Nepal PM Pushpa Kamal Dahal: ಮೂರನೇ ಬಾರಿಗೆ ನೇಪಾಳದ ಪ್ರಧಾನಿಯಾದ ಕಮಲ್ ಪ್ರಚಂಡ

By Gowthami KFirst Published Dec 25, 2022, 9:44 PM IST
Highlights

ನೇಪಾಳದ ನೂತನ ಪ್ರಧಾನಿಯಾಗಿ ಸಿಪಿಎನ್-ಮಾವೋವಾದಿ ಕೇಂದ್ರದ ಅಧ್ಯಕ್ಷ ಪುಷ್ಪ ಕಮಲ್ ದಹಾಲ್  ಪ್ರಚಂಡ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ  ಬಿದ್ಯಾ ದೇವಿ ಭಂಡಾರಿ ಅವರು ಭಾನುವಾರ ಘೋಷಿಸಿದ್ದಾರೆ.  

ಕಠ್ಮಂಡು (ಡಿ.25): ನೇಪಾಳದ ನೂತನ ಪ್ರಧಾನಿಯಾಗಿ ಸಿಪಿಎನ್-ಮಾವೋವಾದಿ ಕೇಂದ್ರದ ಅಧ್ಯಕ್ಷ ಪುಷ್ಪ ಕಮಲ್ ದಹಾಲ್  ಪ್ರಚಂಡ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ  ಬಿದ್ಯಾ ದೇವಿ ಭಂಡಾರಿ ಅವರು ಭಾನುವಾರ ಘೋಷಿಸಿದ್ದಾರೆ.  ಈ ಮೂಲಕ ಪುಷ್ಪ ಕಮಲ್ ದಹಾಲ್ ಮೂರನೇ ಬಾರಿಗೆ ನೇಪಾಳದ ಪ್ರಧಾನಿಯಾಗಿದ್ದಾರೆ. ಪ್ರಚಂಡ ಅವರನ್ನು ನೇಪಾಳದ ಪ್ರಧಾನ ಮಂತ್ರಿಯಾಗಿ ಸಂವಿಧಾನದ 76 ನೇ ವಿಧಿ 2 ರ ಪ್ರಕಾರ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.  ನೂತನ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸೋಮವಾರ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ರಾಷ್ಟ್ರಪತಿ ಕಚೇರಿ ತಿಳಿಸಿದೆ.

ಸಂವಿಧಾನದ 76 ನೇ ವಿಧಿ 2 ರಲ್ಲಿ ತಿಳಿಸಿರುವಂತೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪಕ್ಷಗಳ ಬೆಂಬಲದೊಂದಿಗೆ ಬಹುಮತವನ್ನು ಗಳಿಸಬಹುದಾದ ಪ್ರತಿನಿಧಿಗಳ ಹೌಸ್‌ನ ಯಾವುದೇ ಸದಸ್ಯರು ಪ್ರಧಾನ ಮಂತ್ರಿ ಹುದ್ದೆಗೆ ಹಕ್ಕು ಸಲ್ಲಿಸಲು ಅರ್ಹ ಎಂದು ರಾಷ್ಟ್ರಪತಿಗಳು  ಸೂಚನೆ ನೀಡಿದ್ದರು. ರಾಷ್ಟ್ರಪತಿಗಳು ನೀಡಿದ್ದ ಗಡುವು ಭಾನುವಾರ ಸಂಜೆ 5 ಗಂಟೆಗೆ ಮುಗಿಯುವ ಮುನ್ನವೇ 68 ವರ್ಷದ ಪ್ರಚಂಡ ಅವರು ತಮ್ಮ ಹಕ್ಕುಪತ್ರ ಸಲ್ಲಿಸಿದ್ದರು. ಪಕ್ಷೇತ್ತರ ಸಂಸದರು ಸೇರಿದಂತೆ 169 ಸಂಸದರ ಬೆಂಬಲವಿದೆ ಎಂದು ತಮ್ಮ ಹಕ್ಕುಪತ್ರದಲ್ಲಿ ಅವರು ಉಲ್ಲೇಖಿಸಿದ್ದರು. 

ಈ ಹಿಂದೆ ಮಾಜಿ ಪ್ರಧಾನಿ ಕೆ. ಪಿ.ಶರ್ಮಾ ಓಲಿ ನೇತೃತ್ವದಲ್ಲಿ ಸಿಪಿಎನ್-ಯುಎಂಎಲ್, ಸಿಪಿಎನ್-ಎಂಸಿ, ರಾಷ್ಟ್ರೀಯ ಸ್ವತಂತ್ರ ಪಕ್ಷ(ಆರ್‌ಎಸ್‌ಪಿ) ಮತ್ತು ಇತರ ಸಣ್ಣ ಪಕ್ಷಗಳ ಒಡಗುಡಿ ಮಹತ್ವದ ಸಭೆ ನಡೆಯಿತು. ಇದರಲ್ಲಿ ಪ್ರಚಂಡ ನೇತೃತ್ವದಲ್ಲಿ ಸರ್ಕಾರ ರಚಿಸಲು ಒಪ್ಪಿಗೆ ಮೂಡಿತ್ತು. ಈ ಹಿನ್ನೆಲೆಯಲ್ಲಿ ಇನ್ನು ಮುಂದಿನ ಎರಡೂವರೆ ವರ್ಷಗಳ ಕಾಲ ಪ್ರಚಂಡ ಅವರೇ ನೇಪಾಳದ ಪ್ರಧಾನಿಯಾಗಿರಲಿದ್ದಾರೆ ಎಂದು ಮೈತ್ರಿ ಪಕ್ಷಗಳು ಒಕ್ಕೊರಲಿನಿಂದ ಹೇಳಿವೆ.

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರಚಂಡ ಅವರು 165 ಶಾಸಕರ ಬೆಂಬಲವನ್ನು ಹೊಂದಿದ್ದಾರೆ, ಇದರಲ್ಲಿ ಸಿಪಿಎನ್-ಯುಎಂಎಲ್ 78, ಸಿಪಿಎನ್-ಎಂಸಿ 32, ಆರ್‌ಎಸ್‌ಪಿ 20, ಆರ್‌ಪಿಪಿ 14, ಜೆಎಸ್‌ಪಿ 12, ಜನಮತ್ 6 ಮತ್ತು ನಾಗರೀಕ್ ಉನ್ಮುಕ್ತಿ ಪಾರ್ಟಿ 3 ಸೇರಿವೆ. ಈಗ ಪ್ರಚಂಡ ಅವರು ನೇಪಾಳದ ಪ್ರಧಾನಿಯಾಗಿ ಮೂರನೇ ಬಾರಿಗೆ ನೇಮಕವಾಗುತ್ತಿದ್ದಾರೆ.

MukthinathaTemple ನೇಪಾಳದಲ್ಲಿದೆ ಮುಕ್ತಿನಾಥ ದೇಗುಲ; ಅಷ್ಟಕ್ಕೂ ಯಾರೀ ಮುಕ್ತಿನಾಥ?

ಈ ನಡುವೆ ಸರಕಾರ ರಚನೆ ಮಾಡಲು ನೇಪಾಳಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿತ್ತು. ಆದರೆ ಅಧ್ಯಕ್ಷರು ನೀಡಿದ ಗಡುವಿನೊಳಗೆ ಸರ್ಕಾರವನ್ನು ರಚಿಸಲು ಪಕ್ಷ ವಿಫಲವಾಗಿತ್ತು. ಆ ಬಳಿಕ  CPN-UML ಪ್ರಚಂಡ ನೇತೃತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಲು  ಕ್ರಮ ಕೈಗೊಂಡಿತು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನೇಪಾಳಿ ಕಾಂಗ್ರೆಸ್ 89 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿದೆ. ಆದರೆ CPN-UML ಮತ್ತು CPN-MC ಕ್ರಮವಾಗಿ 78 ಮತ್ತು 32 ಸ್ಥಾನಗಳನ್ನು ಹೊಂದಿವೆ.

ಕುಖ್ಯಾತ ಸರಣಿ ಹಂತಕ ಚಾರ್ಲ್ಸ್‌ ಶೋಭ​ರಾಜ್‌ ಬಂಧಮುಕ್ತ: ನನ್ನನ್ನು ಕಿಲ್ಲರ್‌ ಅನ್ಬೇಡಿ ಎಂದ ಸೀರಿಯಲ್ ಕಿಲ್ಲರ್..!

ಡಿಸೆಂಬರ್ 11, 1954 ರಂದು ಪೋಖರಾ ಬಳಿಯ ಕಸ್ಕಿ ಜಿಲ್ಲೆಯ ಧಿಕುರ್ಪೋಖಾರಿಯಲ್ಲಿ ಜನಿಸಿದ ಪ್ರಚಂಡ ಅವರು ಸುಮಾರು 13 ವರ್ಷಗಳ ಕಾಲ ಭೂಗತರಾಗಿದ್ದರು. CPN-ಮಾವೋವಾದಿಗಳು ಶಾಂತಿಯುತ ರಾಜಕೀಯವನ್ನು ಅಳವಡಿಸಿಕೊಂಡಾಗ ಅವರು ಮುಖ್ಯವಾಹಿನಿಯ ರಾಜಕೀಯಕ್ಕೆ ಸೇರಿದರು, ದಶಕಗಳ ಕಾಲದ ಸಶಸ್ತ್ರ ದಂಗೆಯನ್ನು ಅಂತ್ಯಗೊಳಿಸಿದರು. ಅವರು 1996 ರಿಂದ 2006 ರವರೆಗೆ ದಶಕದ ಸಶಸ್ತ್ರ ಹೋರಾಟವನ್ನು ಮುಂದುವರೆಸಿ ಅಂತಿಮವಾಗಿ ನವೆಂಬರ್ 2006 ರಲ್ಲಿ ಸಮಗ್ರ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ  ಈ ಹೋರಾಟ ಅಂತ್ಯವಾಯ್ತು.

click me!