
ಬೀಜಿಂಗ್(ಸೆ. 22) ಭಾರತ ಮತ್ತು ಚೀನಾ ಗಡಿಯಲ್ಲಿನ ವಾತಾವರಣದ ಅರಿವು ಎಲ್ಲರಿಗೂ ಇದ್ದೆ ಇದೆ. ಎರಡು ರಾಷ್ಟ್ರಗಳು ಗಡಿಯಲ್ಲಿ ಸೈನಿಕರ ಜಮಾವಣೆ ರಹಸ್ಯವಾಗಿಯೇನೂ ಉಳಿದಿಲ್ಲ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಚೀನಿ ಸೈನಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಪಾಕಿಸ್ತಾನದ ಹಾಸ್ಯ ನಟ ಜಿಯಾದ್ ಹಮೀದ್ ಚೀನಿ ಸೈನಿಕರಿಗೆ ಸಂಬಂಧಿಸಿದ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಲಡಾಕ್ ಗಡಿಗೆ ನಿಯೋಜನೆ ಮಾಡಿದ್ದಕ್ಕೆ ಚೀನಾ ಸೈನಿಕರು ಬಸ್ ನಲ್ಲಿಯೇ ಗೋಳಿಡುತ್ತಿರುವ ದೃಶ್ಯ ಅದರಲ್ಲಿದ್ದು ವೈರಲ್ ಆಗಿದೆ.
ಚೀನಾಕ್ಕೆ ಗಡಿಯಲ್ಲಿ ಭಾರತದ ಡಬಲ್ ಶಾಕ್
ಮುಂದುವರಿದು ಬರೆದಿರುವ ಹಾಸ್ಯ ನಟ ಪಾಕಿಸ್ತಾನಿಗಳು ಚೀನಾಕ್ಕೆ ಬೆಂಬಲ ನೀಡುತ್ತಿದ್ದು, ಧೈರ್ಯಗುಂದದಿರಿ ಎಂದಿದ್ದಾರೆ! ವಿಚಾಟ್ ನ ಪುಯಾಂಗ್ ಸಿಟಿ ವೀಕ್ಲಿಯಲ್ಲಿ ಮೊದಲು ಈ ವಿಡಿಯೋ ಅಪ್ ಲೋಡ್ ಆಗಿತ್ತು. ನಂತರ ಡಿಲೀಟ್ ಮಾಡಲಾಗಿದೆ. ಒಟ್ಟಿನಲ್ಲಿ ಚೀನಾ ಸೈನಿಕರ ಆಕ್ರಂದನ ಮಾತ್ರ ನೋಡಲು ಅಸಾಧ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ