ತೈಲ ಬಿಕ್ಕಟ್ಟು ತೀವ್ರ, ಶನಿವಾರದಿಂದ ಪಾಕಿಸ್ತಾನದಲ್ಲಿ ಸ್ಮಾರ್ಟ್ ಲಾಕ್‌ಡೌನ್ ಜಾರಿ ಸಾಧ್ಯತೆ

Published : Mar 29, 2026, 07:46 PM IST
india pakistan nuclear conflict risk us intelligence report south asia tension terror threat missile development

ಸಾರಾಂಶ

ತೈಲ ಬಿಕ್ಕಟ್ಟು ತೀವ್ರ, ಶನಿವಾರದಿಂದ ಪಾಕಿಸ್ತಾನದಲ್ಲಿ ಸ್ಮಾರ್ಟ್ ಲಾಕ್‌ಡೌನ್ ಜಾರಿ ಸಾಧ್ಯತೆ, ಎರಡು ದಿನದ ಲಾಕ್‌ಡೌನ್ ಜಾರಿಗೆ ಪಾಕ್ ಸರ್ಕಾರ ಮುಂದಾಗಿದೆ. ಕಂಗೆಟ್ಟಿರುವ ಪಾಕಿಸ್ತಾನ ಮಧ್ಯಸ್ಥಿಕೆ ಮಾಡಿ ಯುದ್ಧ ಕೊನೆಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. 

ಇಸ್ಲಾಮಾಬಾದ್ (ಮಾ.29) ಮಧ್ಯಪ್ರಾಚ್ಯ ಯುದ್ಧದಿಂದ ಭಾರತ ಸೇರಿದಂತೆ ಹಲವು ದೇಶಗಳಿಗೆ ತೈಲ, ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆದರೆ ಭಾರತ ಬಿಕ್ಕಟ್ಟು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರೆ, ಪಾಕಿಸ್ತಾನ ಕಂಗಾಲಾಗಿದೆ. ಪಾಕಿಸ್ತಾನದಲ್ಲಿ ತೈಲ ಬಿಕ್ಕಟ್ಟು ತೀವ್ರಗೊಂಡಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಸ್ಮಾರ್ಟ್ ಲಾಕ್‌ಡೌನ್ ಜಾರಿಗೊಳಿಸಲು ಮುಂದಾಗಿದೆ. ಮೊದಲ ಹಂತದಲ್ಲಿ ಎರಡು ದಿನ ಸ್ಮಾರ್ಟ್‌ಲಾಕ್ ಡೌನ್ ಜಾರಿ ಮಾಡಲು ಎಲ್ಲಾ ತಯಾರಿ ನಡೆಸಿದೆ. ಶನಿವಾರದಿಂದ ಭಾನುವಾರದ ವರೆಗೆ 2 ದಿನ ಪಾಕಿಸ್ತಾನ ಇಂಧನ ಕೊರತೆಯಿಂದ ಲಾಕ್‌ಡೌನ್ ಎದುರಿಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದೆ.

ಕೋವಿಡ್ ಬಳಿಕ ಪಾಕಿಸ್ತಾನದಲ್ಲಿ ಲಾಕ್‌ಡೌನ್

ಪಾಕಿಸ್ತಾನದಲ್ಲಿ ತೈಲ ಸಂಗ್ರಹ ಇಲ್ಲದ ಕಾರಣ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಈಗಾಗಲೇ ಸರ್ಕಾರಿ ವಾಹನ ಬಳಕೆ ಕಡಿಮೆ ಮಾಡಲಾಗಿದೆ. ಹಲವರಿಗೆ ರಜೆ ನೀಡಲಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಬಾರಿ ಏರಿಕೆ ಮಾಡಲಾಗಿದೆ. ಇದೀಗ ತೈಲ ಪೂರೈಕೆ ಆಗದ ಕಾರಣ ಅನಿವಾರ್ಯವಾಗಿ ಪಾಕಿಸ್ತಾನ ಲಾಕ‌್‌ಡೌನ್ ಮೊರೆ ಹೋಗುತ್ತಿದೆ. ಶನಿವಾರ ಹಾಗೂ ಭಾನುವಾರ ಹಲವು ಕಂಪನಿಗಳು, ಸರ್ಕಾರಿ ಕಚೇರಿಗಳಿಗೆ ರಜೆ ಇರುವ ಕಾರಣ ಈ ಎರಡು ದಿನ ಲಾಕ್‌ಡೌನ್ ಮಾಡಿ ಇಂಧನ ಉಳಿತಾಯ ಮಾಡಲು ಪಾಕಿಸ್ತಾನ ಮುಂದಾಗಿದೆ. ಕೋವಿಡ್ ಬಳಿಕ ಇದೀಗ ಪಾಕಿಸ್ತಾನ ಲಾಕ್‌ಡೌನ್ ಆಗುವ ಸಾಧ್ಯತೆ ದಟ್ಟವಾಗಿದೆ. ಶನಿವಾರ 12.01 AM ನಿಂದ ಭಾನುವಾರ ಮಧ್ಯರಾತ್ರಿ 11.59PMವರೆಗೆ ಎರಡು ದಿನ ಲಾಕ್‌ಡೌನ್ ಮಾಡಲು ಪಾಕಿಸ್ತಾನ ಮುಂದಾಗಿದೆ.

ಎಲ್ಲವೂ ಬಂದ್

ಎರಡು ದಿನದ ಲಾಕ್‌ಡೌನ್‌ನಲ್ಲಿ ವಾಣಿಜ್ಯ ಮಾರುಕಟ್ಟೆ, ಕೈಗಾರಿಕೆಗಳು, ಕಚೇರಿ, ಸಾರಿಗೆ ಸೇರಿದಂತೆ ಹಲವು ಸೇವೆಗಳು ಸಂಪೂರ್ಣ ಬಂದ್. ಇನ್ನು ಮದುವೆ, ಇತರ ಸಮಾರಂಭಗಳು ನಿರ್ಬಂಧಿಸಲಾಗುತ್ತದೆ. ಕೇವಲ ತುರ್ತು ಸೇವೆಗಳು ಮಾತ್ರ ಲಭ್ಯವಿರಲಿದೆ. ಖಾಸಗಿ ವಾಹನಗಳ ಮೂಲಕವೂ ಪ್ರಯಾಣ ಮಾಡುವಂತಿಲ್ಲ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ.

ಸರ್ಕಾರದ ಸ್ಮಾರ್ಟ್‌ಲಾಕ್ ಡ್ರಾಫ್ಟ್ ಲೀಕ್

ಪಾಕಿಸ್ತಾನ ಸರ್ಕಾರದ ಸ್ಮಾರ್ಟ್ ಲಾಕ್‌ಡೌನ ಆದೇಶದ ಪ್ರತಿ ಅಧಿಕೃತ ಘೋಷಣೆಗೂ ಮುನ್ನ ಮಾಧ್ಯಮಗಳಲ್ಲಿ ಕರಡು ನೋಟಿಫಿಕೇಶನ್ ಲೀಕ್ ಆಗಿದೆ. ಈ ಕುರಿತು ಪಾಕಿಸ್ತಾನ ಸರ್ಕಾರ ಪ್ರತಿಕ್ರಿಯಿಸಿದೆ. ಪಾಕಿಸ್ತಾನ ಸರ್ಕಾರ ಈ ಕುರಿತು ಚರ್ಚೆ ನಡೆಸಿದೆ. ಆದರೆ ಯಾವುದೇ ಅಂತಿಮ ತೀರಮಾನ ಕೈಗೊಂಡಿಲ್ಲ. ಸರ್ಕಾರ ಯಾವುದೇ ಕರಡು ಪ್ರತಿ ಸಿದ್ಧಪಡಿಸಿಲ್ಲ. ಚರ್ಚೆ ಹಂತದಲ್ಲಿರುವ ವಿಚಾರಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲದೆ ಪಾಕಿಸ್ತಾನ ಮಾಧ್ಯಮ ಬಹಿರಂಗಪಡಿಸಿದೆ ಎಂದಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯುದ್ಧದ ಎಫೆಕ್ಟ್: ಹೀಲಿಯಂ ಅನಿಲದ ಕೊರತೆ.. ಎಂಆರ್‌ಐ ಸ್ಕ್ಯಾನಿಂಗ್ ದರ ಏರಿಕೆ ಸಾಧ್ಯತೆ!
25 ವರ್ಷದಲ್ಲಿ ಮೊದಲ ಬಾರಿ ಚಿನ್ನದ ಮಾರುಕಟ್ಟೆಯಲ್ಲಿ ಹಲ್​ಚಲ್​: ಬಂಗಾರದ ಮಾರಾಟಕ್ಕೆ ಮುಂದಾದ ರಷ್ಯಾ