ಮದುವೆಯಲ್ಲಿ ಫೋಟೋಕ್ಕಾಗಿ ಮದುವೆಯಾಗುವ ಜೋಡಿಗಳು ಅಥವಾ ಕುಟುಂಬಸ್ಥರು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಅದರಲ್ಲೂ ಮದ್ವೆ ಮೊದಲಿನ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅಂತು ಭಿನ್ನ ವಿಭಿನ್ನ ಅಮೋಘವಾಗಿ ಮಾಡುವುದಕ್ಕೆ ಅನೇಕ ಜೋಡಿಗಳು ಯತ್ನಿಸುತ್ತಾರೆ. ಆದರೆ ಇಲ್ಲೊಂದು ಕಡೆ ಮದ್ವೆಗೆ ಫೋಟೋಗ್ರಾಫರ್ ಆಗಿ ಬಂದ ಓರ್ವನ ಸಿಟ್ಟಿನಿಂದ ನೂತನ ವಧುವರರ ಸಿಹಿ ನೆನಪೆಲ್ಲಾ ನೀರಿನ ಮೇಲಿನ ಹೋಮದಂತಾಗಿದೆ. ಊಟದ ಬ್ರೇಕ್ ಕೊಡಲು ನಿರಾಕರಿಸಿದ ಎಂದು ವರನ ಮುಂದೆಯೇ ಫೋಟೋಗ್ರಾಫರ್ ಮದ್ವೆಯ ಫೋಟೋಗಳನ್ನೆಲ್ಲಾ ಡಿಲಿಟ್ ಮಾಡಿ ಹೊರ ನಡೆದಿದ್ದಾನೆ.
ಬರೀ ಇಷ್ಟೇ ಆಗಿದ್ದರೆ ಅದು ಸುದ್ದಿಯಾಗುತ್ತಿರಲಿಲ್ಲ. ಆದರೆ ಸಿಟ್ಟಿನಿಂದ ಮದ್ವೆ ಮನೆಯಿಂದ ಹೊರಟು ಬಂದವನೇ ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದಾನೆ. ಅಲ್ಲದೇ ತಾನು ಮಾಡಿದ್ದು ಸರಿಯೇ ಎಂದು ನೆಟ್ಟಿಗರ ಬಳಿ ಅಭಿಪ್ರಾಯ ಕೇಳಿದ್ದಾನೆ. ಅದು ಸಿಕ್ಕಾಬಟ್ಟೆ ವೈರಲ್ ಆಗಿದ್ದು, ಜನ ಆ ಪೋಸ್ಟ್‌ಗೆ ಭಾರಿ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಆತನ ಪೋಸ್ಟ್ ಹೀಗಿದೆ ನೋಡಿ..
ರೆಡ್ಡಿಟ್‌ನಲ್ಲಿ AmItheAsshole (Reserve6995) ಎಂದು ಹೆಸರಿಟ್ಟುಕೊಂಡಿರುವ ಬಳಕೆದಾರನೋರ್ವ(Users) ಈ ಪೋಸ್ಟ್ ಮಾಡಿದ್ದು, ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರ ಅಲ್ಲಿಲ್ಲ. ಆದರೆ ಆತ ತಾನೊಬ್ಬ ನಾಯಿ ಸಾಕುವವ ಎಂದು ಹೇಳಿಕೊಂಡಿದ್ದಾನೆ. ನಾನೊಬ್ಬ ನಾಯಿ ಸಾಕುವವ (Dog groomer), ಮದ್ವೆ ಫೋಟೋಗಳನ್ನು ಕ್ಲಿಕ್ ಮಾಡುವಷ್ಟು ಪರಿಣಿತ ಫೋಟೋಗ್ರಾಫರ್ ಅಲ್ಲ, ಆದರೆ ನಾನು ನನ್ನ ಶ್ವಾನದ (Dog) ಫೋಟೋಗಳನ್ನು ಹೆಚ್ಚಾಗಿ ತೆಗೆಯುತ್ತಿದ್ದೆ. ಇದನ್ನು ನೋಡಿದ ನನ್ನ ಸ್ನೇಹಿತ, ಫೋಟೋಗಳು ಹೇಗೆ ಬಂದರು ಪರವಾಗಿಲ್ಲ ಎಂದು ಹೇಳಿ ನನ್ನನ್ನು ಆತನ ಮದ್ವೆ ಫೋಟೋ ತೆಗೆಯುವಂತೆ ಮನವೊಲಿಸಿದ. ಹೀಗಾಗಿ 250 ಡಾಲರ್‌ಗೆ ನಾನು ಆತನ ಮದ್ವೆ ಫೋಟೋ ತೆಗೆಯುವುದಾಗಿ ಒಪ್ಪಿಕೊಂಡೆ. ಇದಕ್ಕೆ 10 ಗಂಟೆಗಳ ಅವಧಿಗೆ 250 ಡಾಲರ್ ನಿಡೋದಾಗಿ ಸ್ನೇಹಿತ ಹೇಳಿದ. ಆದರೆ ಆ ಅವಧಿಗೆ ಆ ಹಣ ಏನೇನೂ ಅಲ್ಲ ' ಎಂದು ಫೋಟೋಗ್ರಾಪರ್ ಬರೆದುಕೊಂಡಿದ್ದಾನೆ.
ನಂತರ ಆತ ಮದ್ವೆ ದಿನ ಮದುವೆಯ ಪ್ರತಿಯೊಂದು ಕ್ಷಣವನ್ನು ಕ್ಲಿಕ್ಕಿಸಿದ್ದಾನೆ. ರಿಸೆಪ್ಷನ್ (Reception), ಮದ್ವೆ ಭಾಷಣ (wedding speech), ಜನರ ಬೆರೆಯುವಿಕೆಯಿಂದ ಹಿಡಿದು ಪ್ರತಿಯೊಂದನ್ನು ಕ್ಲಿಕ್ಕಿಸಿದ್ದಾನೆ. ಬೆಳಗ್ಗೆ 11 ಗಂಟೆಗೆ ಶುರು ಮಾಡಿದ ಕೆಲಸ ಸಂಜೆ 7.30 ರ ಸುಮಾರಿಗೆ ಮುಗಿಯುವುದರಲ್ಲಿತ್ತು. ಫೋಟೋ ತೆಗೆದು ತೆಗೆದು ದಣಿದ ಆತ ಈ ನಡುವೆ ಊಟ ನೀರು ಏನನ್ನೂ ಸೇವಿಸಿಲ್ಲ. ಸಮಯ ಕಳೆಯುತ್ತಿದ್ದಂತೆ ಸುಸ್ತಾಗಿದ್ದು, ಈ ಮಧ್ಯೆ ಸಂಜೆ 5 ಗಂಟೆಗೆ ಮದ್ವೆ ಮನೆಯವರು ಎಲ್ಲರಿಗೂ ಮದ್ವೆ ಊಟ ನೀಡಿದ್ದಾರೆ. ಇದೇ ವೇಳೆ ಮೊದಲೇ ಸುಸ್ತಾಗಿದ್ದ ಫೋಟೋಗ್ರಾಪರ್ 20 ನಿಮಿಷ ಆಹಾರ ಸೇವಿಸಲು ಬ್ರೇಕ್ ತೆಗೆದುಕೊಳ್ಳುವುದಾಗಿ ಮದ್ವೆ ಗಂಡಿನ ಬಳಿ ಕೇಳಿದ್ದಾನೆ. ಆದರೆ ಆತ ಒಂದೋ ಫೋಟೋ ತೆಗಿ ಇಲ್ಲ ಎದ್ದು ನಡಿ ಎಂದು ಹೇಳಿದ್ದಾನೆ.
ಇದರಿಂದ ಸಿಟ್ಟಿಗೆದ್ದ ಫೋಟೋಗ್ರಾಫರ್ (Photographer) ಆತನ ಮುಂದೆಯೇ ಎಲ್ಲಾ ಫೋಟೋ ಡಿಲಿಟ್ ಮಾಡಿ ಮದ್ವೆ ಮಂಟಪದಿಂದ ಹೊರಟು ಹೋಗಿದ್ದಾನೆ. ಇತ್ತ ದುಡ್ಡು ಉಳಿಸಲು ಹೋದ ಮಧುಮಗ ಫೋಟೋಗ್ರಾಫರ್ ಕೃತ್ಯಕ್ಕೆ ಇಂಗು ತಿಂದ ಮಂಗನಂತಾಗಿದ್ದಾನೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋಗ್ರಾಫರ್ ಬರೆದುಕೊಂಡಿದ್ದು, ಅನೇಕರು ತಮಾಷೆಯಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಎಂಗರ್(ಸಿಟ್ಟು) ಹಾಗೂ ಹಂಗರ್(ಹಸಿವು) ಮಧ್ಯೆ ಸಣ್ಣ ವ್ಯತ್ಯಾಸವಷ್ಟೇ ಇರುವುದು ಜೋಪಾನ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಫೋಟೋಗ್ರಾಫರ್ ಕರೆಸಿಲ್ಲ ಎಂದು ಮದ್ವೆ ನಿರಾಕರಿಸಿದ ವಧು
ಒಟ್ಟಿನಲ್ಲಿ ದಾಂಪತ್ಯ (Wedlock) ಸುಖ ಸಂತೋಷದಿಂದ ಕೂಡಿದ್ದರೆ ಮದ್ವೆ ಫೋಟೋಗಳು ಸುಂದರ ನೆನಪುಗಳಾಗಿ ಕಡೆ ತನಕ ಇರುವುದು ಅದನ್ನು ಜನ ಬಹಳ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ದಾಂಪತ್ಯ ವಿರಸದಿಂದ ಕೂಡಿ ಸದಾ ಕಿತ್ತಾಟಗಳಿದ್ದರೆ ಅದೇ ಮದ್ವೆ ಫೋಟೋ ಕಹಿ ನೆನಪಾಗಿ ಕಾಡುವುದಂತು ಸುಳ್ಳಲ್ಲ. ಆದರಿಲ್ಲಿ ಫೋಟೋಗ್ರಾಫರ್ ಹಸಿವಿನ ಸಿಟ್ಟಿಗೆ ಮದುವೆಯ ಸಿಹಿ ಕ್ಷಣಗಳೆಲ್ಲಾ ಢಮಾರ್ ಆಗಿದೆ.
Wedding Albumನಲ್ಲಿ ನಿಮ್ಮ ಲುಕ್ ಸಖತ್ತಾಗಿರ್ಬೇಕು ಅಂದ್ರೆ ಹೀಗ್ಮಾಡಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ