Sri Lanka Crisis ಪೆಟ್ರೋಲ್,ಆಹಾರವಿಲ್ಲ, ಲಂಕಾ ಪ್ರಧಾನಿ ರಾನಿಲ್ ಭಾಷಣ, ಏನ್ ಮಾಡ್ಬೋದು ಹೇಳಿ ಎಂದ ಜನ!

By Suvarna News  |  First Published May 16, 2022, 8:30 PM IST
  • ಪೆಟ್ರೋಲ್ ಇಲ್ಲ, ಆಹಾರ ಇಲ್ಲ, ಹಣವೂ ಇಲ್ಲ
  • ಪ್ರಧಾನಿ ರಾನಿಲ್ ವಿಕ್ರಮಸಂಘೆ ಮೊದಲ ಭಾಷಣ
  • ಶ್ರೀಲಂಕಾ ದಿವಾಳಿ, ತುರ್ತು ನೆರವು ಬೇಕು
     

ಕೊಲೊಂಬೊ(ಮೇ.16):  ಶ್ರೀಲಂಕಾದಲ್ಲಿನ ರಾಜಕೀಯ ಬಿಕ್ಕಟ್ಟಿಗೆ ತಾತ್ಕಾಲಿಕ ಬ್ರೇಕ್ ಬಿದ್ದರೂ ಆರ್ಥಿಕ ಬಿಕ್ಕಟ್ಟೂ ಮಾತ್ರ ಸರಿ ದಾರಿಗೆ ಬರುವ ಲಕ್ಷಣ ಗೋಚರಿಸುತ್ತಿಲ್ಲ. ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಾನಿಲ್ ವಿಕ್ರಮಸಿಂಘೆ ದೇಶವನ್ನುದ್ದೇಶಿ ಮೊದಲ ಭಾಷಣ ಮಾಡಿದ್ದಾರೆ. ಈ ವೇಳೆ ದೇಶದಲ್ಲಿ ಕೇವಲ ಒಂದು ದಿನಕ್ಕೆ ಆಗುವಷ್ಟು ಮಾತ್ರ ಪೆಟ್ರೋಲ್ ಇದೆ. ಅಗತ್ಯ ವಸ್ತು ಆಮದು ಮಾಡಿಕೊಳ್ಳಲು ಡಾಲರ್ ಅವಶ್ಯಕತೆ ಇದೆ. ಸದ್ಯ ಲಂಕಾ ದಿವಾಳಿಯತ್ತ ಸಾಗಿದೆ ಎಂದು ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.

ಕೊಲೊಂಬೊ ಹಾರ್ಬರ್‌ನಲ್ಲಿ ಕಾಯುತ್ತಿರುವ 3 ಹಡುಗು ತೈಲಕ್ಕೆ ಹಣ ನೀಡಲೂ ಸರ್ಕಾರದ ಬಳಿ ದುಡ್ಡಿಲ್ಲ. 22 ಮಿಲಿಯನ್ ಜನರು ಒಂದು ಹೊತ್ತಿನ ಆಹಾರಕ್ಕೂ ಪರದಾಡುವಂತಾಗಿದೆ. ಔಷಧಿ, ಚಿಕಿತ್ಸೆ ಸಿಗದೆ ಜನರು ತೀವ್ವ ಅಸ್ವಸ್ಥರಾಗುತ್ತಿದ್ದಾರೆ ಎಂದು ರಾನಿಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

Tap to resize

Latest Videos

ವಿಭೀಷಣನಾಗಿ ಬಂದ ರಾನಿಲ್ ವಿಕ್ರಮಸಿಂಘೆ ಏನಾಗಲಿದೆ ಲಂಕಾ ಮುಂದಿನ ಭವಿಷ್ಯ..?

ಲಂಕಾದ ಪರಿಸ್ಥಿತಿಯನ್ನು ಮುಚ್ಚಿಡುವ ಅಗತ್ಯವಿಲ್ಲ. ಎಲ್ಲವನ್ನೂ ತೆರೆದಿಟ್ಟಿದ್ದೇನೆ. ಮುಂದಿನ ಎರಡರಿಂದ ಮೂರು ತಿಂಗಳು ಲಂಕಾ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಕಿದೆ ಎಂದು ರಾನಿಲ್ ಹೇಳಿದ್ದಾರೆ. ರಾನಿಲ್ ಭಾಷಣಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ. 

ರಾನಿಲ್ ದೇಶದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಎಲ್ಲರೂ ಲಂಕಾಗಾಗಿ ಶ್ರಮಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ರಾನಿಲ್ ಪರ ಸಂದೇಶಗಳು ಹರಿದಾಡುತ್ತಿದೆ. ಅದರ ಜೊತೆಗೆ ವಿರೋಧಗಳು ವ್ಯಕ್ತವಾಗಿದೆ. ಇದೇ ಕಾರಣ ಹಿಂದಿನ ಪ್ರಧಾನಿಯನ್ನು ಕಿತ್ತೊಗೆದಿದ್ದೇವೆ. ಲಂಕಾದ ಪರಿಸ್ಥಿತಿ ನೆಟ್ಟಗಿಲ್ಲ ಅನ್ನೋದು ವಿಶ್ವಕ್ಕೆ ತಿಳಿದಿದೆ. ಸದ್ಯ ಈ ಪರಿಸ್ಥಿತಿಯಿಂದ ಹೊರಬರಲು ಏನು ಮಾಡಬಹುದು ಅನ್ನೋದನ್ನು ಹೇಳಿ, ಮಾಡಿ ತೋರಿಸಿ ಎಂದು ಟೀಕಿಸಿದ್ದಾರೆ.

ದ್ವೀಪರಾಷ್ಟ್ರ ಶ್ರೀಲಂಕಾದ ನೂತನ ಪ್ರಧಾನಿಯಾಗಿ ರನಿಲ್‌ ವಿಕ್ರಮಸಿಂಘೆ 6ನೇ ಬಾರಿಗೆ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದರು.ಈ ನಡುವೆ ವಿಪಕ್ಷಗಳಾದ ಎಸ್‌ಜೆಪಿ ಹಾಗೂ ಜೆವಿಪಿ ಪ್ರಧಾನಿ ನೇಮಕಾತಿಯು ಜನಾದೇಶಕ್ಕೆ ವಿರುದ್ಧವಾಗಿರುವುದರಿಂದÜ ತಾವು ವಿಕ್ರಮಸಿಂಘೆ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ.

Sri Lanka Crisis ಲಂಕನ್ನರು ನುಸುಳುವ ಭೀತಿ, ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ!

ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ನಂತರ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನದಿಂದ ರಾಜೀನಾಮೆ ನೀಡಿದ್ದರು. ಗುರುವಾರ ಯುನೈಟೆಡ್‌ ನ್ಯಾಷನಲ್‌ ಪಕ್ಷದ ನಾಯಕರಾದ ವಿಕ್ರಮಸಿಂಘೆ ಅವರನ್ನು ಶ್ರೀಲಂಕಾದ 26ನೇ ಪ್ರಧಾನಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ರನಿಲ್‌, ‘ಗೊಟಗೋಗಮಾ ಹೋರಾಟ (ಅಧ್ಯಕ್ಷ ಗೊಟಬಯ ಅವರ ರಾಜೀನಾಮೆಗೆ ಹೋರಾಟ)ಮುಂದುವರೆಯಬೇಕು. ಈ ಹೋರಾಟದಲ್ಲಿ ತಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಹೋರಾಟಗಾರರಿಗೆ ಪೊಲೀಸರು ಯಾವುದೇ ತಡೆಯೊಡ್ಡುವುದಿಲ್ಲ. ಹೋರಾಟ ಮುಂದುವರೆಯಲಿ’ ಎಂದಿದ್ದಾರೆ.

ಈ ನಡುವೆ ‘ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲದ ರನಿಲ್‌ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದು ಜನಾದೇಶದ ವಿರುದ್ಧವಾಗಿದೆ’ ಎಂದು ವಿಪಕ್ಷಗಳು ಕಿಡಿಕಾರಿವೆ. 54 ಸದಸ್ಯರ ಬಲವುಳ್ಳ ಸಮಾಗಿ ಜನ ಬಲವೇಗಯಾ ಪಕ್ಷ, 3 ಸದಸ್ಯರ ಬಲ ಹೊಂದಿದ ಜನತಾ ವಿಮುಕ್ತಿ ಪೆರುಮಾನಾ ಹಾಗೂ 10 ಸದಸ್ಯರ ಬಲ ಹೊಂದಿದ ತಮಿಳು ನ್ಯಾಷನಲ್‌ ಅಲೈಯನ್ಸ್‌ ಪಕ್ಷಗಳು ತಾವು ರನಿಲ್‌ಗೆ ಬೆಂಬಲ ಸೂಚಿಸುವುದಿಲ್ಲ ಎಂದು ಘೋಷಿಸಿವೆ. ರಾಜಪಕ್ಸೆ ಕುಟುಂಬದೊಂದಿಗೆ ಆಪ್ತ ಸಂಬಂಧ ಹೊಂದಿದ ರನಿಲ್‌ಗೆ ಪ್ರಸ್ತುತ ವಿಪಕ್ಷಗಳಿಂದ ಅಥವಾ ಜನರಿಂದ ಹೆಚ್ಚಿನ ಬೆಂಬಲ ವ್ಯಕ್ತವಾದಂತಿಲ್ಲ. ಹೀಗಾಗಿ ಸಂಸತ್ತಿನಲ್ಲಿ ಅವರು 225 ಸದಸ್ಯರ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

1993-94ರಲ್ಲಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಹತ್ಯೆಯ ನಂತರ ರನಿಲ್‌ ಮೊಟ್ಟಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ 2001-2004ರ ಅವಧಿಗೆ ಅವರು ಮತ್ತೊಮ್ಮೆ ಪ್ರಧಾನಿಯಾದರು. 2015ರಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಅವಧಿಯಲ್ಲಿ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನಿಯಾಗಿ ರನಿಲ್‌ ನೇಮಕವಾದರು. 2015ರ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅವರನ್ನು ಗೆಲ್ಲಿಸುವ ಮೂಲಕ ನೇಮಕಾತಿಯನ್ನು ಅನುಮೋದಿಸಿದರು. ಡಿ. 2018ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ನೇಮಕವಾದರು. ಆದರೆ ನವೆಂಬರ್‌ 2019ರಲ್ಲಿ ಯುಎನ್‌ಪಿ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆಯಲ್ಲಿ ಸೋತ ನಂತರ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

click me!