ಕೋರ್ಟಿಗೆ ಪ್ರಿನ್ಸ್‌ ಹ್ಯಾರಿ ಹಾಜ​ರು: ರಾಜ​ಮ​ನೆ​ತ​ನದವರು ಕೋರ್ಟ್‌ಗೆ ಬರ್ತಿರೋದು 100 ವರ್ಷದಲ್ಲೇ ಮೊದಲು

By Kannadaprabha NewsFirst Published Jun 7, 2023, 9:56 AM IST
Highlights

ಬ್ರಿಟ​ನ್‌ನ ಮಿರರ್‌ ಸಮೂ​ಹದ ಪತ್ರಿ​ಕೆ​ಗಳು ತಮ್ಮ ಫೋನ್‌ ಹ್ಯಾಕ್‌ ಮಾಡಿ ವರದಿ ಮಾಡಿವೆ. ಇದ​ರಿಂದ ತಮ್ಮ ಖಾಸ​ಗಿ​ತ​ನಕ್ಕೆ ಧಕ್ಕೆ ಆಗಿದೆ ಎಂದು ಆರೋ​ಪಿಸಿದ್ದ ಬ್ರಿಟ​ನ್‌ ರಾಜ​ಕು​ವರ ಪ್ರಿನ್ಸ್‌ ಹ್ಯಾರಿ, ಹೈಕೋರ್ಟ್‌ಗೆ ಹಾಜ​ರಾ​ದ​ರು.

ಲಂಡ​ನ್‌: ಬ್ರಿಟ​ನ್‌ನ ಮಿರರ್‌ ಸಮೂ​ಹದ ಪತ್ರಿ​ಕೆ​ಗಳು ತಮ್ಮ ಫೋನ್‌ ಹ್ಯಾಕ್‌ ಮಾಡಿ ವರದಿ ಮಾಡಿವೆ. ಇದ​ರಿಂದ ತಮ್ಮ ಖಾಸ​ಗಿ​ತ​ನಕ್ಕೆ ಧಕ್ಕೆ ಆಗಿದೆ ಎಂದು ಆರೋ​ಪಿಸಿದ್ದ ಬ್ರಿಟ​ನ್‌ ರಾಜ​ಕು​ವರ ಪ್ರಿನ್ಸ್‌ ಹ್ಯಾರಿ, ಮಂಗ​ಳ​ವಾರ ಹೈಕೋರ್ಟ್‌ಗೆ ಹಾಜ​ರಾ​ದ​ರು. ಬ್ರಿಟನ್‌ ರಾಜ​ಮ​ನೆ​ತ​ನದ ವ್ಯಕ್ತಿ​ಯೊ​ಬ್ಬರು ಕೋರ್ಟ್‌ಗೆ ಹಾಜ​ರಾ​ಗು​ತ್ತಿ​ರು​ವುದು 100 ವರ್ಷ​ದಲ್ಲಿ ಇದೇ ಮೊದಲು. ಈ ಹಿಂದೆ 1891ರಲ್ಲಿ ಅಂದಿ​ನ ರಾಜ​ಕು​ವರ ಕಿಂಗ್‌ ಎಡ್ವರ್ಡ್‌-7 (King Edward-7) ಅವರು ಜೂಜು ಪ್ರಕ​ರ​ಣ​ವೊಂದ​ರಲ್ಲಿ ಕೋರ್ಟಿಗೆ ಹಾಜ​ರಾ​ಗಿ​ದ್ದರು. ಮಂಗ​ಳ​ವಾ​ರದ ವಿಚಾ​ರಣೆ ವೇಳೆ ಹ್ಯಾರಿ ಅವ​ರು, 1996ರಿಂದ 2010ರವ​ರೆಗೆ ಮಿರರ್‌ ಪತ್ರಿ​ಕೆ​ಗಳು ತಮ್ಮ ಫೋನ್‌ ಹ್ಯಾಕ್‌ ಮಾಡಿ ಇಲ್ಲ​ಸ​ಲ್ಲದ ವರ​ದಿ​ಗ​ಳನ್ನು ಪ್ರಕ​ಟಿ​ಸಿವೆ ಎಂದು ಆರೋ​ಪಿ​ಸಿ​ದ​ರು.

ಪ್ರಿನ್ಸ್‌ ಹ್ಯಾರಿ, ಮೇಘನ್‌ ದಾಂಪತ್ಯದಲ್ಲಿ ಬಿರುಕು:

ಲಂಡನ್‌: ಬ್ರಿಟನ್‌ನ ರಾಜಕುವರ ಪ್ರಿನ್ಸ್‌ ಹ್ಯಾರಿ ಹಾಗೂ ಮೇಘನ್‌ ಮಾರ್ಕೆಲ್‌ (Prince Harry and Meghan Markle) ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಸದ್ಯದಲ್ಲೇ ಅವರಿಬ್ಬರು ವಿಚ್ಛೇದನ (divorce) ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಕುಟುಂಬದ ಮೂಲಗಳನ್ನು ಉಲ್ಲೇಖಿಸಿ ಹಲವು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಇದನ್ನು ವರದಿ ಮಾಡಿವೆ.

ಬ್ರಿಟನ್ ರಾಜಕುಮಾರ ಹ್ಯಾರಿ ಆತ್ಮಕತೆ 'ಸ್ಪೇರ್' ಮೊದಲ ದಿನವೇ ದಾಖಲೆಯ ಮಾರಾಟ

2018ರ ಮೇ 19ರಂದು ಮದುವೆಯಾಗಿದ್ದ ಈ ಜೋಡಿ ಇದೀಗ ಬೇರೆಯಾಗಲು ನಿರ್ಧರಿಸಿದ್ದಾರೆ ಎಂಬುದರ ಕುರಿತಾಗಿ ಕಳೆದ ಕೆಲವು ವಾರಗಳಿಂದ ವದಂತಿಗಳು ಹರಿದಾಡುತ್ತಿದ್ದು, ರಾಜ ಕುಟುಂಬದ ಸೇವಕರು ಇದನ್ನು ದೃಢಪಡಿಸಿದ್ದಾರೆ ಎನ್ನಲಾಗಿದೆ. ರಾಜಕುಮಾರಿ ಡಯಾನ ಅವರ ಸೇವಕನಾಗಿದ್ದ ಪಾಲ್‌ ಬಾರೆಲ್‌ (Paul Barrell) ಈ ವಿಷಯದ ಕುರಿತಾಗಿ ಮಾತನಾಡಿದ್ದು, ಮೇಘನ್‌ ಮತ್ತು ಹ್ಯಾರಿ ಶೀಘ್ರದಲ್ಲೇ ದೂರವಾಗಲಿದ್ದಾರೆ ಎಂದಿದ್ದಾರೆ.

 ನ್ಯೂಯಾರ್ಕಲ್ಲಿ ಪ್ರಿನ್ಸ್‌ ಹ್ಯಾರಿ ಎರ್ರಾಬಿರ್ರಿ ಕಾರು ಚಾಲನೆ

ನ್ಯೂಯಾರ್ಕ್: ಛಾಯಾಗ್ರಾಹಕರಿಂದ ಪಾರಾಗಲು ಬ್ರಿಟನ್‌ನ ಪ್ರಿನ್ಸ್‌ ಹ್ಯಾರಿ ನ್ಯೂಯಾರ್ಕ್‌ನಲ್ಲಿ ಎರ್ರಾಬಿರ್ರಿ ಕಾರು ಚಾಲನೆ ಮಾಡಿ ಇತರರ ಪ್ರಾಣಕ್ಕೆ ಸಂಚಕಾರ ತರುವ ಭೀತಿ ಸೃಷ್ಟಿಸಿದ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಸಂಜೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಛಾಯಾಗ್ರಾಹಕರು ಹ್ಯಾರಿ ಬೆನ್ನು ಬಿದ್ದಿದ್ದಾರೆ. ಈ ವೇಳೆ 2 ಗಂಟೆ ಹ್ಯಾರಿ ಅತಿ ವೇಗವಾಗಿ ಕಾರು ಚಲಾಯಿಸಿದ್ದು, ರಸ್ತೆಯಲ್ಲಿ ಇತರ ವಾಹನ ಚಾಲಕರು, ಪಾದಚಾರಿಗಳು ಹಾಗೂ ನ್ಯೂಯಾರ್ಕ್‌ನ ಇಬ್ಬರು ಪೊಲೀಸ್‌ ಸಿಬ್ಬಂದಿಗೆ ಗುದ್ದುವುದು ಸ್ಪಲ್ಪದರಲ್ಲೇ ತಪ್ಪಿದೆ. ಪ್ರಿನ್ಸ್‌ ಹ್ಯಾರಿ ಜೊತೆಗೆ ಅವರ ಪತ್ನಿ ಮೇಘನ್‌ ಹಾಗೂ ಮೇಘನ್‌ ಅವರ ತಾಯಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಹಿರಿಯ ಮಹಿಳೆ ಜತೆ ನನ್ನ ಮೊದಲ ರತಿಕ್ರೀಡೆ : ಆತ್ಮಕತೆಯಲ್ಲಿ ಪ್ರಿನ್ಸ್‌ ಹ್ಯಾರಿ

click me!