ಟೈಟಾನಿಕ್ ಅವಶೇಷ ನೋಡಲು ಹೋಗಿ ಶೇಷರಾದವರ ಕತೆ: ಸಾವಿನ ಆ 48 ಸೆಕೆಂಡ್‌ಗಳು...!

Published : Jul 13, 2023, 11:35 AM ISTUpdated : Jul 13, 2023, 11:41 AM IST
ಟೈಟಾನಿಕ್ ಅವಶೇಷ ನೋಡಲು ಹೋಗಿ ಶೇಷರಾದವರ ಕತೆ: ಸಾವಿನ ಆ 48 ಸೆಕೆಂಡ್‌ಗಳು...!

ಸಾರಾಂಶ

1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರ ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗಿ ಸ್ಫೋಟಗೊಂಡ ಸಬ್‌ ಮೆರಿನ್‌ನಲ್ಲಿ ಸಾವಿನ ಕೊನೆಕ್ಷಣ ಹೇಗಿತ್ತು? ಸ್ಪೇನ್‌ನ ಎಂಜಿನಿಯರ್‌ ಜೋಸ್‌ ಲೂಯಿಸ್‌ ಮಾರ್ಟಿನ್‌ ವಿಶ್ಲೇಷಣೆ ಇಲ್ಲಿದೆ

ಮ್ಯಾಡ್ರಿಡ್‌: ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡಲು ಹೋಗಿದ್ದ ಟೈಟಾನ್‌ ಸಬ್‌ಮರೀನ್‌ ಕೇವಲ 71 ಸೆಕೆಂಡ್‌ನಲ್ಲಿ ಸಂಪೂರ್ಣವಾಗಿ ನಾಶವಾಯಿತು. ದುರಂತ ನಡೆಯುವ 48 ಸೆಕೆಂಡ್‌ ಮೊದಲೇ ಎಲ್ಲರಿಗೂ ಸಾಯುತ್ತೇವೆ ಎಂಬುದು ಗೊತ್ತಾಗಿತ್ತು ಎಂದು ಸ್ಪೇನ್‌ನ ಎಂಜಿನಿಯರ್‌ ಒಬ್ಬರು ಹೇಳಿದ್ದಾರೆ.

ಟೈಟಾನ್‌ ಸಬ್‌ಮರೀನ್‌ ಹೇಗೆ ನಾಶವಾಗಿರಬಹುದು ಎಂಬುದರ ಕುರಿತಾಗಿ ನೀರಿನಾಳದ ತಜ್ಞ ಜೋಸ್‌ ಲೂಯಿಸ್‌ ಮಾರ್ಟಿನ್‌ ಈ ವಿಷಯವನ್ನು ಹಂಚಿಕೊಂಡಿದ್ದು, ಈ ಮಾಹಿತಿಗಳು ಭಯಾನಕವಾಗಿವೆ. ಸಮುದ್ರದ ಮೇಲ್ಮೈನಿಂದ 13 ಸಾವಿರ ಅಡಿ ಆಳದಲ್ಲಿ ಚಲಿಸುತ್ತಿದ್ದ ಸಬ್‌ಮರೀನ್‌ನಲ್ಲಿ ಉಂಟಾದ ಎಲೆಕ್ಟ್ರಿಕಲ್‌ ದೋಷದ ಕಾರಣವಾಗಿ ಅದರ ಕವಚ ಸಂಪೂರ್ಣವಾಗಿ ನಾಶವಾಗಿದೆ. ಕೂಡಲೇ ಪೈಲಟ್‌ನ ನಿಯಂತ್ರಣ ತಪ್ಪಿದ ಸಬ್‌ಮರೀನ್‌ ಬಾಣದಂತೆ ಸಮುದ್ರದ ತಳದತ್ತ ಸಾಗಿದೆ. ಈ ವೇಳೆ ಸಬ್‌ಮರೀನ್‌ನಲ್ಲಿ ಸಂಪೂರ್ಣವಾಗಿ ಕತ್ತಲು ಆವರಿಸಿದ್ದು, ಅದರಲ್ಲಿ ಕುಳಿತಿದ್ದವರು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ. ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೊದಲೇ ಸಬ್‌ ಮರೀನ್‌ ಅಂತಃಸ್ಫೋಟಕ್ಕೆ ಒಳಗಾಗಿ ನಾಶವಾಗಿದೆ.

ಸಂಪೂರ್ಣ ಕತ್ತಲಲ್ಲಿ ಏನು ಮಾಡಬೇಕೆಂದು ತೋಚದೇ ಅದರಲ್ಲಿದ್ದ ಪ್ರಯಾಣಿಕರ ಪರಿಸ್ಥಿತಿ ಯಾವುದೇ ಹಾರರ್‌ ಸಿನಿಮಾಗಳಿಗಿಂತ ಕಡಿಮೆ ಇರಲಿಲ್ಲ. ಅಷ್ಟೇ ಅಲ್ಲದೇ ಅಷ್ಟೊಂದು ಆಳದಲ್ಲಿ ಒಂದೇ ಒಂದು ರಂಧ್ರ ಉಂಟಾದರೂ ನೀರು 997 ಕಿ.ಮೀ. ವೇಗದಲ್ಲಿ ಒಳನುಗ್ಗಿ ಕ್ಷಣದಲ್ಲೇ ಎಲ್ಲರನ್ನೂ ಕತ್ತರಿಸಿ ಹಾಕುತ್ತದೆ ಎಂದು ಹೇಳಿದ್ದಾರೆ.

ಘಟನೆ  ಹಿನ್ನೆಲೆ

1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷವನ್ನು ನೋಡುವ ಸಲುವಾಗಿ ಓಷನ್‌ಗೇಟ್ ಸಂಸ್ಥೆ ಈ ಸಬ್‌ಮೆರಿನ್‌ ಪ್ರವಾಸವನ್ನು ಆಯೋಜಿಸಿತ್ತು. ಆದರೆ ದುರಾದೃಷ್ಟವಶಾತ್ ಜೂನ್ 18ರ ಭಾನುವಾರ ಅಟ್ಲಾಂಟಿಕಾ ಸಮುದ್ರಕ್ಕೆ ಜಿಗಿದು ಪ್ರಯಾಣ ಆರಂಭಿಸಿದ ಈ ಕೆಲ ಗಂಟೆಗಳ ನಂತರ ಹಾಗೂ ಟೈಟಾನಿಕ್ ಅವಶೇಷಗಳನ್ನು ತಲುಪಲು ಇನ್ನೆರಡು ಗಂಟೆಗಳಿರುವಾಗ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ಸಬ್‌ಮರೀನ್‌ನಲ್ಲಿ ಗರಿಷ್ಠ 96 ಗಂಟೆಗಳಿಗಾಗುವಷ್ಟು ತುರ್ತು ಆಮ್ಲಜನಕ ಇತ್ತು. ಆದರೆ ಅದು ಮುಗಿದು ಹೋದ ನಂತರವೂ ಸಬ್‌ಮೆರಿನ್ ಪತ್ತೆಯಾಗಿರಲಿಲ್ಲ.

ಈ ಪುಟ್ಟ ಜಲಾಂತರ್ಗಾಮಿಯಲ್ಲಿ ಬ್ರಿಟನ್‌ನ ಉದ್ಯಮಿ  ಸಾಹಸಿ ಹಮಿಶ್ ಹಾರ್ಡಿಂಗ್, ಟೈಟಾನಿಕ್ ತಜ್ಞ ಹಾಗೂ ಫ್ರಾನ್ಸ್‌ನ ಆಳ ಸಮುದ್ರ ಶೋಧಕ ಪೌಲ್-ಹೆನ್ರಿ ನರ್ಗೆಲೆಟ್, ಪಾಕಿಸ್ತಾನ ಮೂಲದ ಅತ್ಯಂತ ಶ್ರೀಮಂತ ಉದ್ಯಮಿ ಶಹಜಾದಾ ದಾವೂದ್, ದಾವೂದ್ ಪುತ್ರ ಸುಲೇಮಾನ್ ದಾವೂದ್ ಮತ್ತು ಓಷನ್‌ಗೇಟ್ ಸಿಇಒ ಸ್ಟಾಕ್‌ಟನ್ ರಶ್ ಈ ಪುಟ್ಟ  ಸಬ್‌ಮೆರಿನ್‌ನಲ್ಲಿದ್ದರು. ಸಬ್‌ ಮೆರಿನ್ ನಾಪತ್ತೆಯಾದ ನಂತರ ಅಮೆರಿಕಾದ ಕೋಸ್ಟ್ ಗಾರ್ಡ್ ಮತ್ತು ಇತರ ಸಂಸ್ಥೆಗಳ ಅತ್ಯುತ್ತಮ ಹುಡುಕಾಟದ ಪ್ರಯತ್ನಗಳ ಹೊರತಾಗಿಯೂ, ಗುರುವಾರ ಜೂನ್ 22ರಂದು ಈ ಸಬ್‌ಮೆರಿನ್‌ನ  ಶೋಧದ ಪ್ರದೇಶದಲ್ಲಿ ಅದರ ಅವಶೇಷಗಳು ಕಂಡುಬಂದಿದ್ದವು. 

ಟೈಟಾನಿಕ್ ಅವಶೇಷ ನೋಡ ಹೊರಟ ಸಬ್‌​ಮ​ರೀ​ನ್‌ ಅವ​ಶೇಷ ಪತ್ತೆ: ​ಪ್ರವಾ​ಸಿ​ಗರು ಜಲ​ಸ​ಮಾ​ಧಿ?

ಹೀಗಾಗಿ ಟೈಟಾನ್ ಹೆಸರಿನ ಈ  ನೌಕೆಯು ಸ್ಫೋಟಗೊಂಡಿದೆ ಹಾಗಾಗಿ ಹಡಗಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಕೋಸ್ಟ್ ಗಾರ್ಡ್ ಘೋಷಣೆ ಮಾಡಿತ್ತು. ಇದಾದ ಕೆಲ ದಿನಗಳ ನಂತರ ಈ ಟೈಟಾನ್ ಸಬ್‌ಮೆರಿನ್‌ನ ಅವಶೇಷಗಳನ್ನು ರಕ್ಷಣಾ ತಂಡ ಸಮುದ್ರದಿಂದ ಹೊರಗೆ ತೆಗೆದಿದ್ದು, ಅದರ ಫೋಟೋವನ್ನು ಬಿಡುಗಡೆಗೊಳಿಸಿತ್ತು. 

ಟೈಟಾನಿಕ್ ಅವಶೇಷಗಳ ವೀಕ್ಷಣೆಗೆ ಪ್ರವಾಸಿಗರ ಕರೆದೊಯ್ದ ಜಲಂತರ್ಗಾಮಿ ನೌಕೆ ನಾಪತ್ತೆ


1912 ರಲ್ಲಿ ಮುಳುಗಡೆಯಾದ ಟೈಟಾನಿಕ್ ಹಡಗಿನ ಅವಶೇಷವೂ ಸೇಂಟ್ ಜಾನ್ಸ್‌ನ (St John) ದಕ್ಷಿಣಕ್ಕೆ ನ್ಯೂಫೌಂಡ್‌ಲ್ಯಾಂಡ್‌ನ  (Newfoundland)ಸುಮಾರು 435 ಮೈಲಿ (700 ಕಿಮೀ) ದೂರದಲ್ಲಿ ಇದೆ. ಟೈಟಾನಿಕ್‌ ಅವಶೇಷಗಳ ವೀಕ್ಷಣೆಯೂ ಸೇರಿದಂತೆ  3,800m (12,500 ಅಡಿ) ಆಳ ಸಮುದ್ರದಲ್ಲಿ ತೆರಳಲು ಪ್ರವಾಸ ಆಯೋಜಿಸಿದ ಓಷನ್‌ಗೇಟ್ ಸಂಸ್ಥೆ 8 ದಿನಗಳ ಈ ಪ್ರವಾಸಕ್ಕೆ, ಒಬ್ಬರಿಗೆ  250,000 ಡಾಲರ್ ಅಂದರೆ 2,05,11,575 ಭಾರತೀಯ ರೂಪಾಯಿ ದರ ನಿಗದಿ ಮಾಡಿತ್ತು. ಜೂ.18ರಂದು ಸಬ್‌ಮರೀನ್‌ ಹೀಗೆ ಪ್ರವಾಸ ಆರಂಭಿಸಿದ 1.45 ಗಂಟೆ ಬಳಿಕ ಸಂಪರ್ಕ ಕಡಿದುಕೊಂಡಿತ್ತು

ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗಿ ನಾಪತ್ತೆಯಾದ ಐವರು ಯಾರು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!