ಪ್ಯಾರಿಸ್‌ಗೆ ಬಂದಿಳಿದ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದ ಫ್ರಾನ್ಸ್‌ ಪ್ರಧಾನಿ!

By Suvarna News  |  First Published Jul 13, 2023, 5:08 PM IST

ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಗಿದೆ. ಖುದ್ದು ಫ್ರಾನ್ಸ್ ಪ್ರಧಾನಿಯೇ ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.


ಪ್ಯಾರಿಸ್(ಜು.13) ಫ್ರಾನ್ಸ್‌ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ ಸ್ವಾಗತ ನೀಡಲಾಗಿದೆ. ಪ್ಯಾರಿಸ್‌ಗೆ ಬಂದಿಳಿದ ಮೋದಿಗೆ ರೆಡ್ ಕಾರ್ಪೆಟ್ ಮೂಲಕ ಸ್ವಾಗತ ಕೋರಲಾಗಿದೆ. ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೊರ್ನೆ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಮೋದಿಯನ್ನು ಬರಮಾಡಿಕೊಂಡಿದ್ದಾರೆ. ಬಳಿಕ ಫ್ರಾನ್ಸ್ ಸೇನಾ ತುಕಡಿಗಳು ಮೋದಿಗೆ ಗೌರವ ನೀಡಿದೆ. ಇತ್ತ ಪ್ಯಾರಿಸ್ ಹೊಟೆಲ್ ಸುತ್ತ ಅನಿವಾಸಿ ಭಾರತೀಯರು ಮೋದಿ ಮೋದಿ ಎಂದು ಜಯಘೋಷ ಹಾಕಿದ್ದಾರೆ. ಇಂದು ಮೋದಿಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಔತಣಕೂಟ ಆಯೋಜಿಸಿದ್ದಾರೆ.

ನಾಳೆ ಪ್ರಧಾನಿ ನರೇಂದ್ರ ಮೋದಿ ಫ್ರೆಂಚ್ ರಾಷ್ಟ್ರೀಯ ದಿನ ಬಾಸ್ಟಿಲ್ ದಿನಾಚರಣೆಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ದಿನಾಚರಣೆಯಲ್ಲಿ ಭಾರತೀಯ ವಾಯುಪಡೆಯ ವಿಮಾನವು ವೈಮಾನಿಕ ಪ್ರದರ್ಶನ ನೀಡಲಿದೆ.  ಮತ್ತೊಂದು ವಿಶೇಷತೆ ಎಂದರೆ ಭಾರತ ಹಾಗೂ ಫ್ರಾನ್ಸ್ ಪಾಲುದಾರಿಗೆ 25ನೇ ವಾರ್ಷಿಕೋತ್ಸವದ ಸಂಭ್ರಮ. ಭಾರತ ಹಾಗೂ ಫ್ರಾನ್ಸ್ ರಕ್ಷಣೆ, ವ್ಯಾಪಾರ, ಹೂಡಿಕೆ, ಶಿಕ್ಷಣ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ.  

Tap to resize

Latest Videos

ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಭಾರತವೇ ಆಧಾರ, ಫ್ರಾನ್ಸ್ ಭೇಟಿ ಬೆನ್ನಲ್ಲೇ ಮೋದಿ ಮನದ ಮಾತು!

ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ಫ್ರಾನ್ಸ್ ಭೇಟಿಯಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. 2022ರಲ್ಲಿ ಫ್ರಾನ್ಸ್‌ಗೆ ನನ್ನ ಕೊನೆಯ ಅಧಿಕೃತ ಭೇಟಿಯ ನಂತರ,ಮೇ 2023ರಲ್ಲಿ ಜಪಾನ್‌ನ ಹಿರೋಷಿಮಾದಲ್ಲಿ G-7 ಶೃಂಗಸಭೆಯಲ್ಲಿ ಅಧ್ಯಕ್ಷ ಮ್ಯಾಕ್ರಾನ್  ಭೇಟಿ ಮಾಡುವ ಅವಕಾಶ ನನಗೆ ಹಲವಾರು ಬಾರಿ ಸಿಕ್ಕಿತ್ತು. ಗೌರವಾನ್ವಿತ ಫ್ರೆಂಚ್ ನಾಯಕರೊಂದಿಗೆ ನಾನು ಸಂವಾದ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಪ್ರವಾಸಕ್ಕೂ ಮುನ್ನ ಹೇಳಿದ್ದರು. ಎಲಿಸಬೆತ್ ಬೋರ್ನ್, ಫ್ರಾನ್ಸ್ ಪ್ರಧಾನ ಮಂತ್ರಿ ಗೌರವಾನ್ವಿತ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್, ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಾದ  ಯೆಲ್ ಬ್ರೌನ್ ಪಿವೆಟ್ ಭೇಟಿಯಾಗಿ ಮಾತುಕತೆ ನಡೆಸಲಿದ್ದೇನ ಎಂದು ಮೋದಿ ಹೇಳಿದ್ದರು.

ನನ್ನ ಫ್ರಾನ್ಸ್ ಭೇಟಿ ಸಮಯದಲ್ಲಿ ಭಾರತೀಯ ಸಮುದಾಯವನ್ನು ಭೇಟಿ ಮಾಡಲು ನನಗೆ ಅವಕಾಶವಿದೆ. ಎರಡೂ ದೇಶಗಳ ಪ್ರಮುಖ ಕಂಪನಿಗಳ ಸಿಇಒಗಳು ಮತ್ತು ಪ್ರಮುಖ ಫ್ರೆಂಚ್ ಗಣ್ಯರನ್ನು ಭೇಟಿಯಾಗಲಿದ್ದೇನೆ. ನನ್ನ ಭೇಟಿಯು ನಮ್ಮ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದ್ದರು. 

ಮೋದಿಯಿಂದ ಧರ್ಮಾತೀತ ಸಮಗ್ರ ಅಭಿವೃದ್ಧಿ: ಪ್ರಧಾನಿ ಬಗ್ಗೆ ಸೌದಿ ಇಸ್ಲಾಮಿಕ್‌ ಮುಖಂಡ ಅಲ್‌ ಇಸ್ಸಾ ಪ್ರಶಂಸೆ

ಫ್ರಾನ್ಸ್ ಪ್ರವಾಸ ಮುಗಿಸಿದ ಬಳಿಕ ಪ್ರಧಾನಿ ಮೋದಿ ಜುಲೈ 15 ರಂದು ಅರಬ್ ಎಮಿರೈಟ್ಸ್‌ನ ಅಬುಧಾಬಿಗೆ ಭೇಟಿ ನೀಡಲಿದ್ದಾರೆ. ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಎಚ್.ಎಚ್. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಲಿದ್ದಾರೆ.  ಯುಎಇ ಜೊತೆ  ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಹಣಕಾಸು ತಂತ್ರಜ್ಞಾನ, ರಕ್ಷಣೆ, ಭದ್ರತೆಯಲ್ಲಿ ಹಲವು ದ್ವಿಪಕ್ಷೀಯ ಸಂಬಂಧ ಹೊಂದಿದೆ.  

ಯುಎಇ ಈ ವರ್ಷದ ಕೊನೆಯಲ್ಲಿ UNFCCC -COP-28 ಸಭೆ ಆಯೋಜಿಸಿದೆ. ಹವಾಮಾನ ಬದಲಾವಣೆಯ ವಿಶ್ವಸಂಸ್ಥೆ ಮಾರ್ಗಸೂಚಿ ಒಪ್ಪಂದ ಸಮಾವೇಶ ಪಕ್ಷಗಳ 28ನೇ ಸಮ್ಮೇಳನ ಪ್ರಸ್ತುತ ಅತೀ ಅಗತ್ಯವಾಗಿದೆ.  ಪ್ಯಾರಿಸ್ ಒಪ್ಪಂದದ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಹವಾಮಾನ ಕ್ರಿಯೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಸಹಕಾರ ಬಲಪಡಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಈ ಯುಎಇ ಭೇಟಿ ನೆರವಾಗಲಿದೆ ಎಂದು ಮೋದಿ ಹೇಳಿದ್ದರು. 

click me!