ಕುಡಿದ ಮತ್ತಿನಲ್ಲಿ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಪ್ರಯಾಣಿಕ: ವಿಮಾನ ತುರ್ತು ಲ್ಯಾಂಡಿಂಗ್

Published : Oct 06, 2025, 02:29 PM IST
Drunk passenger tries to open plane's emergency exit, dragged off by ear

ಸಾರಾಂಶ

Drunk Passenger Trying to Open Emergency Exit :ವಿಮಾನದಲ್ಲಿ ಪ್ರಯಾಣಿಸುತ್ತಿದ್ದವನೋರ್ವ ಕುಡಿದ ಮತ್ತಿನಲ್ಲಿ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಘಟನೆ ನಡೆದಿದೆ. ಕುಡುಕ ಪ್ರಯಾಣಿಕ ಈ ಹಾವಳಿಯಿಂದಾಗಿ ವಿಮಾನವನ್ನು ತುರ್ತು ಲ್ಯಾಂಡ್ ಮಾಡಬೇಕಾಯ್ತು. 

ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಕುಡುಕ ಪ್ರಯಾಣಿಕ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದವನೋರ್ವ ಕುಡಿದ ಮತ್ತಿನಲ್ಲಿ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಘಟನೆ ನಡೆದಿದೆ. ಕುಡುಕ ಪ್ರಯಾಣಿಕ ಈ ಹಾವಳಿಯಿಂದಾಗಿ ವಿಮಾನವನ್ನು ತುರ್ತು ಲ್ಯಾಂಡ್ ಮಾಡಬೇಕಾಯ್ತು. ಫ್ರಾನ್ಸ್‌ನಲ್ಲಿ ಈ ಘಟನೆ ನಡೆದಿದೆ.

ಐರಿಷ್ ಮೂಲದ ವಿಮಾನಯಾನ ಸಂಸ್ಥೆ ರಾಯನ್ಏರ್‌ಗೆ ಸೇರಿದ ವಿಮಾನದಲ್ಲಿ ಈ ಅವಾಂತರ ನಡೆದಿದೆ. ಈ ವಿಮಾನವು ಲಂಡನ್‌ನಿಂದ ಅಲಿಕಾಂಟೆಗೆ ತೆರಳುತ್ತಿತ್ತು. ಆದರೆ ಇದು ಕುಡುಕನ ಪ್ರಯಾಣಿಕನ ಅವಾಂತರದಿಂದಾಗಿ ಫ್ರಾನ್ಸ್‌ನಲ್ಲೇ ತುರ್ತು ಲ್ಯಾಂಡ್ ಆಗಬೇಕಾದ ಅನಿವಾರ್ಯತೆ ಉಂಟಾಯ್ತು. ವಿಮಾನವು ಮಧ್ಯ ಆಗಸದಲ್ಲಿ ಹಾರುತ್ತಿದ್ದಾಗಲೇ ಈ ಕುಡುಕ ಪ್ರಯಾಣಿಕ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ್ದು, ಇದರಿಂದ ವಿಮಾನದಲ್ಲಿ ಭಾರಿ ಕೋಲಾಹಲ ಉಂಟಾಯ್ತು, ಘಟನೆಯೂ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಡುಕನ ಅವಾಂತರದಿಂದಾಗಿ ವಿಮಾನ ತುರ್ತು ಲ್ಯಾಂಡಿಂಗ್

ಹೀಗೆ ಕುಡಿದ ಮತ್ತಿನಲ್ಲಿ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದವನನ್ನು ಬ್ರಿಟಿಷ್ ಪ್ರಜೆ ಡೇನಿಯಲ್ ಆಶ್ಲೆ ಲಾ ಎಂದು ಗುರುತಿಸಲಾಗಿದೆ. ಈತನ ಅಡ್ಡಿಪಡ್ಡಿಸುವ ನಡವಳಿಕೆಯಿಂದ ಪೈಲಟ್‌ಗಳು ವಿಮಾನವನ್ನು ಟೌಲೌಸ್‌ಗೆ ತಿರುಗಿಸಿದರು. ನ್ಯೂಯಾರ್ಕ್ ಪೋಸ್ಟ್ ಉಲ್ಲೇಖಿಸಿದ ವರದಿಗಳ ಪ್ರಕಾರ, ಈ ಬ್ರಿಟಿಷ್ ಪ್ರಜೆ ವಿಮಾನ ಹತ್ತುವ ಮೊದಲೇ ಹೆಚ್ಚಿನ ಪ್ರಮಾಣದಲ್ಲಿ ಸುಂಕ ರಹಿತ ಮದ್ಯವನ್ನು ಸೇವಿಸಿದ್ದ ಎಷ್ಟೆಂದರೆ ನೇರವಾಗಿ ನಿಂತುಕೊಳ್ಳಲು ಕೂಡ ಸಾಧ್ಯವಾಗದಷ್ಟು ಎಂದು ವರದಿಯಾಗಿದೆ.

ಈತನ ಕಿತಾಪತಿಯಿಂದಾಗಿ ವಿಮಾನ ಲ್ಯಾಂಡ್ ಆಗಿದ್ದು, ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವಿಮಾನವೇರಿದ ಫ್ರೆಂಚ್ ಅಧಿಕಾರಿಗಳು ಆತನನ್ನು ಕಿವಿಯಲ್ಲಿ ಹಿಡಿದು ಎಳೆದುಕೊಂಡು ಬಂದು ವಿಮಾನದಿಂದ ಹೊರಗೆ ಹಾಕಿದ್ದಾರೆ. ಈ ವೀಡಿಯೋ ಸ್ವಲ್ಪ ಹೊತ್ತಿನಲ್ಲೇ ಟಿಕ್‌ಟಾಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು. ವೈರಲ್ ಆದ ವೀಡಿಯೋದಲ್ಲಿ ಅಧಿಕಾರಿಗಳು ಆತನನ್ನು ಹೊರಗೆ ಕರೆದೊಯ್ಯಲು ಪ್ರಯತ್ನಿಸುತ್ತಿರುವಾಗ ಆ ವ್ಯಕ್ತಿ ವಿರೋಧಿಸುತ್ತಿರುವುದನ್ನು ನೋಡಬಹುದು. ಒಂದು ಹಂತದಲ್ಲಿ, ಒಬ್ಬ ಅಧಿಕಾರಿ ಆತನನ್ನು ನಿಯಂತ್ರಣಕ್ಕೆ ಪಡೆಯಲು ಅವನ ಕಿವಿಯನ್ನು ಹಿಡಿದು ಎಳೆಯುವುದನ್ನು ಕಾಣಬಹುದು, ಆದರೆ ಪ್ರಯಾಣಿಕರು ಅವನನ್ನು ವಿಮಾನದ ಹಜಾರದಿಂದ ಕೆಳಗೆ ಕರೆದೊಯ್ಯುತ್ತಿದ್ದಂತೆ ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದಾರೆ.

ಈ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಕೆಲವರು ಇದಕ್ಕೆ ಜನಪ್ರಿಯವಾದ 'ನಥಿಂಗ್ ಬೀಟ್ಸ್ ಎ ಜೆಟ್2 ಹಾಲಿಡೇಸ್ ಮೀಮ್ ಆಡಿಯೊವನ್ನು ಸಂಯೋಜಿಸಿ ಪೋಸ್ಟ್ ಮಾಡಿದ್ದು, ಇದು ಆನ್‌ಲೈನ್‌ನಲ್ಲಿ ನೋಡುಗರ ಮೊಗದಲ್ಲಿ ನಗು ಮೂಡಿಸಿದೆ. ಆಶ್ಲೇ-ಲಾಸ್ ತುರ್ತು ನಿರ್ಗಮನ ದ್ವಾರವನ್ನು ತೆಗೆಯಲು ಪ್ರಯತ್ನಿಸಿದಾಗ, ಪೈಲಟ್‌ಗೆ ವಿಮಾನವನ್ನು ಇಳಿಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಪೊಲೀಸ್ ಮೂಲವೊಂದು ವರದಿಗಾರರಿಗೆ ತಿಳಿಸಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅವರ ರಕ್ತದಲ್ಲಿ ಆಲ್ಕೋಹಾಲ್ ಅಂಶ ವಿಪರೀತ ಎನಿಸುವಷ್ಟು ಹೆಚ್ಚಾಗಿದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಲು ಗಂಟೆಗಳು ಬೇಕಾಯಿತು ಎಂದು ವರದಿಯಾಗಿದೆ.

ವಿಪರ್ಯಾಸ ಎಂದರೆ ಆಶ್ಲೇ ಲಾಸ್ ತಮ್ಮ ನಾಲ್ವರು ಆತ್ಮೀಯರೊಂದಿಗೆ ಬ್ಯಾಚುಲರ್ ಪಾರ್ಟಿ ಪ್ರವಾಸದಲ್ಲಿದ್ದರು. ಅವರಲ್ಲಿ ಒಬ್ಬರು ಆಶ್ಲೇ ತಮ್ಮ ಮಗ ಎಂದು ಹೇಳಿಕೊಂಡರು. ಆದರೆ ಕುಡಿತ ಹೆಚ್ಚಾಗಿದ್ದರಿಂದ ಬ್ಯಾಚುಲರ್‌ ಪಾರ್ಟಿಗೆ ಹೊರಟಿದ್ದ ಐವರನ್ನೂ ವಿಮಾನದಿಂದ ಇಳಿಸಿ ವಿಮಾನ ನಂತರ ಮತ್ತೆ ಟೇಕಾಫ್ ಆಗಿದೆ. ಆದರೆ ಆ ಐವರೂ ಕೂಡ ಆರೋಪಗಳನ್ನು ಎದುರಿಸುತ್ತಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!