ಇರಾನ್‌ನಲ್ಲಿ 2.6 ರೂ.ಗೆ ಪೆಟ್ರೋಲ್: ತೈಲ ಸಂಪದ್ಭರಿತ ವೆನೆಜುವೆಲಾದಲ್ಲಿಯೂ ಪೆಟ್ರೋಲ್‌ಗೆ 5 ರೂ.ಗಿಂತ ಕಡಿಮೆ

Published : Mar 13, 2026, 07:09 AM IST
petrol diesel rate today india 12 march 2026 fuel price big cities delhi mumbai hyderabad lucknow rates

ಸಾರಾಂಶ

ಜಗತ್ತಿನಾದ್ಯಂತ ಇಂಧನ ಬೆಲೆ ಏರಿಕೆಯಾಗುತ್ತಿರುವಾಗ, ಇರಾನ್ ಮತ್ತು ವೆನೆಜುವೆಲಾದಂತಹ ತೈಲ ಸಂಪದ್ಭರಿತ ದೇಶಗಳಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ ₹2.6 ಮತ್ತು ₹3.23 ರಷ್ಟಿದೆ. ಈ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ

ಟೆಹ್ರಾನ್‌: ಇಡೀ ಜಗತ್ತು ಇಂಧನ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ನಡುವೆ, ಯುದ್ಧಪೀಡಿತ ತೈಲ ಸಂಪದ್ಭರಿತ ರಾಷ್ಟ್ರವಾದ ಇರಾನ್‌ನಲ್ಲಿ ಪೆಟ್ರೋಲ್, ಡಿಸೇಲ್ 3 ರು. ಗಿಂತಲೂ ಕಡಿಮೆ ಹಾಗೂ ವೆನಿಜುವೆಲಾದಲ್ಲಿ 5 ರು.ಗಿಂತ ಕಮ್ಮಿ ದರದಲ್ಲಿ ಮಾರಾಟವಾಗುತ್ತಿದೆ ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ತ್ರವಲ್ಲದೇ ಇನ್ನು ಕೆಲ ದೇಶಗಳಲ್ಲಿ ಅತಿ ಕಡಿಮೆ ಬೆಲೆಗೆ ಇಂಧನ ಮಾರಾಟವಾಗುತ್ತಿರುವ ವಿಷಯ ತಿಳಿದು ಬಂದಿದೆ.

ಇರಾನ್‌ನಲ್ಲಿ ₹2.6ಗೆ ಪೆಟ್ರೋಲ್:

ಬೇರೆ ದೇಶಗಳಿಗೆ ಹೋಲಿಸಿದರೆ ಇರಾನ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎರಡೂ ಕಡಿಮೆ. ಇಲ್ಲಿ 1 ಲೀಟರ್ ಪೆಟ್ರೋಲ್ 2.68 ರೂಪಾಯಿಗೆ, ಡೀಸೆಲ್ ಕೇವಲ 55 ಪೈಸೆಗೆ ಸಿಗುತ್ತದೆ. ಇರಾನ್‌ನಲ್ಲಿ ದೊಡ್ಡ ತೈಲ ನಿಕ್ಷೇಪಗಳಿ ರುವುದು ಹಾಗೂ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿರುವುದು ಇದಕ್ಕೆ ಕಾರಣ.

ತೈಲ ಸಂಪದ್ಭರಿತ ವೆನೆಜುವೆಲಾದಲ್ಲಿಯೂ ಪೆಟ್ರೋಲ್‌ಗೆ 5 ರೂ.ಗಿಂತ ಕಡಿಮೆ

ವೆನಿಜುವೆಲಾ: ಜಗತ್ತಿನಲ್ಲಿ ಅತಿದೊಡ್ಡ ತೈಲ ನಿಕ್ಷೇಪ ಹೊಂದಿರುವ ವೆನಿಜುವೆಲಾದಲ್ಲಿ ಪೆಟ್ರೋಲ್ ದರ ಅಂದಾಜು 3.23 ರು.ಗಳಷ್ಟಿದೆ. ಡೀಸೆಲ್ ದರ ಇರಾನ್‌ಗಿಂತಲೂ ಕಮ್ಮಿ. ಇಲ್ಲಿ ಕೇವಲ 37 ಪೈಸೆ. ಇದರ ಜತೆಗೆ ದಶಕಗಳಿಂದಲೂ ಸರ್ಕಾರ ಸಬ್ಸಿಡಿ ನೀಡುತ್ತಿರುವುದೂ ಇದಕ್ಕೆ ಕಾರಣ.

ಇದನ್ನೂ ಓದಿ:  ನ್ಯಾಯೋಚಿತವಲ್ಲದ ವ್ಯಾಪಾರ: ಭಾರತ ಸೇರಿ 16 ದೇಶಗಳ ವಿರುದ್ಧ ತನಿಖೆಗೆ ಟ್ರಂಪ್ ನಿರ್ಧಾರ

ಅಂಗೋಲಾ: ಹಾಗೆಯೇ ತೈಲ ನಿಕ್ಷೇಪ ಹೇರಳವಾಗಿರುವ ಮತ್ತೊಂದು ದೇಶ ಅಂಗೋಲಾ ದಲ್ಲಿಯೂ ಪೆಟ್ರೋಲ್, ಡೀಸೆಲ್ ದರ ಕಡಿಮೆ ಇದೆ. ಇಲ್ಲಿ 1 ಲೀ. ಪೆಟ್ರೋಲ್ ಬೆಲೆ 30.3 ರು., ಡೀಸೆಲ್ ದರ 40.3 ರು ಅಷ್ಟೇ. ದೇಶವು ಪ್ರಮುಖ ಉತ್ಪಾದಕ ತೈಲ ರಾಷ್ಟ್ರವಾಗಿದ್ದು, ದೇಶೀಯ ಉತ್ಪಾದನೆ ಹೆಚ್ಚಿರುವುದು ಇದಕ್ಕೆ ಕಾರಣ. ಇದಲ್ಲದೇ ಕುವೈತ್, ಅಕ್ಟೋರಿಯಾ, ತುರ್ಕಮೆನಿಸ್ತಾನದಂತಹ ರಾಷ್ಟ್ರಗಳಲ್ಲಿಯೂ ಪೆಟ್ರೋಲ್, ಡೀಸೆಲ್ ದರ 50 ರು.ಗಳಿಗಿಂತ ಕಡಿಮೆಯಿದೆ.

ಇದನ್ನೂ ಓದಿ: 683 ಕೋಟಿ ವೆಚ್ಚದಲ್ಲಿ 76 ಮೌಲಾನಾ, 41 ಉರ್ದು ಶಾಲೆ ಪಬ್ಲಿಕ್ ಶಾಲೆಗಳ ಉನ್ನತೀಕರಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಲ್ಲಿ ರಾಷ್ಟ್ರಗಳ ಮೇಲೆ ನಿಲ್ಲದ ಇರಾನ್‌ ದಾಳಿ, ದುಬೈ, ಕುವೈತ್, ಬಹ್ರೈನ್ ಮೇಲೆ ಡ್ರೋನ್, ಕ್ಷಿಪಣಿ ಅಟ್ಯಾಕ್!
ನ್ಯಾಯೋಚಿತವಲ್ಲದ ವ್ಯಾಪಾರ: ಭಾರತ ಸೇರಿ 16 ದೇಶಗಳ ವಿರುದ್ಧ ತನಿಖೆಗೆ ಟ್ರಂಪ್ ನಿರ್ಧಾರ