Watch: ಮರುಭೂಮಿ ನಾಡಲ್ಲಿ ಮಹಾಮಳೆ, ನೀರಿನಲ್ಲಿ ಮುಳುಗಿದ ದುಬೈ ಏರ್‌ಪೋರ್ಟ್‌!

By Santosh NaikFirst Published Apr 17, 2024, 11:51 AM IST
Highlights

ಮಧ್ಯಪ್ರಾಚ್ಯ ದೇಶಗಳು ಅದರಲ್ಲೂ ಪ್ರಮುಖವಾಗಿ ಯುಎಇಯಲ್ಲಿ ಈ ವಾರಿ ಭಾರೀ ಪ್ರಮಾಣದ ಮಳೆಯಾಗಿದೆ. ಅದರಲ್ಲೂ ವಿಶ್ವದ ಐಷಾರಾಮಿ ನಗರಗಳಲ್ಲಿ ಒಂದಾದ ದುಬೈ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದೆ.

ನವದೆಹಲಿ (ಏ.17):  ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮರುಭೂಮಿಯ ಊರಾದ ಯುಎಇಯಲ್ಲಿ ಎಲ್ಲೆಂದರಲ್ಲಿ ನೀರು ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದಾಗಿ ಹಲವು ನಗರಗಳಿಗೆ ಹಾನಿಯಾಗಿದೆ. ಇದಿಷ್ಟೇ ಅಲ್ಲ, ನೆರೆಯ ರಾಷ್ಟ್ರ ಒಮಾನ್ ನಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹಕ್ಕೆ 18 ಮಂದಿ ಸಾವು ಕಂಡಿದ್ದಾರೆ. ಮಳೆಯಿಂದ ಉಂಟಾದ ಪ್ರವಾಹವು ದುಬೈನ ಸಂಚಾರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ರಸ್ತೆ ಸಂಚಾರ ಮತ್ತು ವಿಮಾನ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ. ದುಬೈ ವಿಮಾನ ನಿಲ್ದಾಣ ನೀರಿನಿಂದ ಮುಳುಗಿಹೋಗಿದೆ. ಇದರಿಂದಾಗಿ ಹಲವು ವಿಮಾನಗಳ ಹಾರಾಟವನ್ನೂ ರದ್ದುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಸೋಮವಾರ, ದುಬೈ ಪೊಲೀಸರು ಕೆಟ್ಟ ಹವಾಮಾನದ ಬಗ್ಗೆ ಸಾರ್ವಜನಿಕ ಎಚ್ಚರಿಕೆಯನ್ನೂ ನೀಡಿದ್ದರು. ದುಬೈ ಮತ್ತು ಅಬುಧಾಬಿ ಸೇರಿದಂತೆ ಹಲವು ದೊಡ್ಡ ನಗರಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆ ಬೀಳಲಿದೆ ಎಂದು ಯುಎಇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.

ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಬೆಳಿಗ್ಗೆ (ಏಪ್ರಿಲ್ 17) ವರೆಗೆ ಮತ್ತೊಂದು ಕೆಟ್ಟ ಹವಾಮಾನವು ಪಶ್ಚಿಮ ಪ್ರದೇಶಗಳಿಂದ ಪ್ರಾರಂಭವಾಗಬಹುದು ಮತ್ತು ದೇಶದ ಹಲವು ಪ್ರದೇಶಗಳಿಗೆ ಹರಡಬಹುದು ಎಂದು ಯುಎಇಯ ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್‌ಸಿಎಂ) ತಿಳಿಸಿದೆ.

ಭಾನುವಾರ (ಏಪ್ರಿಲ್ 14) ಮತ್ತು ಸೋಮವಾರ (ಏಪ್ರಿಲ್ 15) ಒಮಾನ್‌ನ ವಿವಿಧ ಭಾಗಗಳಲ್ಲಿ ಹಠಾತ್ ಪ್ರವಾಹಕ್ಕೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ರಾಷ್ಟ್ರೀಯ ತುರ್ತು ನಿರ್ವಹಣಾ ಸಮಿತಿ ತಿಳಿಸಿದೆ. ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ತೀವ್ರತೆಯೊಂದಿಗೆ ಮಳೆ ಮುಂದುವರಿದಿದೆ. ಬುಧವಾರದವರೆಗೆ ಹವಾಮಾನವು ಕೆಟ್ಟದಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮರುಭೂಮಿ ದೇಶಗಳಲ್ಲಿ ಪ್ರವಾಹ: ಭಾರಿ ಮಳೆಗೆ ಒಮಾನ್‌ನಲ್ಲಿ 18 ಸಾವು!

ಕಳೆದ ವರ್ಷ ದುಬೈನಲ್ಲಿ ಪ್ರವಾಹ: ಕಳೆದ ವರ್ಷವೂ ನವೆಂಬರ್‌ನಲ್ಲಿ ದುಬೈನ ಹವಾಮಾನ ಹದಗೆಟ್ಟಿತ್ತು. ಬಿರುಗಾಳಿ ಸಹಿತ ಮಳೆಯಿಂದಾಗಿ ನಗರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ಜನರು ಬೀಚ್‌ಗಳಿಗೆ ಹೋಗುವುದನ್ನು ಆಡಳಿತವು ನಿಷೇಧಿಸಿದೆ. ಮರುಭೂಮಿ ಪ್ರದೇಶದಲ್ಲಿ ಆದ ಹವಮಾನದ ಹಠಾತ್‌ ಬದಲಾವಣೆಯ ಬಗ್ಗೆ ವಿಶ್ವದ ವಿಜ್ಞಾನಿಗಳು ಅಚಚ್ರಿ ವ್ಯಕ್ತಪಡಿಸಿದ್ದರು.

ದುಬೈನಲ್ಲಿ ಅತ್ಯಾಕರ್ಷಕ ಐಷಾರಾಮಿ ಬಂಗಲೆ ಹೊಂದಿರುವ ಭಾರತದ ತಾರೆಯರು!

Dubai Floods 😳😳😳

pic.twitter.com/XLDwDlYVgh

— TechGlare Deals (@Tech_glareOffl)
click me!