ಪಾಕೆಟ್ ಮನಿಯನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದ ಹುಡುಗಿ
ಇತ್ತೀಚೆಗೆ ಬ್ಯಾಂಕ್ ಪಾಸ್ ಬುಕ್ ಪತ್ತೆಯಾದ ಬಳಿಕ ಮತ್ತೆ ವಿಚಾರಣೆ
252 ರೂಪಾಯಿ ಇದ್ದ ಮೊತ್ತ 25,200 ರೂಪಾಯಿ ಆಗಿತ್ತು
ಗ್ಲಾಸ್ಗೋ (ಮಾ.5): ಬರೋಬ್ಬರಿ ಆರು ದಶಕದ (60 Years) ಬಳಿಕ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದರೆ ಏನಾಗಬಹುದು. ಭಾರತದಲ್ಲಾದರೆ, ಕೆಲ ತಿಂಗಳು ಖಾತೆಗಳನ್ನು ಬಳಸದೇ ಇದ್ದ ಪಕ್ಷದಲ್ಲಿ ಅನ್ನು ನಿಷ್ಕ್ರೀಯ ಮಾಡಿಬಿಡುವುದೇ ಹೆಚ್ಚು. ಆದರೆ, ಸ್ಕಾಟ್ಲೆಂಡ್ ನಲ್ಲಿ (Scotland) ಮಹಿಳೆಯೊಬ್ಬರು ಬರೋಬ್ಬರಿ 60 ವರ್ಷದ ಬಳಿಕ ತಮ್ಮ ಬ್ಯಾಂಕ್ (Bank Account) ಖಾತೆಯನ್ನು ಪರಿಶೀಲನೆ ಮಾಡಿದ್ದಾರೆ. ಕೇವಲ 2.50 ಪೌಂಡ್ (252 ರೂಪಾಯಿ) ಇದ್ದ ಠೇವಣಿ ಹಣ 250 ಪೌಂಡ್ (25200 ರೂಪಾಯಿ) ಆಗಿ ಬದಲಾಗಿರುವುದನ್ನು ಕಂಡು ಅಚ್ಚರಿಪಟ್ಟಿದ್ದಾರೆ.
74 ವರ್ಷದ ಮಹಿಳೆ ಕರೋಲ್ ಆಲಿಸನ್ ( Carol Allison) ತನ್ನ ಆರನೇ ವಯಸ್ಸಿನಲ್ಲಿ ಅಜ್ಜಿಯೊಂದಿಗೆ ವಾಸ ಮಾಡುತ್ತಿದ್ದರು. ಈ ವೇಳೆ ಪ್ರತಿವಾರ ತಮ್ಮ ಬ್ಯಾಂಕ್ ಖಾತೆಗೆ ಶಿಲ್ಲಿಂಗ್ (ಈಗ ಒಂದು ಪೆನ್ಸ್ ಮೌಲ್ಯ) ಹಣವನ್ನು ಜಮಾ ಮಾಡುತ್ತಿದ್ದರು. ಟ್ರಸ್ಟೀ ಸೇವಿಂಗ್ಸ್ ಬ್ಯಾಂಕ್ ನಲ್ಲಿ ಈ ಪಾಕೆಟ್ ಮಣಿಯನ್ನು ಇಡಲಾಗಿತ್ತು. ನಂತರ ಈ ಬ್ಯಾಂಕ್ ಟಿಎಸ್ ಬಿ (TSB) ಆಗಿ ಬದಲಾಗಿತ್ತು. ಆದರೆ, ನಂತರ ಈ ಬ್ಯಾಂಕ್ ನ ಪಾಸ್ ಬುಕ್ ಕಳೆದುಹೋಗಿದ್ದು ಮಾತ್ರವಲ್ಲ, ಬ್ಯಾಂಕ್ ನಲ್ಲಿ ತಮ್ಮದೊಂದು ಖಾತೆ ಇದೇ ಎನ್ನುವುದನ್ನೇ ಮರೆತಿದ್ದರು. ಅದಾದ ಆರು ದಶಕಗಳ ಬಳಿಕ, ತಮ್ಮ ಮನೆಯನ್ನು ಸ್ವಚ್ಛಗೊಳಿಸುವ ವೇಳೆ ಮರೆತುಹೋದ ಖಾತೆಯ ಬ್ಯಾಂಕ್ ಪಾಸ್ ಬುಕ್ ಸಿಕ್ಕಿತ್ತು. ಇದರಿಂದ ಕುತೂಹಲಗೊಂಡಿದ್ದ ಆಲಿಸನ್, ಟಿಎಸ್ ಬಿ ಬ್ಯಾಂಕ್ ನಲ್ಲಿ ಈ ಬಗ್ಗೆ ವಿಚಾರಿಸಿದ್ದರು. ಆಗ ಬ್ಯಾಂಕ್ ಅಧಿಕಾರಿಗಳು ಹೇಳಿದ ವಿಚಾರ ಅವರಿಗೆ ಅಚ್ಚರಿ ತಂದಿದೆ. ಅವರು ಠೇವಣಿ ಇಟ್ಟಿದ್ದ 252 ರೂಪಾಯಿ, ಈಗ 25,200 ರೂಪಾಯಿ ಮೌಲ್ಯದ್ದಾಗಿತ್ತು ಎಂದು ಬ್ಯಾಂಕ್ ನವರು ತಿಳಿಸಿದ್ದಾರೆ.
ಇಂಗ್ಲೆಂಡ್ ನಲ್ಲಿ ಇರುವ ನಿಯಮದ ಪ್ರಕಾರ, 15 ವರ್ಷಗಳ ಕಾಲ ಬ್ಯಾಂಕ್ ಖಾತೆಯನ್ನು ಬಳಸದೇ ಇದ್ದಾಗ, ಖಾತೆಯಲ್ಲಿರುವ ಠೇವಣಿ ಹಣವನ್ನು ರಿಕ್ಲೈಮ್ ಫಂಡ್ ಗೆ ಕಳುಹಿಸಲಾಗುತ್ತದೆ. ಇಂಗ್ಲೆಂಡ್ ನಲ್ಲಿ ಸುಮಾರು 35 ಬ್ಯಾಂಕ್‌ಗಳು ಮತ್ತು ಸಂಘಗಳು ರಿಕ್ಲೈಮ್ ಫಂಡ್‌ಗೆ ಸಹಿ ಹಾಕಿವೆ.
Afghan slams Pak ಕಳಪೆ ಗೋಧಿ ಕಳುಹಿಸಿದ ಪಾಕಿಸ್ತಾನಕ್ಕೆ ಆಫ್ಘಾನ್ ನಾಯಕರ ಮಂಗಳಾರತಿ, ಭಾರತಕ್ಕೆ ಶಹಬ್ಬಾಸ್!
ಇದರಿಂದಾಗಿ ಕರೋಲ್ ಆಲಿಸನ್, ರಿಕ್ಲೈಮ್ ಫಂಡ್ ಮೂಲಕ ತಮ್ಮ ಖಾತೆಯಲ್ಲಿರುವ ಹಣವನ್ನು ಪಡೆಯಬಹುದಾಗಿದೆ. ನಿಷ್ಕ್ರಿಯ ಖಾತೆಗಳಿಂದ ಇದು 1.4 ಬಿಲಿಯನ್ ಪೌಂಡ್ ಗಿಂತ ಹೆಚ್ಚಿನ ಹಣ ರಿಕ್ಲೈಮ್ ಫಂಡ್ ನಲ್ಲಿದೆ. ಇದರಲ್ಲಿ ಕೇವಲ 100,000 ಪೌಂಡ್ ಅನ್ನು ಮಾತ್ರ ಹಿಂಪಡೆಯಲಾಗಿದೆ. "ಬ್ಯಾಂಕ್‌ನಲ್ಲಿರುವ ದೊಡ್ಡ ಹೊಳೆಯುವ ಮರದ ಕೌಂಟರ್ ಮತ್ತು ಅಜ್ಜಿ ನಮ್ಮನ್ನು ಟೆಲ್ಲರ್‌ಗೆ ಪರಿಚಯಿಸಿದ್ದು ನನಗೆ ಈಗಲೂ ನೆನಪಿದೆ. ಅವರು ಖಾತೆಯ ಪುಸ್ತಕವನ್ನು ಕೈಯಿಂದ ಬರೆಯುತ್ತಿದ್ದರು ಮತ್ತು ನಂತರ ನಾವು ಈ ಪುಸ್ತಕಗಳನ್ನು ಅಜ್ಜಿಗೆ ನೀಡುತ್ತಿದ್ದೆವು' ಎಂದು ಕರೋಲ್ ಆಲಿಸನ್ ಹೇಳಿದ್ದಾರೆ. 1969 ರಲ್ಲಿ ತನ್ನ ಅಜ್ಜಿ ತೀರಿಕೊಂಡಾಗ ಕರೋಲ್ ಬ್ಯಾಂಕ್ ಪುಸ್ತಕವನ್ನು ಸ್ವೀಕರಿಸಿದ್ದರಾದರೂ, ಬಳಿಕ ಅದನ್ನು ಕಳೆದುಕೊಂಡಿದ್ದರು.
ಇದೇನಿದು ಆಶ್ಚರ್ಯ... 10 ವರ್ಷದ ಹಿಂದೆ ಕಳೆದುಹೋಗಿತ್ತು ಐಪೋನ್, ಸಿಕ್ಕಿದ್ದು ಟಾಯ್ಲೆಟ್ ನಲ್ಲಿ!
ಇಂಥದ್ದೆ ಇನ್ನೊಂದು ಪ್ರಸಂಗದಲ್ಲಿ ಬರೋಬ್ಬರಿ 10 ವರ್ಷದ ಹಿಂದೆ ಮಹಿಳೆಯೊಬ್ಬಳು ಕಳೆದುಕೊಂಡಿದ್ದ ಐಫೋನ್ ಅನ್ನು ಟಾಯ್ಲೆಟ್ ನಲ್ಲಿ ಪತ್ತೆಯಾಗಿತ್ತು. ಪತಿ ಹಾಗೂ ಪತ್ನಿ ಬಾಥ್ ರೂಮ್ ನಲ್ಲಿ ವಿಚಿತ್ರವಾದ ಶಬ್ದ ಪ್ರತಿ ಬಾರಿಯೂ ಕೇಳಿ ಬರುತ್ತದೆ ಎನ್ನುವುದರಿಂದ ಆರಂಭವಾದ ಇವರ ಶೋಧ ಕಾರ್ಯ ಕೊನೆಗೆ ಐಫೋನ್ ಪತ್ತೆಯಾಗುವುದರೊಂದಿಗೆ ಮುಕ್ತಾಯವಾಗಿದೆ. ಇಂಥದ್ದೊಂದು ಘಟನೆ ನಡೆದಿರುವುದು ಅಮೆರಿಕದ (US) ಮೇರಿಲ್ಯಾಂಡ್ ನಲ್ಲಿ (Maryland). ಬೆಕಿ ಬೆಕ್ ಮನ್ (Becki Beckmann) ಎನ್ನುವ ಮಹಿಳೆ ಹಲವು ವರ್ಷಗಳಿಂದ ಮೇರಿ ಲ್ಯಾಂಡ್ ನಲ್ಲಿ ವಾಸವಾಗಿದ್ದು, ಐಫೋನ್ (iPhone) ಸಿಕ್ಕ ಕಥೆಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 2012ರ ಹ್ಯಾಲೋವಿನ್ (Halloween night) ಸಂಭ್ರಮದ ರಾತ್ರಿಯಂದು ತನ್ನ ನೆಚ್ಚಿನ ಐಫೋನ್ ಅನ್ನು ಈಕೆ ಕಳೆದುಕೊಂಡಿದ್ದರು. ಬಳಿಕ ಅದು ಟಾಯ್ಲೆಟ್ ನಲ್ಲಿ ಪತ್ತೆಯಾಗಿತ್ತು.