Russia Ukraine War "ರಷ್ಯಾ ಮೇಲಿನ ಯುದ್ಧ ಎಂದು ಪರಿಗಣಿಸುತ್ತೇವೆ", ಬಲಾಢ್ಯ ರಾಷ್ಟ್ರಗಳಿಗೆ ಪುಟಿನ್ ವಾರ್ನಿಂಗ್!

By Suvarna News  |  First Published Mar 5, 2022, 10:28 PM IST

ಬಲಾಢ್ಯ ರಾಷ್ಟ್ರಗಳಿಗೆ ನೇರ ಎಚ್ಚರಿಕೆ ನೀಡಿದ ರಷ್ಯಾ ಅಧ್ಯಕ್ಷ

ಉಕ್ರೇನ್ ಹಾರಾಟ ನಿಷೇಧ ವಲಯ ಎಂದು ಘೋಷಣೆ ಮಾಡದಂತೆ ಎಚ್ಚರಿಕೆ

ಇದನ್ನು ರಷ್ಯಾ ವಿರುದ್ಧದ ಯುದ್ಧ ಎಂದು ಪರಿಗಣಿಸುತ್ತೇವೆ ಎಂದ ಪುಟಿನ್


ಮಾಸ್ಕೋ (ಮಾ. 5): ಉಕ್ರೇನ್‌ನಲ್ಲಿ (Ukraine) ದಿನೇ ದಿನೇ ಉಲ್ಭಣಗೊಳ್ಳುತ್ತಿರುವ ಯುದ್ಧ ಸನ್ನಿವೇಶ ಸತತ 10ನೇ ದಿನಕ್ಕೂ ಕಾಲಿಟ್ಟಿದೆ. ಶನಿವಾರ ಕೆಲ ಹೊತ್ತು ಒಪ್ಪಂದದ ಅನ್ವಯ ಕದನ ವಿರಾಮ ಘೋಷಣೆ ಮಾಡಿದ್ದ ಪುಟಿನ್, ಕದನ ವಿರಾಮದ ಸಮಯ ಮುಕ್ತಾಯವಾದಂತೆ ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಮೇಲಿನ ಹಾರಾಟ ನಿಷೇಧ ವಲಯ (No-Fly Zone) ಎಂದು ಹೇರಲು ಪ್ರಯತ್ನ ಮಾಡುವ ಯಾವುದೇ ದೇಶವನ್ನು ಈ ಸಂಘರ್ಷದಲ್ಲಿ ಪಾಲ್ಗೊಂಡಿರುವ ಪಕ್ಷಗಳು ಎಂದು ರಷ್ಯಾ ಪರಿಗಣನೆ ಮಾಡುತ್ತೇವೆ. "ಈ ದಿಕ್ಕಿನಲ್ಲಿ ನಡೆಯುವ ಬೆಳವಣಿಗೆಯನ್ನು ರಷ್ಯಾ ವಿರುದ್ಧ ಈ ಯುದ್ಧದಲ್ಲಿ ಭಾಗವಹಿಸಿರುವ ದೇಶ ಎಂದು ಪರಿಗಣನೆ ಮಾಡುತ್ತೇವೆ' ಎಂದು ಪುಟಿನ್ ( Russian President Vladimir Putin) ಎಚ್ಚರಿಕೆ ನೀಡಿದ್ದಾರೆ.

ಹಾರಾಟ-ನಿಷೇಧ ವಲಯವನ್ನು ಹೇರಿಕೆ ಮಾಡುವುದು "ಯುರೋಪ್‌ಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೃಹತ್ ಮತ್ತು ದುರಂತದ ಪರಿಣಾಮಗಳನ್ನು ಉಂಟುಮಾಡುತ್ತದೆ" ಎಂದು ಪುಟಿನ್ ವಾರ್ನಿಂಗ್ ನೀಡಿದ್ದಾರೆ. ಉಕ್ರೇನ್ ನೊಂದಿಗೆ ಯುದ್ಧದ ಸನ್ನಿವೇಶ ಉಲ್ಭಣವಾಗುತ್ತಿದ್ದು ಗಡಿಯಲ್ಲಿ ಎಸ್-400 ಕ್ಷಿಪಣಿಯನ್ನು ರಷ್ಯಾ (Russia) ನಿಯೋಜನೆ ಮಾಡಿದೆ. ಇದರಿಂದಾಗಿ ಬಹುಶಃ 2ನೇ ವಾರದಲ್ಲಿ ರಷ್ಯಾದಲ್ಲಿ ಸಮರ ಕಾನೂನು (martial law) ಜಾರಿಯಾಗಬಹುದೇ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಅವರು, ಸದ್ಯಕ್ಕೆ ಅಂಥ ಯಾವುದೇ ಗುರಿ ಮಾಸ್ಕೋಗಿಲ್ಲ. ಉಕ್ರೇನ್ ಮೇಲಿನ ಯುದ್ಧದ ಕಾರಣಕ್ಕೆ ರಷ್ಯಾದಲ್ಲೂ ಪ್ರತಿಭಟನೆಗಳು ಆಗುತ್ತಿದ್ದು, ಮುಂದಿನ ದಿನಗಳಲ್ಲಿ ರಷ್ಯಾದಲ್ಲಿ ಸಮರ ಕಾನೂನು (ಮಾರ್ಷಲ್ ಲಾ) ಜಾರಿಯಾಗಬಹುದು ಎಂದು ವರದಿಯಾಗಿತ್ತು. ಆದರೆ, ಕ್ರೆಮ್ಲಿನ್ ಗೆ ಸದ್ಯ ಅಂಥ ಯಾವುದೇ ಯೋಜನೆಗಳಿಲ್ಲ ಎಂದು ತಿಳಿಸಿದ್ದಾರೆ.

"ಈ ಯುದ್ಧದಲ್ಲಿ ಉಕ್ರೇನ್ ಹೊರತಾದ ದೇಶದಿಂದ ಪ್ರತಿರೋಧ ಇದ್ದ ಸಂದರ್ಭಗಳಲ್ಲಿ ಮಾತ್ರ ಸಮರ ಕಾನೂನನ್ನು ಪರಿಚಯಿಸುತ್ತೇವೆ.ಈ ಸಮಯದಲ್ಲಿ ನಾವು ಅದನ್ನು ಅನುಭವಿಸುತ್ತಿಲ್ಲ ಮತ್ತು ನಾವು ಅದನ್ನು ಅನುಭವಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಪುಟಿನ್ ರಷ್ಯಾದ ಪ್ರಮುಖ ವಿಮಾನಯಾನ ಕಂಪನಿ ಏರೋಫ್ಲೋಟ್‌ನ ಉದ್ಯೋಗಿಗಳೊಂದಿಗೆ ನಡೆದ ಸಭೆಯಲ್ಲಿ ಹೇಳಿದರು.

Russian President Vladimir Putin has said that any country that sought to impose a no-fly zone over Ukraine would be considered by Moscow to have entered the armed conflict, reports AFP

— ANI (@ANI)


ಸ್ಪುಟ್ನಿಕ್ ಸುದ್ದಿ ಸಂಸ್ಥೆಯ ಪ್ರಕಾರ, ಉಕ್ರೇನ್ ಸಂಘರ್ಷದಲ್ಲಿ ನ್ಯಾಟೋ ಭಾಗಿಯಾಗಿದೆ ಎಂದು ಯುಕೆ ಮಂತ್ರಿಯೊಬ್ಬರು ಹೇಳಿದ ನಂತರ ರಷ್ಯಾದ ಪ್ರತಿಬಂಧಕ ಪಡೆಗಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಲಾಗಿದೆ ಎಂದು ಪುಟಿನ್ ಹೇಳಿದರು.

ಉಕ್ರೇನ್​​ನಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್
ಮಾರ್ಚ್ 7 ರಂದು ಮೂರನೇ ಸುತ್ತಿನ ಸಭೆ: ರಷ್ಯಾ ಹಾಗೂ ಉಕ್ರೇನ್ ನಡುವೆ ಮೂರನೇ ಸುತ್ತಿನ ಸಭೆ (Third round of talks ) ಮಾರ್ಚ್ 7 ರಂದು ನಡೆಯಲಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ ಈ ನಡುವೆ ಉಕ್ರೇನ್ ನ ಸೇನಾಪಡೆಗಳು ಮೈಕೋಲೈವ್ (Mykolaiv) ಪ್ರದೇಶದ ಮೇಲೆ ನಿಯಂತ್ರಣ ಪಡೆದುಕೊಂಡಿದ್ದು, ರಷ್ಯಾದ ಸೇನಾಪಡೆಗಳ ಯುದ್ದೋಪಕರಣಗಳನ್ನು ವಶಕ್ಕೆ ಪಡೆದುಕೊಂಡಿವೆ ಎಂದು ವರದಿಯಾಗಿದೆ. ಮೈಕೊಲೈವ್ ಒಬ್ಲಾಸ್ಟ್ ಗವರ್ನರ್ ವಿಟಾಲಿ ಕಿಮ್ (Mykolaiv Oblast Governor Vitaly Kim) ಈ ಕುರಿತಾಗಿ ಮಾಹಿತಿ ನೀಡಿದ್ದು," ಈ ಪ್ರದೇಶದಲ್ಲಿ ನಾಗರೀಕರ ಸಾವುನೋವುಗಳಾಗಿವೆ. ಆದರೆ, ಅವರ ಸಂಖ್ಯೆ ಎಷ್ಟು ಎಂದು ಇನ್ನೂ ತಿಳಿದಿಲ್ಲ. ಮೈಕೊಲೈವ್ ದಕ್ಷಿಣ ಉಕ್ರೇನ್ ನ ಪ್ರಾದೇಶಿಕ ರಾಜಧಾನಿಯಾಗಿದೆ' ಎಂದು ತಿಳಿಸಿದ್ದಾರೆ.

PM Modi Meeting ಉಕ್ರೇನ್ ಪರಿಸ್ಥಿತಿ, ಆಪರೇಶನ್ ಗಂಗಾ ಕಾರ್ಯಾಚರಣೆ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!
ದಾಳಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಖಂಡನೆ:
ಉಕ್ರೇನ್ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ರಷ್ಯಾ ದಾಳಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಖಂಡನೆ ಮಾಡಿದೆ. ಈ ಕುರಿತಂತೆ ಅಧಿಕೃತ ವರದಿ ಪರಿಶೀಲನೆ ಮಾಡಿ ಸುದ್ದಿ ಪ್ರಕಟ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ಸೌಲಭ್ಯಗಳ ಮೇಲಿನ ದಾಳಿಯಿಂದ 6 ಸಾವುಗಳಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಬಲವಾಗಿ ಖಂಡಿಸಿದೆ. ಆರೋಗ್ಯ ಸೌಲಭ್ಯಗಳು, ಸಿಬ್ಬಂದಿ ಮತ್ತು ರೋಗಿಗಳು ದಾಳಿಯಲ್ಲಿ ರಷ್ಯಾದ ಗುರಿ ಆಗಿರುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದೆ.

Tap to resize

Latest Videos

click me!