ಅಮೆರಿಕಾ-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಕೇವಲ ಯುದ್ಧನಿರತ ದೇಶಗಳಿಗಷ್ಟೇ ಸೀಮಿತವಾಗಿಲ್ಲ. ಈ ಸಂಘರ್ಷದಿಂದಾಗಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿವೆ. ಯಾವ ದೇಶದ ಸಮಸ್ಯೆ ಏನು ಇಲ್ಲಿದೆ ಡಿಟೇಲ್ ಸ್ಟೋರಿ…
ಇಸ್ರೇಲ್ ಇರಾನ್ ಯುದ್ಧದಿಂದ ಯಾವ ದೇಶಕ್ಕೆ ಏನು ಹಾನಿ
ಅಮೆರಿಕಾ ಇಸ್ರೇಲ್ ನಡುವಣ ಯುದ್ಧ 11ನೇ ದಿನವೂ ನಿರಂತರವಾಗಿ ಮುಂದುವರೆದಿದ್ದು, ಈ ಯುದ್ಧದ ಪರಿಣಾಮ ಬರೀ ಇಸ್ರೇಲ್ ಇರಾನ್ ಅಥವಾ ಅಮೆರಿಕಾದ ಮೇಲಾಗುತ್ತಿಲ್ಲ, ವಿಶ್ವದ ಹಲವು ರಾಷ್ಟ್ರಗಳು ಈ ಯುದ್ಧದಿಂದ ಹಾನಿ ಎದುರಿಸುತ್ತಿವೆ. ಹಾಗಿದ್ದರೆ ಈ ಯುದ್ಧದಿಂದ ಯಾವ ದೇಶಕ್ಕೆ ಯಾವ ರೀತಿಯ ಪರಿಣಾಮ ಉಂಟಾಗ್ತಿದೆ ಅಂತ ನೋಡೋಣ...
ಭಾರತ: ಇಸ್ರೇಲ್ ಇರಾನ್ ಯುದ್ಧ ಆರಂಭವಾದ ಕೆಲವೇ ದಿನಕ್ಕೆ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಉಂಟಾಗಿ ಅನೇಕ ಹೊಟೇಲ್‌ಗಳು ಮುಚ್ಚಿರುವುದು ಗೊತ್ತೇ ಇದೆ. ಭಾರತವು ತನ್ನ ಎಲ್‌ಎನ್‌ಜಿಯ ಶೇ. 59 ರಷ್ಟು ಭಾಗವನ್ನು ಕತಾರ್ ಮತ್ತು ಯುಎಇಯಿಂದ ಖರೀದಿಸುತ್ತಿದೆ. ಹೀಗಾಗಿ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯು ಎಲ್‌ಎನ್‌ಜಿಯ ಪೂರೈಕೆಗೆ ಅಡ್ಡಿಯಾಗಿದ್ದು, ಭಾರತದಲ್ಲಿ ಹಣದುಬ್ಬರದ ಅಪಾಯವನ್ನು ಹೆಚ್ಚಿಸಿದೆ. ಈಗಾಗಲೇ ಭಾರತದ ರೂಪಾಯಿ ಮೌಲ್ಯ ಡಾಲರ್ ಮುಂದೆ ಸರ್ವಕಾಲೀಕ ಕುಸಿತ ಕಂಡಿದೆ.
ಪಾಕಿಸ್ತಾನ: ಮೊದಲೇ ರಾಜಕೀಯ ಹಾಗೂ ಆರ್ಥಿಕ ಅಸ್ಥಿರತೆಯಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಈ ಯುದ್ಧದ ಪರಿಣಾಮ ಮತ್ತಷ್ಟು ತೀವ್ರಗೊಂಡಿದ್ದು, ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಒಂದೇ ದಿನ 50ರೂಗೂ ಅಧಿಕ ಏರಿಕೆಯಾಗಿದೆ. ಪಾಕಿಸ್ತಾನವೂ ಕತಾರ್ ಮತ್ತು ಯುಎಇ ಮೇಲೆ ಅವಲಂಬಿತವಾಗಿದ್ದು,ತೀವ್ರ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ. ಹೀಗಾಗಿ ಪಾಕಿಸ್ತಾನವೂ ಮಂತ್ರಿಗಳಿಗೆ ವಿದೇಶ ಪ್ರಯಾಣ ನಿಷೇಧಿಸಿದೆ. ಅಲ್ಲಿ ಶಾಲೆಗಳಿಗೆ ಎರಡು ವಾರಗಳ ಕಾಲ ರಜೆ ನೀಡಲಾಗಿದೆ ಮತ್ತು ಜನರು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ.
ಬಾಂಗ್ಲಾದೇಶ: ಬಾಂಗ್ಲಾದೇಶದ ಸ್ಥಿತಿ ಏನು ಭಿನ್ನವಾಗಿಲ್ಲ, ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ಮಿತಿ ಹೇರಲಾಗಿದೆ, ಇದೇ ಕಾರಣಕ್ಕೆ ಇಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ.
ವಿಯೆಟ್ನಾಂ: ವಿಯೆಟ್ನಾಂನಲ್ಲೂ ಇಂಧನ ಉಳಿಕೆಗಾಗಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ಅಧಿಕಾರಿಗಳು ಕೇಳಿಕೊಂಡಿದ್ದಾರೆ.
ಈಜಿಪ್ಟ್: ಇಲ್ಲೂ ಇಂಧನ ಬೆಲೆಗಳಲ್ಲಿ ಶೇಕಡಾ 30 ರಷ್ಟು ಏರಿಕೆಯಾಗಿದೆ.
ಥೈಲ್ಯಾಂಡ್: ಲಿಫ್ಟ್‌ಗಳ ಬದಲಿಗೆ ಮೆಟ್ಟಿಲುಗಳನ್ನು ಬಳಸಲು ಸೂಚಿಸಲಾಗಿದೆ.
ಸೌದಿ ಅರೇಬಿಯಾ: ಇರಾನ್ ದಾಳಿಯಿಂದಾಗಿ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾಗಾರವಾದ ರಾಸ್ ತನುರಾ ಸಂಸ್ಕರಣಾಗಾರವನ್ನು ಮುಚ್ಚಲಾಗಿದೆ.
ಭಾರತ: ಗಲ್ಫ್ ದೇಶಗಳಲ್ಲಿ ಸಿಲುಕಿದ್ದ ಸುಮಾರು 52,000 ಭಾರತೀಯರು ಮರಳಿದ್ದಾರೆ.
ಅಫ್ಘಾನಿಸ್ತಾನ: ಸುಮಾರು 80,000 ಆಫ್ಘನ್ನರು ಇರಾನ್‌ನಿಂದ ಹಿಂತಿರುಗಿದ್ದಾರೆ. ಪ್ರತಿದಿನ 2,000 ಆಫ್ಘನ್ನರು ಗಡಿ ದಾಟಿ ಬರುತ್ತಿದ್ದಾರೆ.
ಸಿರಿಯಾ: ಮಾರ್ಚ್ 2 ರಿಂದ 80,000 ಕ್ಕೂ ಹೆಚ್ಚು ಸಿರಿಯನ್ನರು ಲೆಬನಾನ್‌ನಿಂದ ಮರಳಿದ್ದಾರೆ.
ಲೆಬನಾನ್: ಇರಾನ್ ಇಸ್ರೇಲ್ ಯುದ್ಧದ ಬಳಿಕ 5 ಲಕ್ಷ ಜನರು ದೇಶ ತೊರೆದಿದ್ದಾರೆ.
ವಿಮಾನ ಸಂಚಾರ ಬಿಕ್ಕಟ್ಟು
ಯುದ್ಧದಿಂದಾಗಿ ಇರಾನ್ ಮತ್ತು ಇಸ್ರೇಲ್ ತಮ್ಮ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ಹಲವು ದೇಶಗಳು ವಿಮಾನಯಾನ ಸಂಸ್ಥೆಗಳು ಬಿಕ್ಕಟ್ಟು ಎದುರಿಸುತ್ತಿವೆ. ಯುಎಇ, ಕತಾರ್, ಕುವೈತ್ ವಾಯುಪ್ರದೇಶವನ್ನು ಮುಚ್ಚಿದ್ದರಿಂದ, ಸಾವಿರಾರು ವಿಮಾನಗಳು ರದ್ದಾಗಿವೆ. ಇರಾಕ್ ಕೂಡ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದು, ಪಾಕಿಸ್ತಾನವು ತನ್ನ ವಾಯುಪ್ರದೇಶದ ಕೆಲವು ಭಾಗಗಳನ್ನು ಮುಚ್ಚಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ