ರಿಪೇರಿಯ ಯತ್ನ ವಿಫಲ : ಪಾಕ್‌ನಿಂದಲೇ ಮುರೀದ್ ಏರ್‌ಬೇಸ್‌ ಪೂರ್ಣ ಧ್ವಂಸ

Kannadaprabha News   | Kannada Prabha
Published : Mar 11, 2026, 03:16 AM IST
 Murid airbase

ಸಾರಾಂಶ

ಕಳೆದ ಮೇ 10ರಂದು ನಡೆದ ಆಪರೇಷನ್‌ ಸಿಂದೂರದ ವೇಳೆ ಭಾರತೀಯ ವಾಯುಪಡೆಯ ನಿಖರ ದಾಳಿಗೆ ತುತ್ತಾಗಿ ಧ್ವಂಸವಾಗಿದ್ದ ಮುರೀದ್‌ ವಾಯುನೆಲೆಯ ರಿಪೇರಿಗೆ ಮುಂದಾಗಿದ್ದ ಪಾಕಿಸ್ತಾನದ ಸೇನೆ, ಆ ಯತ್ನದಲ್ಲಿ ವಿಫಲವಾಗಿದೆ. ಹೀಗಾಗಿ ಈವರೆಗೆ ಪುನರ್‌ರ್ಮಿಸಿದ್ದನ್ನೂ ಕೆಡವಿಹಾಕಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ.

ನವದೆಹಲಿ: ಕಳೆದ ಮೇ 10ರಂದು ನಡೆದ ಆಪರೇಷನ್‌ ಸಿಂದೂರದ ವೇಳೆ ಭಾರತೀಯ ವಾಯುಪಡೆಯ ನಿಖರ ದಾಳಿಗೆ ತುತ್ತಾಗಿ ಧ್ವಂಸವಾಗಿದ್ದ ಮುರೀದ್‌ ವಾಯುನೆಲೆಯ ರಿಪೇರಿಗೆ ಮುಂದಾಗಿದ್ದ ಪಾಕಿಸ್ತಾನದ ಸೇನೆ, ಆ ಯತ್ನದಲ್ಲಿ ವಿಫಲವಾಗಿದೆ.

ಪುನರ್‌ರ್ಮಿಸಿದ್ದನ್ನೂ ಕೆಡವಿಹಾಕಿರುವುದು ಉಪಗ್ರಹ ಚಿತ್ರ

ಹೀಗಾಗಿ ಈವರೆಗೆ ಪುನರ್‌ರ್ಮಿಸಿದ್ದನ್ನೂ ಕೆಡವಿಹಾಕಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ. ಮಾನವರಹಿತ ವೈಮಾನಿಕ ವಾಹನಗಳನ್ನು(ಯುಎವಿ) ನಿಯಂತ್ರಿಸುವ ಕೇಂದ್ರವಾಗಿದ್ದ ಈ ಕಟ್ಟಡ ಛಾವಣಿ ಛಿದ್ರವಾಗಿ 3 ಮೀ. ಕುಳಿ ನಿರ್ಮಾಣವಾಗಿತ್ತು.

ಸ್ಫೋಟಕವು ಒಳನುಗ್ಗಿ ಸ್ಫೋಟಿಸಿ ಎಲ್ಲವನ್ನೂ ನಾಶ

ಸ್ಫೋಟಕವು ಒಳನುಗ್ಗಿ ಸ್ಫೋಟಿಸಿ ಎಲ್ಲವನ್ನೂ ನಾಶ ಮಾಡಿದ್ದ ಶಂಕೆಯೂ ಇತ್ತು. ಈ ಘಟನೆಯ 3 ವಾರಗಳ ಬಳಿಕ ಪಾಕ್ ಸೇನೆ ಆ ಕಟ್ಟಡವನ್ನು ಸಂಪೂರ್ಣವಾಗಿ ಟಾರ್ಪಲಿನ್‌ನಿಂದ ಮುಚ್ಚಿ ಪುನರ್‌ನಿರ್ಮಾಣ ಆರಂಭಿಸಿತ್ತು ಎಂಬುದು ಸ್ಯಾಟಲೈಟ್‌ ಚಿತ್ರಗಳಲ್ಲಿ ಕಂಡಿತ್ತು. ಆದರೆ ಫೆ.28ರ ಚಿತ್ರದಲ್ಲಿ ಆ ಪರದೆಯನ್ನು ಸರಿಸಲಾಗಿದ್ದು, ನಿರ್ಮಾಣ ಕಾರ್ಯಗಳನ್ನು ನಿಲ್ಲಿಸಲಾಗಿದೆ. ಅಂತೆಯೇ, ಇಷ್ಟು ತಿಂಗಳುಗಳ ಕಾಲ ಕಟ್ಟಿದ್ದನ್ನು ಕೂಡ ನೆಲಸಮಗೊಳಿಸಿರುವುದನ್ನು ಕಾಣಬಹುದು.

ಇದರೊಂದಿಗೆ, ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಹಾಳಾದ ನೆಲೆಗಳ ಮರುನಿರ್ಮಾಣಕ್ಕೆ ಮುಂದಾಗಿದ್ದ ಪಾಕ್‌ ಕೊನೆಗೂ ಸೋಲೊಪ್ಪಿಕೊಂಡಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಪ್ಲೀಸ್‌ ನಮಗೆ ಡೀಸೆಲ್‌ ಕೊಡಿ..' ಭಾರತದ ಮುಂದೆ ಮಂಡಿಯೂರಿ ಮನವಿ ಇಟ್ಟ ಬಾಂಗ್ಲಾದೇಶ!
ಇರಾನ್ ಮೇಲೆ ಅಮೆರಿಕಾ ಇಸ್ರೇಲ್ ದಾಳಿಯಿಂದ ಜಗತ್ತಿನ ಬೇರೆ ದೇಶಗಳು ಅನುಭವಿಸುತ್ತಿರುವ ಹಾನಿ ಎಷ್ಟು?