
ವಾಷಿಂಗ್ಟನ್(ಏ.17): ಅಮೆರಿಕದಲ್ಲಿ ಹಿಂದೂಗಳ ಮೇಲೆ ದಾಳಿ ಹೆಚ್ಚಾಗುತ್ತಿದೆ ಎಂದು ಭಾರತೀಯ ಅಮೆರಿಕನ್ ಸಂಸದ, ಕರ್ನಾಟಕ ಮೂಲದ ಶ್ರೀ ಥಾನೇದಾರ್ ಕಳವಳ ವ್ಯಕ್ತಪಡಿಸಿದ್ದಾರೆ. ‘ಇದು ಸಂಘಟಿತ ಹಿಂದೂ ವಿರೋಧಿ ದಾಳಿಯ ಆರಂಭ. ಈ ದ್ವೇಷದ ವಿರುದ್ಧದ ಸದಸ್ಯರೆಲ್ಲರೂ ಒಂದಾಗಬೇಕು’ ಎಂದು ಕರೆ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಅಮೆರಿಕ ಸಂಸದ ಥಾನೇದರ್ ‘ಹಿಂದೂಗಳ ಮೇಲೆ ದಾಳಿಗಳು ಹೆಚ್ಚಳವಾಗುತ್ತಿದೆ. ಆನ್ಲೈನ್ ಗಳಲ್ಲಿ ಅವರ ವಿರುದ್ಧ ತಪ್ಪು ಮಾಹಿತಿಗಳನ್ನು ನೀಡುವ ಕೆಲಸ ನಡೆಯುತ್ತಿದೆ. ಹಿಂದೂ ಧರ್ಮ ಇತರರ ಮೇಲೆ ದಾಳಿ ಮಾಡುವ ಧರ್ಮವಲ್ಲ, ಆದರೆ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು’ ಎಂದಿದ್ದಾರೆ.
ಸೂಕ್ತ ಸಮಯದಲ್ಲಿ ಇರಾನ್‌ಗೆ ಉತ್ತರ: ಇಸ್ರೇಲ್
ಇತ್ತೀಚಿಗೆ ಥಾನೇದರ್ ಸೇರಿದಂತೆ ಇತರ ನಾಲ್ವರು ಭಾರತೀಯ ಅಮೆರಿಕನ್ ಜನಪ್ರತಿನಿಧಿಗಳು ಹಿಂದೂ ದೇವಾಲಯ ಮತ್ತು ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ತನಿಖೆಗೆ ಆಗ್ರಹಿಸಿ ನ್ಯಾಯಾಂಗ ಇಲಾಖೆಗೆ ಪತ್ರ ಬರೆದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ