Russia Ukraine War ರಷ್ಯಾ ಸೇನೆಗೆ ಹಿನ್ನಡೆ ತಂದ ಮೇಡ್ ಇನ್ ಚೀನಾ ಟೈರ್!

Suvarna News   | Asianet News
Published : Mar 05, 2022, 08:11 PM IST
Russia Ukraine War ರಷ್ಯಾ ಸೇನೆಗೆ ಹಿನ್ನಡೆ ತಂದ ಮೇಡ್ ಇನ್ ಚೀನಾ ಟೈರ್!

ಸಾರಾಂಶ

ಉಕ್ರೇನ್ ನಲ್ಲಿ ನಿಧಾನವಾದ ರಷ್ಯಾ ಸೇನೆಯ 40 ಮೈಲಿ ಬೆಂಗಾವಲು ಪಡೆ ಚೀನಾದ ಕಳಪೆ ಗುಣಮಟ್ಟದ ಟೈರ್ ನಿಂದಾ ಉಕ್ರೇನ್ ನೆಲದಲ್ಲಿ ರಷ್ಯಾಗೆ ಸಂಕಷ್ಟ ಉಕ್ರೇನ್ ನ ಮೃದು ಮಣ್ಣಿನಲ್ಲಿ ಹುದುಗಿದ ರಷ್ಯಾದ ಸೇನೆಯ ವಾಹನಗಳು  

ಕೀವ್ (ಮಾ.5): ಉಕ್ರೇನ್ (Ukraine) ದೇಶದ ಮೇಲೆ ರಷ್ಯಾದ (Russia) ಆಕ್ರಮಣ 10ನೇ ದಿನದಲ್ಲಿ ಸ್ವಲ್ಪ ನಿಧಾನವಾಗಿದೆ. 2ನೇ ಸುತ್ತಿನ ಮಾತುಕತೆಯ ವೇಳೆ ನಡೆದ ಒಪ್ಪಂದ ಅನ್ವಯ, ರಷ್ಯಾ ಶನಿವಾರ ಕೆಲ ಗಂಟೆಗಳ ಕಾಲ ಉಕ್ರೇನ್ ನ ಪ್ರಮುಖ ನಗರಗಳಲ್ಲಿ ಕದನ ವಿರಾಮವನ್ನು ಘೋಷಣೆ ಮಾಡಿತ್ತು. ಇದರಿಂದಾಗಿ, ಉಕ್ರೇನ್ ನಗರಗಳಾದ ಮರಿಯುಪೋಲ್ (Mariupol) ಮತ್ತು ವೊಲ್ನೋವಾಖಾದಲ್ಲಿ (Volnovakha)ಯುದ್ಧಭೀತಿಯಿಂದ ಬಂಕರ್ ಗಳಲ್ಲಿ ನೆಲೆಸಿರುವ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಅವಕಾಶ ನೀಡಲಾಗಿದೆ.

ಇವೆಲ್ಲದರ ನಡುವೆ ಆಕ್ರಮಣದ ಅರಂಭದಲ್ಲಿ ರಷ್ಯಾ ಸೇನೆಯ 64 ಕಿಲೋಮೀಟರ್ ಉದ್ದದ ಸೇನಾ ಬೆಂಗಾವಲು ಪಡೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಉಕ್ರೇನ್ ನ ರಾಜಧಾನಿ ಕೀವ್ ನ ಕಡೆ ಹೊರಟಿದ್ದ ಈ ಬೆಂಗಾವಲು ಪಡೆ ಈವರೆಗೂ ರಾಜಧಾನಿ ತಲುಪಲು ಸಾಧ್ಯವಾಗಿಲ್ಲ. ಈಗಲೂ ರಾಜಧಾನಿಯಿಂದ 32 ಕಿಲೋಮೀಟರ್ ದೂರದಲ್ಲಿ, ಸೇನಾ ವಾಹನಗಳಿಂದಲೇ ತುಂಬಿರುವ ಬೆಂಗಾವಲು ಪಡೆ ನಿಂತುಕೊಂಡಿದೆ. ಆದರೆ, ಅದಕ್ಕೆ ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ!

ಬ್ರಿಟಿಷ್ ಡಿಫೆನ್ಸ್ ಮಿನಿಸ್ಟ್ರೀ  (ritish Defense Ministry)ಪ್ರಕಾರ, ರಷ್ಯಾದ ದೊಡ್ಡ ಬೆಂಗಾವಲು ಪಡೆ (Russian military convoy) ಉಕ್ರೇನ್ ಸೇನೆಯ ತಿರುಗೇಟು, ತಾಂತ್ರಿಕ ಕೊರತೆ ಹಾಗೂ ಭಾರಿ ಸಂಖ್ಯೆಯ ಸೇನಾ ಸಿಬ್ಬಂದಿಗಳಿಂದ ಹಿನ್ನಡೆ ಕಂಡಿದೆ. ಅದರಲ್ಲೂ ಕಳೆದ ಮೂರು ದಿನಗಳಲ್ಲಿ ಕೆಲವೇ ಕಿಲೋಮೀಟರ್ ದೂರವನ್ನು ಮಾತ್ರವೇ ಪ್ರಯಾಣಿಸಲು ಸಾಧ್ಯವಾಗಿದೆ. ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ಪೆಂಟಗನ್ ನ ವಕ್ತಾರ ಜಾನ್ ಕಿರ್ಬಿ (John Kirby) ಕೂಡ ಇದನ್ನೇ ಹೇಳಿದ್ದು, 40 ಮೈಲಿ ಉದ್ದದ ರಷ್ಯಾ  ಸೇನೆಯ ದೊಡ್ಡ ಬೆಂಗಾವಲು ಪಡೆ, ಕಳೆದ 24-36 ಗಂಟೆಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಂಡಿಲ್ಲ. ಬಹುಶಃ ರಷ್ಯಾ ಸೇನೆ ಮರುಹೊಂದಾಣಿಕೆ ಆಗುತ್ತಿರಬಹುದು ಅಥವಾ ಶಸ್ತ್ರಾಸ್ತ್ರಗಳ ಪರಿಶೀಲನೆಯಲ್ಲಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಲಾಜಿಸ್ಟಿಕ್ಸ್, ಯುದ್ಧದ ಸವಾಲುಗಳು ಮತ್ತು ಉಕ್ರೇನ್‌ನಿಂದ ಬಲವಾದ ಪ್ರತಿರೋಧದಿಂದಾಗಿ ಬೆಂಗಾವಲು ಪಡೆ ಸ್ಥಗಿತಗೊಂಡಿರಬಹುದು ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.


ಪೆಂಟಗಾನ್‌ನ ನಿವೃತ್ತ ಸಿಬ್ಬಂದಿ ತಜ್ಞ ಮತ್ತು ಮಿಲಿಟರಿ ಇತಿಹಾಸ ಬ್ಲಾಗರ್ ಟ್ರೆಂಟ್ ಟೆಲೆಂಕೊ (Trent Telenko), ಉಕ್ರೇನ್ ನಲ್ಲಿ ರಷ್ಯಾ ಬೆಂಗಾವಲು ಪಡೆಯ ಹಿನ್ನಡೆಗೆ ಚೀನಾ ತಯಾರಿಸಿದ ಕಳಪೆ ಟೈರ್ ಗಳನ್ನು ದೂಷಿಸಿದ್ದಾರೆ.  ಟ್ರೆಂಟ್ ಟೆಲೆಂಕೊ ಸುಮಾರು 10 ವರ್ಷಗಳ ಕಾಲ ಅಮೆರಿಕ ಸೇನೆಗೆ ವಾಹನ ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ರಷ್ಯಾದ ಈ 64 ಕಿ.ಮೀ ಉದ್ದದ ಬೆಂಗಾವಲು ಪಡೆಯ ಹಿನ್ನಡೆಗೆ ಪ್ರಮುಖ ಕಾರಣ ಚೀನಾದ ಅಗ್ಗದ ಟೈರ್‌ಗಳು ( China cheap tires) ಎಂದಿದ್ದಾರೆ.

Russia Ukraine Crisis:ಗೋಧಿ ಬೆಲೆ ಶೇ.55 ಏರಿಕೆ; ಜಾಗತಿಕ ಆಹಾರ ಧಾನ್ಯಗಳ ಪೂರೈಕೆ ಮೇಲೆ ಯುದ್ಧದ ಪರಿಣಾಮವೇನು?
ಅದರೊಂದಿಗೆ ರಷ್ಯಾ ಸೇನೆಯ ಪ್ಯಾಂಟ್ಸಿರ್-ಎಸ್1 ಕ್ಷಿಪಣಿ ವ್ಯವಸ್ಥೆಯ ಕೆಸರಿನಲ್ಲಿ ಮುಳುಗಿರುವ ಚಿತ್ರವನ್ನು ಹಂಚಿಕೊಂಡಿದ್ದು, ಚೀನಾದ ಅಗ್ಗದ ಟೈರುಗಳು ಮೃದುವಾದ ನೆಲದ ಮೇಲೆ ಮುಂದೆ ಸಾಗಲು ವಿಫಲವಾಗಿದೆ ಎನ್ನುವುದು ಇದರಿಂದ ಸಾಬೀತಾಗಿದೆ ಎಂದಿದ್ದಾರೆ.  ಮಿಲಿಟರಿ ಟ್ರಕ್ ಟೈರ್‌ಗಳನ್ನು ತಿಂಗಳುಗಟ್ಟಲೆ ಒಂದೇ ಸ್ಥಳದಲ್ಲಿ ಬಿಟ್ಟಾಗ, ಸೂರ್ಯನ ಬೆಳಕು ಮತ್ತು ತೇವಾಂಶದಿಂದಾಗಿ ಅವುಗಳ ವಿನ್ಯಾಸವು ದುರ್ಬಲವಾಗುತ್ತದೆ ಎಂದು ಟ್ರೆಂಟ್ ಟೆಲೆಂಕೊ ತಿಳಿಸಿದ್ದಾರೆ.

Ukraine Crisis ಖಾರ್ಕೀವ್‌ನಿಂದ ಎಲ್ಲಾ ಭಾರತೀಯರ ರಕ್ಷಣೆ, ಸುಮಿ ಕಾರ್ಯಾಚರಣೆ ಅತ್ಯಂತ ಸವಾಲು ಎಂದ MEA!
ಅಮೆರಿಕದ ಅರ್ಥಶಾಸ್ತ್ರಜ್ಞ, ಸರ್ಕಾರಿ ಸಲಹೆಗಾರ ಹಾಗೂ ಟೈರ್ ಪರಿಣತರಲ್ಲಿ ಒಬ್ಬರಾದ ಕಾರ್ಲ್ ಮುತ್ (Karl Muth) ಕೂಡ ಟ್ರೆಂಟ್ ಟೆಲೆಂಕೋ ಅವರ ಮಾತನ್ನು ಒಪ್ಪಿಕೊಂಡಿದ್ದಾರೆ. ಚೀನಾದ ಟೈರ್ ಗಳು ವಿಶ್ವದಲ್ಲಿಯೇ ಅತ್ಯಂತ ಕುಖ್ಯಾತಿ ಪಡೆದುಕೊಂಡಿವೆ. ಚೀನಾದ ಟೈರ್‌ಗಳ ಗುಣಮಟ್ಟ ತುಂಬಾ ಕಳಪೆ. ಅವು ಬೇಗನೆ ಸವೆಯುತ್ತವೆ. ಅವುಗಳ ಮೇಲೆ ಪರಿಸರದ ಬದಲಾವಣೆಗಳು ಬೇಗ ಆಗುತ್ತದೆ. ದೀರ್ಘಕಾಲದವರೆಗೆ ಮಣ್ಣಿಗೆ ಒಡ್ಡಿಕೊಳ್ಳುವುದರಿಂದ, ಚೀನಾದಲ್ಲಿ ತಯಾರಿಸಿದ ಟೈರುಗಳು ಅತಿಯಾದ ಒತ್ತಡದಿಂದ ಒಡೆದುಹೋಗುವ ಸಾಧ್ಯತೆಯಿದೆ ಮತ್ತು ಜವುಗು ನೆಲದ ಮೇಲೆ ಬೇಗನೆ ಹುದುಗುತ್ತದೆ. ಈ ಕಾರಣದಿಂದಾಗಿ ರಷ್ಯಾದ ಸೇನೆಯು ತನ್ನ ಬೃಹತ್ ಬೆಂಗಾವಲು ಪಡೆಯನ್ನು ಮುನ್ನಡೆಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!