
ಮಾಸ್ಕೋ (ಮೇ.28): ಮಾನವನಿಂದ ಪ್ರಾಣಿಗಳಿಗೂ ಕೊರೋನಾ ಸೋಂಕು ವ್ಯಾಪಿಸುವ ಭೀತಿ ಮಧ್ಯೆಯೇ, ಪ್ರಾಣಿಗಳನ್ನು ಕೋವಿಡ್ನಿಂದ ಪಾರು ಮಾಡಬಹುದಾದ ಲಸಿಕೆಯೊಂದನ್ನು ರಷ್ಯಾ ಅಭಿವೃದ್ಧಿಪಡಿಸಿದೆ.
ಈ ಮೂಲಕ ಕಾರ್ನಿವ್ಯಾಕ್-ಕೋವ್ ಹೆಸರಿನ ರಷ್ಯಾದ ಈ ಲಸಿಕೆಯು ಪ್ರಾಣಿಗಳಿಗಾಗಿ ಅಭಿವೃದ್ಧಿಪಡಿಸಲಾದ ವಿಶ್ವದ ಮೊದಲ ಲಸಿಕೆ ಎಂಬ ಕೀರ್ತಿಗೆ ಭಾಜನವಾಗಿದೆ. ಅಲ್ಲದೆ ರಷ್ಯಾದ ಕೃಷಿ ಸುರಕ್ಷತೆಯ ವಿಚಕ್ಷಣ ನೇತೃತ್ವದಲ್ಲಿ ದೇಶದ ಹಲವು ಭಾಗಗಳಲ್ಲಿ ಪ್ರಾಣಿಗಳಿಗೂ ಕಾರ್ನಿವ್ಯಾಕ್ ಕೋವ್ ಲಸಿಕೆಗಳನ್ನು ನೀಡಲಾಗುತ್ತಿದೆ.
ನಿರ್ಲಕ್ಷ್ಯದ ಪರಮಾವಧಿ: ಕೊರತೆ ಇದ್ದರೂ ಲಸಿಕೆ ಹಾಳು ಮಾಡುತ್ತಿವೆ ರಾಜ್ಯಗಳು! .
ಕಾರ್ನಿವ್ಯಾಕ್-ಕೋವ್ ಲಸಿಕೆಯಿಂದ ಸಾಕು ಪ್ರಾಣಿಗಳಾದ ಶ್ವಾನಗಳು, ಬೆಕ್ಕುಗಳು, ಹಂದಿಗಳು ಸೇರಿದಂತೆ ಇನ್ನಿತರ ಪ್ರಾಣಿಗಳಲ್ಲಿ ಕೋವಿಡ್ ಪ್ರತಿರೋಧಕ ಶಕ್ತಿ ವೃದ್ಧಿಯಾಗಿರುವುದು ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ದೃಢವಾಗಿದೆ ಎಂದು ರಷ್ಯಾ ಏಪ್ರಿಲ್ ತಿಂಗಳಿನಲ್ಲೇ ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ