ಮಲೇಷ್ಯಾ: ತಂತ್ರಜ್ಞಾನಗಳಿಂದ ಎಷ್ಟು ಲಾಭವಿದೆಯೋ ಅದರ ದುರ್ಬಳಕೆಯಿಂದ ಅಷ್ಟೇ ಹಾನಿ ಇದೆ. ಹಾಗೆಯೇ ಈ ಆಧುನಿಕ ಯುಗದಲ್ಲಿ ಈ ಹೊಸ ತಂತ್ರಜ್ಞಾನಗಳು ಮಹಿಳೆಯರ ಸುರಕ್ಷತೆಗೆ ಎಷ್ಟು ರಕ್ಷಣೆ ನೀಡುತ್ತವೋ ಅಷ್ಟೇ ಹಾನಿಯನ್ನು ಮಾಡುತ್ತಿವೆ. ಕೆಲವು ದುರುಳರು ತಂತ್ರಜ್ಞಾನವನ್ನು ತಮ್ಮ ಕೆಟ್ಟ ಚಟಗಳಿಗೆ ಬಳಸುತ್ತಿದ್ದಾರೆ. ಇಂತಹ ವಿದ್ಯಾಮಾನವೊಂದು ಮಲೇಷ್ಯಾದಲ್ಲಿ ಬೆಳಕಿಗೆ ಬಂದಿದೆ.
ಮಲೇಷ್ಯಾ ಹೇಳಿ ಕೇಳಿ ಅತ್ಯಂತ ಮುಂದುವರಿದ ರಾಷ್ಟ್ರ. ಪ್ರವಾಸಿಗರನ್ನು ಸೆಳೆಯುವ ಈ ಮಾಯಾನಗರಿಯಲ್ಲಿ ವಿದೇಶಿಗರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಜೊತೆಗೆ ಹೆಣ್ಮಕ್ಳು ಅಲ್ಲಿ ಸ್ಕರ್ಟ್ ಹಾಕೊಂಡು ತಿರುಗೋದು ಮಾಮೂಲಿ. ಇದನ್ನೇ ಬಂಡವಾಳವಾಗಿಸಿಕೊಂಡ ಕಿಡಿಗೇಡಿಯೊಬ್ಬ ತನ್ನ ಕಾಲಿಗೆ ಮೊಬೈಲ್ ಕಟ್ಟಿಕೊಂಡು ತಿರುಗುತ್ತಿರುವುದು ಕಂಡು ಬಂದಿದೆ. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋನ್ ಅನ್ನು ಚಪ್ಪಲಿಯ ಮೇಲೆ ಉಲ್ಟಾ ಇಟ್ಟು ಈತ ಕಟ್ಟಿದ್ದ. ಅಲ್ಲದೇ ಮಾರುಕಟ್ಟೆಯಲ್ಲಿ ಅತಿತ್ತ ತಿರುಗಾಡುತ್ತಿದ್ದ. ಅನೇಕರಿಗೆ ಈತ ಏಕೆ ಫೋನ್ ಅನ್ನು ಕಾಲಿಗೆ ಕಟ್ಟಿ ತಿರುಗಾಡುತ್ತಿದ್ದಾನೆ ಎಂಬುದರ ಅರಿವಿಲ್ಲ. ಆದರೆ ನಂತರದಲ್ಲಿ ಈತನ ಕಿತಾಪತಿಯ ಅರಿವಾಗಿದೆ.
ವಿಮಾನದಲ್ಲಿ ಮಹಿಳೆಯ ಎದೆಗೆ ಕೈಹಾಕಿ ಕಾಮಚೇಷ್ಟೆ: ಕಾಮುಕನ ಬಂಧನ
ಹೀಗೆ ಕಾಲಿಗೆ ಮೊಬೈಲ್ ಕಟ್ಟಿದ ಈತ ವಿಚಿತ್ರ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಮೊಬೈಲ್ ಕಾಲಿಗೆ ಕಟ್ಟಿದ್ದರಿಂದ ಈತನಿಗೆ ನಡೆದಾಡಲು ಕಷ್ಟವಾಗಿದೆ. ಈ ವೈರಲ್ ಆಗುತ್ತಿರುವ ಚಿತ್ರಗಳನ್ನು ಎಚ್ಚರಿಕೆಯಿಂದ ನೋಡಿದ ನಂತರ, ವ್ಯಕ್ತಿಯು ಮೊಬೈಲ್ ಅನ್ನು ತಲೆಕೆಳಗಾಗಿ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿದೆ. ಅಂದರೆ ಕ್ಯಾಮೆರಾ ಇರುವ ಬದಿಯು ಮೇಲ್ಮುಖವಾಗಿರುವುದನ್ನು ನೀವು ಕಾಣಬಹುದು. ಇದನ್ನು ನೋಡಿದ ಜನರಿಗೆ ಆ ವ್ಯಕ್ತಿ ಯಾಕೆ ಹೀಗೆ ಮಾಡಿದ್ದಾನೆ, ಆತನ ಉದ್ದೇಶವೇನು ಎಂಬುದು ಅರ್ಥವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ವಾಸ್ತವವಾಗಿ, ಈ ವ್ಯಕ್ತಿಯು ಮಾರುಕಟ್ಟೆಯಲ್ಲಿ ಹುಡುಗಿಯರ ಸ್ಕರ್ಟ್ ಅಡಿಯ ಚಿತ್ರಗಳನ್ನು ತೆಗೆಯುತ್ತಿದ್ದ.
ಒಟ್ಟಿನಲ್ಲಿ ಕೆಲ ಕಿಡಿಗೇಡಿಗಳು ತಂತ್ರಜ್ಞಾನವನ್ನು ತಮ್ಮ ಕೆಟ್ಟ ಚಟಗಳಿಗೆ ಹೇಗೆ ಬಳಸುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಇಲ್ಲಿನ್ನು ಜೀನ್ಸ್, ಟೀಶರ್ಟ್ ಬ್ಯಾನ್: ಹೆಣ್ಮಕ್ಳು ದುಪಟ್ಟಾ ಹಾಕ್ಲೇ ಬೇಕು
ಸಾಮಾಜಿಕ ಜಾಲತಾಣಗಳಲ್ಲಿ(Social Media) ಮಹಿಳೆಯರನ್ನು ತನ್ನ ಸ್ನೇಹದ ಬಲೆಗೆ ಬೀಳಿಸಿಕೊಂಡು ಬಳಿಕ ಅವರಿಗೆ ಆಶ್ಲೀಲ ವಿಡಿಯೋ ಕಳುಹಿಸಿ(Porn video) ವಿಕೃತಿ ಮೆರೆಯುತ್ತಿದ್ದ ಜೆಸಿಬಿ ಚಾಲಕನೊಬ್ಬನನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು(Police) ಫೆಬ್ರವರಿಯಲ್ಲಿ ಬಂಧಿಸಿದ್ದರು. ಹಾಸನ(Hasaan) ಜಿಲ್ಲೆ ಅರಕಲಗೂಡು ತಾಲೂಕಿನ ನಿವಾಸಿ ಹರೀಶ್ (27) ಬಂಧಿತನಾಗಿದ್ದು, ಇತ್ತೀಚೆಗೆ ಬಿಳೇಕಳ್ಳಿಯ ಸಂತ್ರಸ್ತೆಯೊಬ್ಬರ ಪತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು(Accused) ಬಂಧಿಸಲಾಗಿತ್ತು(Arrest). ಮಹಿಳೆಯರಿಗೆ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಿ ಆತ ಖುಷಿಪಡುತ್ತಿದ್ದ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಎಂ.ಜೋಷಿ ವಿಚಾರಣೆ ನಂತರ ತಿಳಿಸಿದ್ದರು.
ಅರಕಲಗೂಡಿನ ಹರೀಶ್, ಸ್ಥಳೀಯವಾಗಿ ಜೆಸಿಬಿ ಚಾಲಕನಾಗಿದ್ದ. ನೋಡಲು ಬೆಳ್ಳಗೆ ತೆಳ್ಳಗಿರುವ ಆರೋಪಿ, ಫೇಸ್‌ಬುಕ್‌ನಲ್ಲಿ(Facebook) ಮಹಿಳೆಯರಿಗೆ ಗಾಳ ಹಾಕುತ್ತಿದ್ದ. ತನ್ನ ಬಲೆಗೆ ಬಿದ್ದ ಮಹಿಳೆಯೊಂದಿಗೆ ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಮೊದಲು ಚಾಟಿಂಗ್ ಶುರು ಮಾಡುತ್ತಿದ್ದ. ಸಲುಗೆ ಬೆಳೆದ ಬಳಿಕ ವಾಟ್ಸ್ ಆ್ಯಪ್(WhatsApp) ನಂಬರ್ ಪಡೆಯುತ್ತಿದ್ದ. ಹೀಗೆ ಸ್ನೇಹಿತರಾದ ಮಹಿಳೆಯರಿಗೆ ದಿನ ಕಳೆದಂತೆ ಆಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸಿ ಕುಚೋದ್ಯತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೆ ಕೆಲವು ಮಹಿಳೆಯರಿಗೆ(Woman) ತನ್ನ ನಗ್ನ ಫೋಟೋಗಳನ್ನು ಸಹ ಕಳುಹಿಸಿ ಆತ ವಿಕೃತಿ ಮೆರೆದಿದ್ದ. ಇದೇ ರೀತಿ ಕೆಲ ದಿನಗಳ ಹಿಂದೆ ಬಿಳೇಕಳ್ಳಿ ಸಮೀಪದ ನಿವಾಸಿ ಸಂತ್ರಸ್ತೆ ಸಹ ಫೇಸ್‌ಬುಕ್‌ನಲ್ಲಿ ಆರೋಪಿಗೆ ಪರಿಚಯವಾಗಿದ್ದರು. ಬಳಿಕ ಅವರಿಗೆ ಆಶ್ಲೀಲ ಸಂದೇಶ ಕಳುಹಿಸಿ ಆರೋಪಿ ಕಿರುಕುಳ(Harassment) ಕೊಡುತ್ತಿದ್ದ. ಈ ಹಿಂಸೆ ಸಹಿಸಲಾರದೆ ತನ್ನ ಪತಿಗೆ ಆಕೆ ಹೇಳಿದ್ದರು. ಆನಂತರ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ