Russia Ukraine War: ದಾಳಿಯ ಮೊದಲ ಹಂತ ಪೂರ್ಣ: ರಷ್ಯಾ ಪ್ರಕಟ

Published : Mar 26, 2022, 03:30 AM IST
Russia Ukraine War: ದಾಳಿಯ ಮೊದಲ ಹಂತ ಪೂರ್ಣ: ರಷ್ಯಾ ಪ್ರಕಟ

ಸಾರಾಂಶ

ಉಕ್ರೇನ್‌ ಮೇಲೆ 30 ದಿನಗಳಿಂದ ಸತತವಾಗಿ ದಾಳಿ ನಡೆಸುತ್ತಿದ್ದ ರಷ್ಯಾ, ಉಕ್ರೇನ್‌ ಮೇಲಿನ ಮೊದಲ ಹಂತದ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಶುಕ್ರವಾರ ಪ್ರಕಟಿಸಿದೆ.

ಮಾಸ್ಕೋ (ಮಾ.26): ಉಕ್ರೇನ್‌ (Ukraine) ಮೇಲೆ 30 ದಿನಗಳಿಂದ ಸತತವಾಗಿ ದಾಳಿ ನಡೆಸುತ್ತಿದ್ದ ರಷ್ಯಾ (Russia), ಉಕ್ರೇನ್‌ ಮೇಲಿನ ಮೊದಲ ಹಂತದ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಶುಕ್ರವಾರ ಪ್ರಕಟಿಸಿದೆ. ಜೊತೆಗೆ ತನ್ನ ಮುಂದಿನ ಗುರಿ ಈಗಾಗಲೇ ಉಕ್ರೇನ್‌ನ ಬಂಡುಕೋರರ ವಶದಲ್ಲಿರುವ ಡೋನ್‌ಬಾಸ್‌ (Donbass) ಪ್ರಾಂತ್ಯಕ್ಕೆ ಪೂರ್ಣ ಸ್ವಾತಂತ್ರ್ಯ ಕೊಡಿಸುವುದಾಗಿದೆ ಎಂದು ಹೇಳಿಕೊಂಡಿದೆ.

ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ರಷ್ಯಾದ ರಕ್ಷಣಾ ಸಚಿವಾಲಯ, ಉಕ್ರೇನ್‌ಗೆ ಸೇರಿದ ಲುಹಾನ್‌ಸ್ಕ್‌ನ ಶೇ.93ರಷ್ಟುಮತ್ತು ಡೋನ್‌ಟೆಸ್ಕ್‌ನ ಶೇ.54ರಷ್ಟುಭಾಗ ನಮ್ಮ ವಶದಲ್ಲಿವೆ. ಈ ಎರಡೂ ಭಾಗಗಳನ್ನು ಸೇರಿ ಡೋನ್‌ಬಾಸ್‌ ಎನ್ನಲಾಗುತ್ತದೆ. ಇವುಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡುವುದು ನಮ್ಮ ಮುಂದಿನ ಮುಖ್ಯ ಗುರಿಯಾಗಿರಲಿದೆ ಎಂದು ಹೇಳಿದೆ. ಕಳೆದ 30 ದಿನಗಳ ಸತತ ಹೋರಾಟದ ಹೊರತಾಗಿಯೂ ಅಂದುಕೊಂಡ ರೀತಿಯಲ್ಲಿ ಉಕ್ರೇನ್‌ ವಶಪಡಿಸಿಕೊಳ್ಳುವುದು ರಷ್ಯಾಕ್ಕೆ ಸಾಧ್ಯವಾಗಿಲ್ಲ. ಉಕ್ರೇನ್‌ ಸೇನೆ ನಿರೀಕ್ಷೆಗೂ ಮೀರಿ ಪ್ರತಿರೋಧ ತೋರುತ್ತಿರುವುದು ರಷ್ಯಾಕ್ಕೆ ಭಾರೀ ಹಿನ್ನೆಡೆಯಾಗಿದೆ. 

ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆ, 2022ನೇ ಸಾಲಿನ ಭಾರತದ GDP ಬೆಳವಣಿಗೆ ಶೇ.4.6ಕ್ಕೆ ಇಳಿಸಿದ ವಿಶ್ವಸಂಸ್ಥೆ

ಕಳೆದ 30 ದಿನಗಳಲ್ಲಿ ರಷ್ಯಾದ 15000ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ. ಜೊತೆಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ನಷ್ಟವಾಗಿದೆ. ಅಲ್ಲದೆ ಯುದ್ಧ ಸಾರಿದ್ದಕ್ಕೆ ಜಾಗತಿಕ ಸಮುದಾಯ ದೊಡ್ಡ ಪ್ರಮಾಣದಲ್ಲಿ ನಿರ್ಬಂಧ ಹೇರಿದೆ. ಜೊತೆಗೆ ಆಂತರಿಕವಾಗಿಯೂ ಯುದ್ಧ ಸಾರಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಡೋಸ್‌ಬಾಸ್‌ ಹೆಸರಲ್ಲಿ ಇದು ರಷ್ಯಾ ಯುದ್ಧದಿಂದ ಹಿಂದೆ ಸರಿಯುತ್ತಿರುವ ಪ್ರಯತ್ನವಾಗಿರಬಹುದು. ಇದು ಪರೋಕ್ಷವಾಗಿ ರಷ್ಯಾಕ್ಕೆ ಯುದ್ಧದಲ್ಲಿ ಆದ ಸೋಲು ಎಂದು ಮೂಲಗಳು ಹೇಳಿವೆ.

ದಾಳಿಯಲ್ಲಿ 300 ನಾಗರೀಕರ ಸಾವು, ಮಕ್ಕಳ ಸಂಖ್ಯೆ ಹೆಚ್ಚು: ಉಕ್ರೇನ್ ಮೇಲಿನ ದಾಳಿ ತೀವ್ರಗೊಳಿಸಿರುವ ರಷ್ಯಾ ಇದೀಗ ನಾಗರೀಕರ ಗುರಿಯಾಗಿಸಿ ದಾಳಿ ಮಾಡುತ್ತಿದೆ. ಕಳೆದವಾರ ಮರಿಯುಪೋಲ್‌ ನಗರದಲ್ಲಿ ರ್ಭಿಣಿಯರು, ಮಕ್ಕಳು, ಮಹಿಳೆಯರ ಆಶ್ರಯ ಪಡೆದಿದ್ದ ಚಿತ್ರಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 300ಕ್ಕೂ ಹೆಚ್ಚು ಮಂದಿ ಸಾವೀಗಿಡಾಗಿದ್ದಾರೆ ಎಂದು ಸುದ್ಧಿ ಸಂಸ್ಧ ಎಎಫ್‌ಪಿ ವರದಿ ಮಾಡಿದೆ. ಸಾವಿರಾರು ಮಂದಿ ಆಶ್ರಯ ಪಡೆದ್ದ ಕಟ್ಟದ ಮೇಲೆ ಬಾಂಬ್ ದಾಳಿ ಮಾಡಿತ್ತು. ಬಂಕರ್‌ ಮೇಲಿನ ಥಿಯೇಟರ್‌ ಮತ್ತು ಈಜುಕೊಳದ ಮೇಲೆ ನಡೆಸಿದ ದಾಳಿಯಲ್ಲಿ ಸಾವೀಗೀಡಾದವರ ಸಂಖ್ಯೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ ಕೆಲವರನ್ನು ಆಸ್ಪತ್ರೆ ಸಾಗಿಸುವಲ್ಲಿ ವಿಳಂಬವಾಗಿದೆ. ಹೀಗಾಗಿ ಸ್ಛಳದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮರಿಯಪೋಲ್‌ನಲ್ಲಿ ರಷ್ಯಾ ನಡೆಸಿದ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮಕ್ಕಳು, ಗರ್ಭಿಣಿಯರು, ಮಹಿಳೆಯರ ಆಶ್ರಯ ಪಡೆದಿದ್ದ ಕಟ್ಟದ ಮೇಲೆ ದಾಳಿ ನಡೆಸಿರುವುದಕ್ಕೆ ಅಮೆರಿಕ ಸೇರಿದಂತೆ ಹಲವು ದೇಶಗಳು ಬಹಿರಂಗವಾಗಿ ರಷ್ಯಾ ಮೇಲೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಯಾರ ಮಾತಿಗೂ ರಷ್ಯ ಕೇರ್ ಅಂದಿಲ್ಲ. 

ರಷ್ಯಾ ಉಕ್ರೇನ್‌ ಭೀಕರ ಯುದ್ಧಕ್ಕೀಗ ತಿಂಗಳು: ಸಂಧಾನ ಸಭೆಗಳ ಬಳಿಕವೂ ನಿಲ್ಲದ ಕದನ

ಶರಣಾಗತಿಗೆ ನಿರಾಕರಿಸಿದ ಉಕ್ರೇನ್‌ ಮೇಲೆ ರಷ್ಯಾಗೆ ಮತ್ತಷ್ಟು ಸಿಟ್ಟು: ಉಕ್ರೇನ್‌ ರಷ್ಯಾ ಯುದ್ಧ ಒಂದು ತಿಂಗಳು ಕಳೆದರೂ ಉಕ್ರೇನ್‌ ನಗರಗಳ ಮೇಲೆ ರಷ್ಯಾ ಭೀಕರ ವಾಯುದಾಳಿಯನ್ನು ಮುಂದುವರೆಸಿದೆ. ಮರಿಯುಪೋಲ್‌ನಲ್ಲಿ ಶರಣಾಗುವಂತೆ ರಷ್ಯಾ ನೀಡಿದ್ದ ಸೂಚನೆಯನ್ನು ಉಕ್ರೇನ್‌ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಕರಾವಳಿ ನಗರ ಮರಿಯುಪೋಲ್‌ ಮೇಲೆ ರಾತ್ರಿ ರಷ್ಯಾ 2 ಸೂಪರ್‌ಬಾಂಬ್‌ ಬಾಂಬ್‌ಗಳಿಂದ ದಾಳಿ ಮಾಡಿತ್ತು. ಈ ಬಾಂಬ್‌ಗಳ ದಾಳಿಯಿಂದಾಗಿ ನಗರದಲ್ಲಿ 1 ಲಕ್ಷ ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಉಕ್ರೇನ್‌ ಸರ್ಕಾರ ತಿಳಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?