
ವಾಷಿಂಗ್ಟನ್: ಸೌದಿ ಅರೇಬಿಯಾದ ಫ್ರಿನ್ಸ್ ಸುಲ್ತಾನ್ ಏರ್‌ಬೇಸ್ ಮೇಲೆ ಇರಾನ್ ಶುಕ್ರವಾರ ಇರಾನ್ ನಡೆಸಿದ ದಾಳಿಯಲ್ಲಿ ಹಾನಿಗೀಡಾದ ಅಮೆರಿಕ ವಿಮಾನಗಳ ಚಿತ್ರಗಳು ಬಹಿರಂಗವಾಗಿವೆ.
ಈ ಏರ್‌ಬೇಸ್‌ನಲ್ಲಿ ಇ-3 ಎಡಬ್ಲುಎಸಿಎಸ್ ಯುದ್ಧ ವಿಮಾನಗಳು ನೆಲೆಗೊಂಡಿದ್ದವು ಹಾಗೂ ಹಲವು ಅಮೆರಿಕದ ಯೋಧರು ಇದ್ದರು. ದಾಳಿಯ ವೇಳೆ ವಿಮಾನಗಳು ಹಾನಿಗೀಡಾಗಿವೆ ಎಂದು ಶನಿವಾರವೇ ಇರಾನ್ ಹೇಳಿತ್ತು. ಭಾನುವಾರ ಇರಾನ್‌ನ ಪ್ರೆಸ್ ಟೀವಿ, ಈ ವಿಮಾನಗಳ ಚಿತ್ರ ಬಿಡುಗಡೆ ಮಾಡಿದೆ. ವಿಮಾನಗಳು ದಾಳಿಗೆ ಹೊತ್ತಿ ಉರಿದು 2 ತುಂಡಾಗಿದ್ದು ಕಂಡುಬರುತ್ತದೆ.
ಈ ದಾಳಿಯಲ್ಲಿ ಅಮೆರಿಕದ ಹತ್ತು ಯೋಧರು ಗಾಯಗೊಂಡಿದ್ದಾರೆ ಎಂದು ಶನಿವಾರವೇ ಇರಾನ್ ಹೇಳಿತ್ತು.
ಪ್ರಿನ್ಸ್ ಸುಲ್ತಾನ್ ಏರ್‌ಬೇಸ್ ಮೇಲೆ ಇರಾನ್ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಮಾ.1ರಂದು ಇದೇ ರೀತಿ ನಡೆದ ದಾಳಿಯಲ್ಲಿ ಸೇನಾ ಸಿಬ್ಬಂದಿಯೊಬ್ಬರು ಆ ಸಂದರ್ಭದಲ್ಲಿ ಮೃತಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ