾಯಿ.
ಎಫ್1 ರೇಸ್ ವೇಳೆ ಭಾರೀ ಅಪಘಾತ
ಇಟಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ 1 ರೇಸ್ ವೇಳೆ ಭಾರೀ ಅಪಘಾತ ನಡೆದಿದ್ದು, ‘ಹಾಲೋ’ ಸುರಕ್ಷತೆ ವ್ಯವಸ್ಥೆಯಿಂದಾಗಿ 7 ಬಾರಿ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೆಡ್‌ಬುಲ್ ರೇಸಿಂಗ್ ತಂಡದ, ನೆದರ್‌ಲೆಂಡ್ಸ್‌ನ ಚಾಲಕ ಮ್ಯಾಕ್ಸ್ ವಸ್ರ್ಟಾಪೆನ್ ಅಪಾಯಕಾರಿಯಾರಿ ಚಾಲನೆ ಮಾಡಿದ ಕಾರಣ, ತಿರುವೊಂದರಲ್ಲಿ ಅವರ ಕಾರು ಮರ್ಸಿಡೀಸ್ ತಂಡದ ಹ್ಯಾಮಿಲ್ಟನ್‌ರ ಕಾರಿನ ಮೇಲೆ ಬಿತ್ತು. ಇದರಿಂದಾಗಿ ಇಬ್ಬರೂ ರೇಸ್‌ನಿಂದ ಹೊರಬಿದ್ದರು. ‘ಹಾಲೋ’ ವ್ಯವಸ್ಥೆ ಇಲ್ಲದಿದ್ದರೆ ವಸ್ರ್ಟಾಪೆನ್ ಕಾರಿನ ಚಕ್ರ ಹ್ಯಾಮಿಲ್ಟನ್ ತಲೆ ಮೇಲೆ ಹರಿಯುತ್ತಿತ್ತು.
ಏನಿದು ‘ಹಾಲೋ’ ವ್ಯವಸ್ಥೆ?
‘ಹಾಲೋ’ ವ್ಯವಸ್ಥೆಯನ್ನು ಎಫ್1 ಕಾರಿನಲ್ಲಿ ಚಾಲಕನ ಸುರಕ್ಷತೆಗೆ ಬಳಸಲಾಗುತ್ತದೆ. ಕಾಕ್‌ಪಿಟ್ ಮೇಲೆ ಟೈಟಾನಿಯಂನಿಂದ ತಯಾರಿಸಿದ 3 ಪಟ್ಟಿಗಳನ್ನು ಅವಳಡಿಸಲಾಗಿರುತ್ತದೆ. ಇವು ಒಂದು ಕಾರು ಮತ್ತೊಂದು ಕಾರಿನ ಮೇಲೆ ಬಿದ್ದಾಗ, ಇಲ್ಲವೇ ಬೇರೆ ಯಾವುದಾದರೂ ವಸ್ತುಗಳು ಕಾರಿನ ಮೇಲೆ ಬಿದ್ದಾಗ ಕಾಕ್‌ಪಿಟ್‌ನೊಳಗಿರುವ ಚಾಲಕನ ತಲೆಗೆ ತಗುವುದನ್ನು ತಡೆಯುತ್ತವೆ. ‘ಹಾಲೋ’ ಪಟ್ಟಿಗಳು 12000 ಕೆ.ಜಿ. ತೂಕವನ್ನು ತಡೆಯಬಲ್ಲವು. 2018ರಿಂದ ‘ಹಾಲೋ’ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ