ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ಡಿಸಾನಾಯಕೆ ಶ್ರೀಲಂಕಾದ ಮುಂದಿನ ಅಧ್ಯಕ್ಷ!

By Santosh Naik  |  First Published Sep 22, 2024, 8:08 PM IST

2024 ರ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜನತಾ ವಿಮುಕ್ತಿ ಪೆರಮುನದ ಅನುರ ಕುಮಾರ ಡಿಸಾನಾಯಕೆ ಗೆಲುವು ಸಾಧಿಸಿದ್ದಾರೆ. 56.34 ಲಕ್ಷ ಮತಗಳನ್ನು ಪಡೆದ ಡಿಸಾನಾಯಕೆ, ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಪ್ರತಿಪಕ್ಷ ನಾಯಕ ಸಜಿತ್ ಒರೆಮದಾಸ ಅವರನ್ನು ಸೋಲಿಸಿದರು. ಈ ಗೆಲುವು ದೇಶದ ಆರ್ಥಿಕ ಕುಸಿತಕ್ಕೆ ಕಾರಣವಾದ ರಾಜಕೀಯ ಸ್ಥಾಪನೆಯ ನಿರಾಕರಣೆಯನ್ನು ಸೂಚಿಸುತ್ತದೆ.


ಕೊಲಂಬೊ (ಸೆ.22): 2024 ರ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಯ ಎಡಪಂಥೀಯ ನಾಯಕ ಅನುರ ಕುಮಾರ ಡಿಸಾನಾಯಕೆ ಗೆಲುವು ಸಾಧಿಸಿದ್ದಾರೆ. ಅವರು ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಸೋಲಿಸಿದರು ಮತ್ತು ದ್ವೀಪ ರಾಷ್ಟ್ರದ ಒಂಬತ್ತನೇ ಕಾರ್ಯಕಾರಿ ಅಧ್ಯಕ್ಷರಾಗಲಿದ್ದಾರೆ ಎಂದು ಶ್ರೀಲಂಕಾದ ಚುನಾವಣಾ ಆಯೋಗವು ಸೆಪ್ಟೆಂಬರ್ 22 ರ ಭಾನುವಾರದಂದು ಘೋಷಿಸಿತು. ಅಧಿಕೃತ ಅಂಕಿಅಂಶಗಳ ಪ್ರಕಾರ, 55 ವರ್ಷದ ಮಾರ್ಕ್ಸ್‌ವಾದಿ ನಾಯಕ 56.34 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ. ಪ್ರತಿಪಕ್ಷದ ನಾಯಕ ಸಜಿತ್ ಒರೆಮದಾಸ 43.63 ಲಕ್ಷ ಮತಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ವಿಕ್ರಮಸಿಂಘೆ 22.99 ಲಕ್ಷ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.

ಶನಿವಾರ ನಡೆದ ಚುನಾವಣೆಯಲ್ಲಿ ಪೀಪಲ್ಸ್ ಲಿಬರೇಷನ್ ಫ್ರಂಟ್ ನ 55ರ ಹರೆಯದ ನಾಯಕ ಅನುರ ಕುಮಾರ ಡಿಸಾನಾಯಕ ಶೇ.42.31ರಷ್ಟು ಮತ ಪಡೆದು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಎಡಪಂಥೀಯ ಒಕ್ಕೂಟವಾದ ಪೀಪಲ್ಸ್ ಲಿಬರೇಶನ್ ಫ್ರಂಟ್ (ಜೆವಿಪಿ) ಯ 55 ವರ್ಷದ ನಾಯಕ ಭಾನುವಾರ ಸಂಪೂರ್ಣ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮುನ್ನವೇ ಗೆಲುವಿನ ಟ್ವೀಟ್‌ ಮಾಡಿದ್ದರು. "ಈ ಗೆಲುವು ನಮ್ಮೆಲ್ಲರಿಗೂ ಸೇರಿದ್ದು" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ, ಚುನಾವಣಾ ಆಯೋಗವು ಅವರ ಮುನ್ನಡೆಯನ್ನು ಈ ವೇಳೆ ಖಚಿತಪಡಿಸಿತ್ತು.

Tap to resize

Latest Videos

undefined

ಕೋಳಿ ಯಾವ ದೇಶದ ರಾಷ್ಟ್ರೀಯ ಪಕ್ಷಿ? ಬಹುಶಃ ನಿಮಗೂ ಈ ಉತ್ತರ ಗೊತ್ತಿರಲಿಕ್ಕಿಲ್ಲ!

ಕೊಲಂಬೊದ ವಸಾಹತುಶಾಹಿ ಯುಗದ ಅಧ್ಯಕ್ಷೀಯ ಕಾರ್ಯದರ್ಶಿ ಕಚೇರಿಯಲ್ಲಿ ಸೋಮವಾರ ಡಿಸಾನಾಯಕೆ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ಅವರ ಅಧಿಕಾರದ ಏರಿಕೆಯು ದೇಶದ ಆರ್ಥಿಕ ಕುಸಿತಕ್ಕೆ ಕಾರಣವಾದ ರಾಜಕೀಯ ಸ್ಥಾಪನೆಯ ನಿರಾಕರಣೆಯನ್ನು ಸೂಚಿಸುತ್ತದೆ. 2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ 3 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದ JVP ಗೆ ಈ ಗೆಲುವು ಪ್ರಮುಖ ತಿರುವುವನ್ನು ಪ್ರತಿನಿಧಿಸುತ್ತದೆ. ಶನಿವಾರ ನಡೆದ ಚುನಾವಣೆಯಲ್ಲಿ ಶೇಕಡಾ 76 ರಷ್ಟು ಮತದಾನವಾಗಿದ್ದು, 17 ಮಿಲಿಯನ್ ಶ್ರೀಲಂಕಾದವರು ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದರು.

ಭಾರತದ ಸುತ್ತಲಿರುವ ಎಲ್ಲಾ ದೇಶಗಳಲ್ಲಿ ಅಸ್ಥಿರತೆ: ಬಾಂಗ್ಲಾದಲ್ಲಿ ಶ್ರೀಲಂಕಾ, ಆಫ್ಘನ್ ದೃಶ್ಯಗಳ ಪುನರಾವರ್ತನೆ

click me!