ನವದೆಹಲಿ(ಮಾ.25): ರಷ್ಯಾ ಉಕ್ರೇನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದರ ನಡುವೆ ಹಲವು ಮಹತ್ವದ ಬೆಳವಣಿಗೆಗಳೂ ನಡೆಯುತ್ತಿದೆ. ಇದೀಗ ಇಸ್ರೇಲ್ ಇದೇ ಮಾರ್ಚ್ 28 ಹಾಗೂ 29ರಂದು ಐತಿಹಾಸಿಕ ಪ್ರಾದೇಶಿಕ ಶೃಂಗಸಭೆ ಆಯೋಜಿಸುತ್ತಿದೆ. ಈ ಕುರಿತು ಇಸ್ರೇಲ್ ವಿದೇಶಾಂಗ ಸಚಿವ ಯೆರ್ ಲ್ಯಾಪಿಡ್ ಖಚಿತ ಪಡಿಸಿದ್ದಾರೆ.
ದಿಢೀರ್ ಆಯೋಜನೆಗೊಂಡ ಐತಿಹಾಸಿಕ ಶೃಂಗಸಭೆಯಲ್ಲಿ ಅಮೆರಿಕ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕೆನ್, ಯುಎಇ, ಬಹ್ರೇನ್ ಹಾಗೂ ಮೊರೊಕ್ಕೋದ ವಿದೇಶಾಂಗ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಇಸ್ರೇಲ್ ಹೇಳಿದ್ದಾರೆ.
ಈ ಶೃಂಗಸಭೆಯಲ್ಲಿ ಪ್ರಮುಖವಾಗಿ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ವಿಚಾರ ಚರ್ಚೆಯಾಗಲಿದೆ. ಯುದ್ಧನಿಂದ ನಿರ್ಮಾಣವಾಗಿರುವ ಆರ್ಥಿಕ ಹಿಂಜರಿತ ಸವಾಲನ್ನು ಸರಿದೂಗಿಸಲು ಕೈಗೊಳ್ಳಬೇಕಾದ ನಿರ್ಣಯಗಳ ಕುರಿತು ಚರ್ಚೆಯಾಗಲಿದೆ. ಯುದ್ಧದಿಂದ ಸೃಷ್ಟಿಯಾಗಿರುವ ಆರ್ಥಕ ಪರಿಣಾಮ, ಇರಾನ್ ಪ್ರಭಾವ ಕುರಿತು ಇಸ್ರೇಲ್, ಈಜಿಪ್ಟ್ ಹಾಗೂ ಯುಎಇ ನಾಯಕರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇಲ್ಲಿ ಪ್ರಮುಖ ವಿಚಾರವನ್ನು ಗಮಿಸಲೇಬೇಕು. 1979ರಲ್ಲಿ ಇಸ್ರೇಲ್ ಹಾಗೂ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.
Israel PM Visit ಬಾಂಧ್ಯವದ 30ನೇ ವರ್ಷಾಚರಣೆ, ಏ.2ಕ್ಕೆ ಇಸ್ರೇಲ್ ಪ್ರಧಾನಿ ಭಾರತಕ್ಕೆ!
ಇಸ್ರೇಲ್ ಶೃಂಗಸಭೆ ಆಯೋಜನೆ ಮಾಹಿತಿ ಹೊರಬಿದ್ದ ಬೆನ್ನಲ್ಲೇ, 2020ರಲ್ಲಿ ನಡೆದ ಅಬ್ರಹಾಂ ಒಪ್ಪಂದ ಇದೀಗ ಮತ್ತೆ ಚರ್ಚೆಯಾಗುತ್ತಿದೆ. ಯುನೈಟೆಡ್ ನೇಶನ್, ದಲ್ಲಾಳಿ ಒಪ್ಪಂದ ಅಡಿಯಲ್ಲಿ ಯುಎಇ, ಬಹ್ರೇನ್ ಇಸ್ರೇಲ್ ಜೊತೆಗಿನ ಸಂಬಂಧವನ್ನು ಸಾಮಾನ್ಯಗೊಳಿಸಿತ್ತು ಮೊರಕ್ಕೂ 2021ರಲ್ಲಿ ಈ ಒಪ್ಪಂದಕ್ಕೆ ತಲೆಬಾಗಿತ್ತು. ಇದೀಗ ಇಸ್ರೇಲ್ ಜೊತೆಗಿನ ಮಿಲಿಟರಿ ಸಹಕಾರ ಒಪ್ಪಂದಕ್ಕೆ ಬಹ್ರೇನ್ ಹಾಗೂ ಮೊರೊಕ್ಕೋ ಸಹಿ ಹಾಕಿದೆ.
ಮಧ್ಯಪ್ರಾಚ್ಯ ದೇಶಗಳು ಕ್ಷಿಪ್ರಗತಿಯಲ್ಲಿ ಮೈತ್ರಿ ದೇಶಗಳೊಂದಿಗೆ ಸಂಬಂಧ ಕಡಿದಕೊಳ್ಳುತ್ತಿದೆ. ಭದ್ರತೆ, ವ್ಯಾಪಾರ ವಹಿವಾಟು, ಆರ್ಥಿಕ ಹಿಂಜರಿತದಿಂದ ತಪ್ಪಿಸಲು ಹೊಸ ದೇಶಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಮಧ್ಯಪ್ರಾಚ್ಯ ದೇಶಗಳು ಮುಂದಾಗಿದೆ. ಇದೇ ವೇಳೆ ಹಳೇ ಮೈತ್ರಿ ಮುರಿಯಲು ಹಿಂದೇಟು ಹಾಕುತ್ತಿಲ್ಲ.
ಉಕ್ರೇನ್‌ಗೆ ಬೆಂಬಲಿಸಿ ಎಂದ ಅಮೆರಿಕಾಗೆ ಕೈಕೊಟ್ಟ ಸೌದಿ ಅರೇಬಿಯಾ, UAE
ಇತ್ತೀಚೆಗೆ ಭಾರತ ಮತ್ತು ಆಸ್ಪ್ರೇಲಿಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟುಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಸ್ಟೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆ ವರ್ಚುವಲ್ ಸಭೆ ನಡೆಸಲಾಗಿತ್ತು. ಮಾರ್ಚ್ 21ರಂದು ಮೋದಿ ವರ್ಚುವಲ್ ಸಭೆಯನ್ನು ನಡೆಸಿದ್ದರು. ಎರಡೂ ದೇಶಗಳು ವ್ಯಾಪಾರ ಒಪ್ಪಂದ ಕುರಿತು ಚರ್ಚಿಸಿದ್ದಾರೆ. ಇನ್ನು ಮಿಲಿಟರಿ ರಕ್ಷಣಾ ಸಹಕಾರ ಹಾಗೂ ಇನ್ನಿತರ ವಿಷಯಗಳು ಈ ವರ್ಚುವಲ್ ಸಭೆಯಲ್ಲಿ ಪ್ರಸ್ತಾಪವಾಗಿತ್ತು.
ಇಂಗಾಲ, ಕಲ್ಲಿದ್ದಲಿಗೆ ಕಡಿವಾಣ: ಜಿ-20 ಅಸ್ತು
2050ರ ವೇಳೆಗೆ ಇಂಗಾಲ ತಾಟಸ್ಥ್ಯ ಮತ್ತು ವಿದೇಶಗಳಲ್ಲಿನ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಹಣಕಾಸು ನೆರವು ಸ್ಥಗಿತಗೊಳಿಸಲು ಜಿ-20 ರಾಷ್ಟ್ರಗಳು ಸಮ್ಮತಿಸಿವೆ. ಜೊತೆಗೆ ಜಾಗತಿಕ ತಾಪಮಾನವನ್ನು ಕೈಗಾರಿಕಾ ಪೂರ್ವ ಸ್ಥಿತಿಗಿಂತ 1.5 ಡಿಗ್ರಿ ಸೆಲ್ಸಿಯಸ್‌ನಷ್ಟುಹೆಚ್ಚಳಕ್ಕೆ ಮಾತ್ರ ಸೀಮಿತಗೊಳಿಸುವ ಕುರಿತೂ ಜಿ-20 ದೇಶಗಳ ನಾಯಕರು ಒಪ್ಪಿದ್ದಾರೆ.
ಹಸಿರುಮನೆ ಅನಿಲ ಬಿಡುಗಡೆಗೆ ಮಿತಿ ಹೇರುವ ನಿರ್ದಿಷ್ಟಸಮಯ ಗೊತ್ತುಪಡಿಸುವ ಉದ್ದೇಶವನ್ನು ಸಭೆ ಹೊಂದಿತ್ತಾದರೂ, ಅಂಥ ತೀರ್ಮಾನಕ್ಕೆ ಬರಲು ಸಭೆ ವಿಫಲವಾಗಿದೆ. ಆದರೆ ಬಹುತೇಕ ದೇಶಗಳು 2050ರ ವೇಳೆಗೆ ಇಂಗಾಲ ತಾಟಸ್ಥ್ಯ (ಇಂಗಾಲ ಬಿಡುಗಡೆ ಮತ್ತು ವಾತಾವರಣದಲ್ಲಿನ ಇಂಗಾಲ ತೆಗೆಯುವ ಸಮಸ್ಥಿತಿ) ಸ್ಥಿತಿಗೆ ಬರಲು ಸಮ್ಮತಿಸಿವೆ. ಜೊತೆಗೆ ವಿದೇಶಗಳಲ್ಲಿನ ಕಲ್ಲಿದ್ದಲು ಆಧರಿತ ವಿದ್ಯುತ್ ಸ್ಥಾವರಗಳಿಗೆ ಹಣಕಾಸಿನ ನೆರವು ಸ್ಥಗಿತಗೊಳಿಸಲು ನಿರ್ಧರಿಸಿವೆ. ಆದರೆ ದೇಶೀಯವಾಗಿ ಕಲ್ಲಿದ್ದಲು ಸ್ಥಾವರಗಳನ್ನು ನಿರ್ಮೂಲನೆ ಮಾಡುವ ಕುರಿತು ಸ್ಪಷ್ಟಒಪ್ಪಂದಕ್ಕೆ ಬರಲು ಸಭೆ ವಿಫಲವಾಗಿದೆ. ಇದು ತಮ್ಮ ವಿದ್ಯುತ್ ಅಗತ್ಯಕ್ಕಾಗಿ ಕಲ್ಲಿದ್ದಲ್ಲನ್ನೇ ಹೆಚ್ಚಾಗಿ ಅವಲಂಬಿಸಿರುವ ಭಾರತ ಮತ್ತು ಚೀನಾದಂಥ ದೇಶಗಳ ಬೇಡಿಕೆಗೆ ಸಿಕ್ಕ ಜಯ ಎಂದು ಬಣ್ಣಿಸಲಾಗಿದೆ.