ಚೀನಾ ಬೆಂಬಲಿತ ಒಲಿ ಟೀಮ್‌ಗೆ ಶಾಕ್‌, ರಾಮಚಂದ್ರ ಪೌದೆಲ್‌ ನೇಪಾಳದ ರಾಷ್ಟ್ರಪತಿಯಾಗಿ ಆಯ್ಕೆ!

Published : Mar 09, 2023, 07:10 PM IST
ಚೀನಾ ಬೆಂಬಲಿತ ಒಲಿ ಟೀಮ್‌ಗೆ ಶಾಕ್‌, ರಾಮಚಂದ್ರ ಪೌದೆಲ್‌ ನೇಪಾಳದ ರಾಷ್ಟ್ರಪತಿಯಾಗಿ ಆಯ್ಕೆ!

ಸಾರಾಂಶ

ನೇಪಾಳ ರಾಜಕೀಯದಲ್ಲಿ ಕೊಂಚ ಬದಲಾವಣೆಯಾಗಿದೆ. ನೇಪಾಳದ ನೂತನ ರಾಷ್ಟ್ರಪತಿಯಾಗಿ ರಾಮಚಂದ್ರ ಪೌದೆಲ್‌ ಆಯ್ಕೆಯಾಗಿದ್ದಾರೆ.   

ಖಠ್ಮಂಡು (ಮಾ.9): ನೇಪಾಳಿ ಕಾಂಗ್ರೆಸ್‌ನ ರಾಮಚಂದ್ರ ಪೌದೆಲ್‌ ಅವರು ನೇಪಾಳದ ರಾಷ್ಟ್ರಪತಿಯಾಗಿ ಗುರುವಾರ ಆಯ್ಕೆಯಾಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಪೌದೆಲ್‌  33,802 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಸಿಪಿಎನ್-ಯುಎಂಎಲ್‌ನ ಸುಭಾಷ್ ಚಂದ್ರ ನೆಂಬಾಂಗ್ 15,518 ಮತಗಳನ್ನು ಪಡೆದರು ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಆ ಮೂಲಕ ಚೀನಾ ಬೆಂಬಲಿತ ಕೆಪಿ ಒಲಿ ಟೀಮ್‌ ಆಘಾತ ಎದುರಿಸಿದೆ. ಕೆಪಿ ಒಲಿ ಟೀಮ್‌ ತಮ್ಮ ಸಿಪಿಎನ್‌ ಮತ್ತು ಯುಎಂಎಲ್‌ ಬೆಂಬಲದಲ್ಲಿ ಸುಭಾಷ್‌ ಚಂದ್ರ ನೆಂಬಾಂಗ್‌ರನ್ನು ಸ್ಪರ್ಧೆಗೆ ಇಳಿಸಿತ್ತು. "ರಾಷ್ಟ್ರಪತಿಯಾಗಿ ಆಯ್ಕೆಯಾದ ನನ್ನ ಸ್ನೇಹಿತ ರಾಮ್ ಚಂದ್ರ ಪೌದೆಲ್‌ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಟ್ವೀಟ್ ಮಾಡಿದ್ದಾರೆ.  ಹಾಲಿ ರಾಷ್ಟ್ರೊತು ಬಿದ್ಯಾ ದೇವಿ ಭಂಡಾರಿ ಅವರ ಅಧಿಕಾರಾವಧಿ ಮಾರ್ಚ್ 12 ರಂದು ಕೊನೆಗೊಳ್ಳಲಿದೆ. ನೇಪಾಳದಲ್ಲಿ ರಾಷ್ಟ್ರಪತಿಯ ಅಧಿಕಾರವಧಿ ಐದು ವರ್ಷಗಳಾಗಿದ್ದು ಒಬ್ಬ ವ್ಯಕ್ತಿಗೆ ಎರಡು ಅವಧಿಗೆ ಮಾತ್ರ ಈ ಸ್ಥಾನಕ್ಕೆ ಆಯ್ಕೆ ಮಾಡಬಹುದಾಗಿದೆ. ರಾಷ್ಟ್ರಪತಿ ಚುನಾವಣೆಗೆ ಮುನ್ನ, ಶಾಸಕರು ತಮ್ಮನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ಪೌದೆಲ್‌ ಹೇಳಿದ್ದರು.

"ಫೆಡರಲ್ ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗಳ ಸದಸ್ಯರು ನನಗೆ ಮತ ಹಾಕುತ್ತಾರೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ನನ್ನ ಸುದೀರ್ಘ ಹೋರಾಟದ ಬಗ್ಗೆ ಅವರು ಸರಿಯಾದ ನಿರ್ಧಾರ ಮಾಡುತ್ತಾರೆ ಎಂದು ನಾನು ನಂಬುತ್ತೇನೆ" ಎಂದು 78 ವರ್ಷ ವಯಸ್ಸಿನ ಪೌದೆಲ್‌ ಹೇಳಿದ್ದರು.  ಚುನಾವಣಾ ಪೂರ್ವದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಇಬ್ಬರು ಮಾಜಿ ಸ್ಪೀಕರ್‌ಗಳ ನಡುವೆ ಹೈ ವೋಲ್ಟೇಜ್ ಮುಖಾಮುಖಿ ಏರ್ಪಟ್ಟಿತ್ತು. ಪೌದೆಲ್‌ ಅವರನ್ನು ಪ್ರಧಾನಿ ಪ್ರಚಂಡ ನೇತೃತ್ವದ ಎಂಟು-ಪಕ್ಷಗಳ ಮೈತ್ರಿ ಬೆಂಬಲಿಸಿತ್ತು.

ಕಳೆದ ತಿಂಗಳು, ಮಾಜಿ ಪ್ರಧಾನಿ ಕೆಪಿ ಶರ್ಮಾ ನೇತೃತ್ವದ ನೇಪಾಳದ ಸಂಸತ್ತಿನ ಎರಡನೇ ಅತಿದೊಡ್ಡ ಪಕ್ಷವಾದ ಸಿಪಿಎನ್-ಯುಎಂಎಲ್ ರಾಷ್ಟ್ರಪತಿ ಚುನಾವಣೆಗೆ ಪೌದೆಲ್‌ ಅವರನ್ನು ಬೆಂಬಲಿಸುವ ಭಿನ್ನಾಭಿಪ್ರಾಯಗಳ ನಂತರ ಪ್ರಚಂಡ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಭಾರತದಂತೆ ನೇಪಾಳದಲ್ಲೂ ಕೂಡ ರಾಷ್ಟ್ರಪತಿ ಹುದ್ದೆ ವಿದ್ಯಕ್ತ ವಿಚಾರಗಳಿಗೆ ಮಾತ್ರವೇ ಸೀಮಿತ. ಇತ್ತೀಚೆಗೆ ನೇಪಾಳದ ರಾಜಕೀಯ ಪಕ್ಷಗಳ ನಡುವೆ ಈ ಹುದ್ದೆಗೆ ಸಂವಿಧಾನವು ನೀಡುವ ವಿವೇಚನಾ ಅಧಿಕಾರದ ಕಾರಣದಿಂದ ಜಗಳ ನಡೆದಿದೆ.

Ram Sita Statue: ಗಂಡಕಿ ನದಿಯಿಂದ ತೆಗೆದ 40 ಟನ್‌ ತೂಕದ ಸಾಲಿಗ್ರಾಮ ಶಿಲೆ, 30ಕ್ಕೆ ಭಾರತ ಪ್ರವೇಶ!

ಯಾರಿವರು ರಾಮಚಂದ್ರ ಪೌದೆಲ್‌: ಹಿರಿಯ ರಾಜಕಾರಣಿಯೂ ಆಗಿರುವ ಪೌದೆಲ್‌ ನೇಪಾಳದ ಪ್ರಧಾನಿ ಹುದ್ದೆಗೆ 17 ಬಾರಿ ಸ್ಪರ್ಧಿಸಿದ್ದರು. ಆದರೆ, ಒಮ್ಮೆಯೂ ಗೆಲುವು ಸಾಧಿಸಿರಲಿಲ್ಲ. ನೇಪಾಳದ ನೂತನ ರಾಷ್ಟ್ರಪತಿ ನೇಪಾಳ ರಾಜಕೀಯದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. 16 ನೇ ವಯಸ್ಸಿನಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ಪೌದೆಲ್‌, ದೇಶದಲ್ಲಿ ರಾಜಪ್ರಭುತ್ವ ವಿರೋಧಿ ಚಳುವಳಿಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು. ನೇಪಾಳದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. 78 ವರ್ಷದ ಪೌಡೆಲ್ ತಮ್ಮ 62 ವರ್ಷಗಳ ರಾಜಕೀಯ ಜೀವನದಲ್ಲಿ ಸುಮಾರು 15 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. 2003ರಲ್ಲಿ ಆಗಿನ ದೊರೆ ಜ್ಞಾನೇಂದ್ರ ಅವರು ಚುನಾಯಿತ ಸರ್ಕಾರವನ್ನು ಕಿತ್ತೊಗೆದು ಅಧಿಕಾರವನ್ನು ವಶಪಡಿಸಿಕೊಂಡಾಗ ಅವರನ್ನು ಕೊನೆಯ ಬಾರಿಗೆ ಜೈಲಿಗೆ ಕಳುಹಿಸಲಾಯಿತು. ಪೌದೆಲ್‌ ಅವರನ್ನು ಈ ಸಮಯದಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಜೈಲಿನಲ್ಲಿರಿಸಲಾಯಿತು.

ಸೀತೆ ಹುಟ್ಟಿದ ಊರಿಂದ ಅಯೋಧ್ಯೆಗೆ ಬಂದ ಪವಿತ್ರ ಬಂಡೆಕಲ್ಲು: ರಾಮ - ಜಾನಕಿ ವಿಗ್ರಹಕ್ಕೆ ಬಳಕೆ..!

ಅವರು 1991 ರಲ್ಲಿ ತನ್ಹುದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ ಅವರನ್ನು ಸ್ಥಳೀಯ ಅಭಿವೃದ್ಧಿ ಸಚಿವರನ್ನಾಗಿ ಮಾಡಲಾಯಿತು. 1994ರಲ್ಲಿ ಎರಡನೇ ಬಾರಿಗೆ ಸಂಸದರಾದಾಗ ಸ್ಪೀಕರ್ ಹುದ್ದೆಗೆ ಆಯ್ಕೆಯಾದರು. 1999 ರಲ್ಲಿ, ಪೌದೆಲ್‌ ಉಪ ಪ್ರಧಾನ ಮಂತ್ರಿಯಾಗಿ ಗೃಹ ಸಚಿವಾಲಯವನ್ನು ವಹಿಸಿಕೊಂಡಿದ್ದಾರೆ. ಸತತ ಆರು ಅವಧಿಗೆ ಸಂಸದರಾಗಿ ಆಯ್ಕೆಯಾದ ನಂತರ, ನೇಪಾಳದಲ್ಲಿ ಸಂವಿಧಾನ ಸಭೆಯ ಸಮಯದಲ್ಲಿ ನೇಪಾಳಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!