
ಇಸ್ಲಮಾಬಾದ್(ಸೆ.23): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮಗಳು ಹಾಗೂ ರಾಜಕಾರಣಿ ಮರಿಯಂ ನವಾಜ್ ಷರೀಫ್ ಅಲ್ಲಿನ ಸೇನೆ ಬಗ್ಗೆ ಸಾರ್ವಜನಿಕವಾಗೇ ಕಿಡಿ ಕಾರಿದ್ದಾರೆ.
4 ವರ್ಷ ಅವಧಿಯಲ್ಲಿ 2120 ಪಾಕಿಸ್ತಾನಿಗಳಿಗೆ ಭಾರತ ಪೌರತ್ವ: ಕೇಂದ್ರ
ಹೌದು ಗಿಲ್ಗಿಟ್–ಬಾಲ್ಟಿಸ್ತಾನವನ್ನು ಪಾಕಿಸ್ತಾನದ ಪ್ರಾಂತ್ಯವನ್ನಾಗಿಸುವ ಇಲ್ಲಿನ ಸೇನೆಯ ನಿರ್ಧಾರವನ್ನು ಖಂಡಿಸಿರುವ ಮರಿಯಂ ನವಾಜ್ ಷರೀಫ್ ಸಾರ್ವಜನಿಕವಾಗೇ ಸೇನೆ ವಿರುದ್ಧ ಹರಿ ಹಾಯ್ದಿದ್ದಾರೆ. ಸ್ವಾತಂತ್ರ್ಯ ಇಲ್ಲಿನ ಸ್ಥಳೀಯರ ಹಕ್ಕು. ಆದರೆ ಸೇನೆಯ ನಿರ್ಧಾರದಿಂದ ಇಲ್ಲಿನ ಜನರಿಗೆ ಅನ್ಯಾಯವಾಗಲಿದೆ ಎಂದಿದ್ದಾರೆ. ಮರಿಯಂರವರ ಈ ಮಾತುಗಳು ಜನರಲ್ ಬಾಜ್ವಾಗೆ ತೀವ್ರ ಮುಜುಗರವುಂಟು ಮಾಡಿದೆ.
ಅಲ್ಲದೇ ಇದೊಂದು ರಾಜಕೀಯ ವಿಚಾರವಾಗಿದ್ದು, ಸಂಸತ್ತಿನಲ್ಲಿ ನಾಯಕರು ಈ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಈ ಬಗ್ಗೆ GHQನಲ್ಲಿ ಚರ್ಚೆ ನಡೆಸಿದ್ದು ಸರಿಯಲ್ಲ ಎಂದೂ ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ