
ಮರ್ಲಿನ್ ಮಾನ್ರೋ ಯಾರಿಗೆ ಗೊತ್ತಿಲ್ಲ ಹೇಳಿ 1950-60ರ ದಶಕದ ಅಮೆರಿಕನ್ ಮಾಡೆಲ್ ಹಾಗೂ ಖ್ಯಾತ ನಟಿ ಈಕೆ. ಹಿಂಭಾಗದಲ್ಲಿ ಗಾಳಿಗೆ ಹಾರುವಂತಹ ಮಿನಿ ಸ್ಕರ್ಟ್ ಧರಿಸಿ ಅವರು ನೀಡಿದ ಐಕಾನಿಕ್ ಇಂದಿಗೂ ಸಖತ್ ಫೇಮಸ್, 50-60ರ ದಶಕದಲ್ಲಿ ಸೌಂದರ್ಯದ ಮಾನದಂಡ ಎಂದರೆ ಮರ್ಲಿನ್ ಮನ್ರೋ ಎಂದು ಗುರುತಿಸಲ್ಪಟ್ಟ ಖ್ಯಾತ ನಟಿ. ಹಾಸ್ಯಮಯ ಪಾತ್ರಗಳಿಂದ ಜನರ ನಗಿಸುತ್ತಿದ್ದ ಮರ್ಲಿನ್ ಮನ್ರೋ ತಮ್ಮ ಸ್ಟೈಲ್ ಹಾಗೂ ಸುರುಳಿ ಸುರುಳಿಯಾದ ತಲೆಕೂದಲಿನಿಂದ ಸಾಕಷ್ಟು ಜನ ಸಿನಿ ಪ್ರಿಯರ ಆರಾಧ್ಯದೇವತೆ ಎನಿಸಿದ್ದರು.
ಅವರು ಹಲವು ದಶಕದ ಕಾಲ ಅತಿ ಹೆಚ್ಚು ಸಂಭಾವನೆ ಗಳಿಸುವ ನಟಿ ಎನಿಸಿದ್ದರು. 1962 ರಲ್ಲಿ ಅವರ ಮರಣದ ಹೊತ್ತಿಗೆ ಅವರ ಚಲನಚಿತ್ರಗಳು $200 ಮಿಲಿಯನ್ ಹಣ ಗಳಿಸಿದವು. 1926ರ ಜೂನ್ 1 ರಂದು ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಮನ್ರೋ, ತಮ್ಮ 16 ನೇ ವಯಸ್ಸಿನಲ್ಲಿ ಜೇಮ್ಸ್ ಡೌಘರ್ಟಿ ಅವರನ್ನು ಮದುವೆಯಾಗುವ ಮೊದಲು ತನ್ನ ಬಾಲ್ಯದ ಬಹುಪಾಲು ಭಾಗವನ್ನು ಅನಾಥಾಶ್ರಮಗಳಲ್ಲಿ ಕಳೆದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಅವರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಫಸ್ಟ್ ಮೋಷನ್ ಪಿಕ್ಚರ್ ಯೂನಿಟ್‌ನ ಛಾಯಾಗ್ರಾಹಕನೋರ್ವ ಮನ್ರೋ ಅವರನ್ನು ಭೇಟಿಯಾದ ನಂತರ ಅವರ ಬದುಕಿನಲ್ಲಿ ಅದೃಷ್ಟ ಕುದುರಿತು. ಅವರು ನಂತರದಲ್ಲಿ ಅಮೆರಿಕಾದ ಯಶಸ್ವಿ ಹಾಗೂ ಅತೀ ಹೆಚ್ಚು ಸಂಭಾವನೆಯ ನಟಿ ಹಾಗೂ ಮಾಡೆಲ್ ಎನಿಸಿದರು.
ಮನ್ರೋ ಲಂಗದ ಕೆಳಗೆ ನಿಂತು ಫೋಟೋ ತೆಗೆಸಿಕೊಳ್ಳುವ ಪ್ರವಾಸಿಗರು
ಅವರ ಐಕಾನಿಕ್ ಪೋಸ್ ಆಗಿರುವ ಒಳಗಿರುವ ಒಳಉಡುಪು ಕಾಣುವಂತೆ ಗಾಳಿಗೆ ಹಾರುವ ಮಿನಿಸ್ಕರ್ಟ್ ಪೋಸ್ ಸರ್ವಕಾಲಕ್ಕೂ ಫೇಮಸ್. ಅವರು ಇದೇ ಪೋಸ್‌ನಲ್ಲಿ ಇರುವ ದೊಡ್ಡ ಪ್ರತಿಮೆಯೊಂದು ಅಮೆರಿಕಾದ ಚಿಕಾಗೋದಲ್ಲಿ ನಿರ್ಮಿಸಲಾಗಿದ್ದು, ಈ ಸ್ಥಳ ಸದಾ ಕಾಲ ಪ್ರಾವಸಿಗರ ಹಾಟ್ ಸ್ಪಾಟ್ ಎನಿಸಿದೆ. ಇಲ್ಲಿಗೆ ಬರುವ ಪ್ರವಾಸಿಗರು ಅವರ ಲಂಗದ ಕೆಳಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ.
ದಾರಿಹೋಕರನ್ನು ಮಳೆಯಿಂದ ರಕ್ಷಿಸಿತು ಮರ್ಲಿನ್ ಮನ್ರೋ ಲಂಗ
ಆದರೆ ಜೋರಾಗಿ ಸುರಿಯುತ್ತಿದ್ದ ಮಳೆಯಿಂದ ರಕ್ಷಿಸಿಕೊಳ್ಳುವುದಕ್ಕಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಜನ ಮರ್ಲಿನ್ ಮಾನ್ರೋ ಲಂಗದ ಕೆಳಗೆ ಆಶ್ರಯ ಪಡೆದರು ಎಂದು ಹೇಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿದೆ. ಚಿಕಾಗೋದ ಮ್ಯಾಗ್ನಿಫಿಸೆಂಟ್ ಮೈಲ್‌ನಲ್ಲಿ ನಿರ್ಮಿಸಲಾಗಿರುವ ಈ ಮರ್ಲಿನ್ ಮನ್ರೋ ಅವರ ಪ್ರತಿಮೆ ಅವರ ಐಕಾನಿಕ್ ಫೋಸ್‌ನಲ್ಲಿ ರೂಪುಗೊಂಡಿದ್ದು 26 ಅಡಿ (8 ಮೀಟರ್) ಎತ್ತರವಿದೆ. ಇದನ್ನು 2011ರಲ್ಲಿ ಅನಾವರಣಗೊಳಿಸಲಾಗಿದೆ. ಈ ಪೋಸನ್ನು ದಿ ಸೆವೆನ್ ಇಯರ್ ಇಚ್‌ನಲ್ಲಿ ಮನ್ರೋ ಅವರ ಪಾತ್ರವನ್ನಾಧರಿಸಿದ ಪ್ರತಿಮೆ ಇದು. ಆದರೆ ಮಳೆಯಿಂದ ರಕ್ಷಣೆ ಪಡೆಯುವುದಕ್ಕಾಗಿ ಜನ ಅದರ ಕೆಳಗೆ ಆಶ್ರಯ ಪಡೆದರು ಎಂಬ ವಿಚಾರವೊಂದು ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗ್ತಿದ್ದು, ಜನ ಸಾಕಷ್ಟು ತಮಾಷೆಯ ಕಾಮೆಂಟ್ ಮಾಡ್ತಿದ್ದಾರೆ.
ವೈರಲ್ ಆದ ಫೋಟೋದಲ್ಲಿ ಈ ಹಾಲಿವುಡ್ ತಾರೆಯ ಬಿಳಿ ಉಡುಗೆ ಮೇಲಕ್ಕೆ ಹಾರುತ್ತದೆ. ಸಾರ್ವಜನಿಕ ಚೌಕದಲ್ಲಿ ಸ್ಥಾಪಿಸಲಾದ ಈ ಪ್ರತಿಮೆ ಗ್ಲಾಮರ್ ಮತ್ತು ಕಾಲಾತೀತ ಪಾಪ್ ಸಂಸ್ಕೃತಿಯ ಚಿತ್ರಣವನ್ನು ಸಂಭ್ರಮಿಸುವುದಕ್ಕಾಗಿ ನಿರ್ಮಿಸಲಾಗಿದ್ದರೂ, ಒಂದು ಮಳೆಗಾಲದ ಮಧ್ಯಾಹ್ನ ಇದು ಸಂಪೂರ್ಣವಾಗಿ ಹೊಸ ಉದ್ದೇಶಕ್ಕೆ ಬಳಕೆಯಾಯ್ತು. ಇದ್ದಕ್ಕಿದ್ದಂತೆ ಮಳೆ ಜೋರಾಗಿ ಸುರಿಯಲು ಆರಂಭಿಸುತ್ತಿದ್ದಂತೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನ ಮರ್ಲಿನ್ ಮನ್ರೋ ಐಕಾನಿಕ್ ಸ್ಕರ್ಟ್ ಕೆಳಗೆ ಆಶ್ರಯ ಪಡೆದರು. ಮನ್ರೋ ಅವರ ಈ ಬೃಹತ್ ಗಾತ್ರದ ಉಕ್ಕಿನ ಸ್ಕರ್ಟ್ ತಾತ್ಕಾಲಿಕ ಛತ್ರಿಯಾಗಿ ಜನರಿಗೆ ಆಶ್ರಯ ನೀಡಿತು. ಈ ಫೋಟೋವನ್ನು ನೀವು ಒಮ್ಮೆ ನೋಡಿ...
ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ: ಎಸ್‌ಐಟಿಯಿಂದ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿಯ ಬಂಧನ
ಇದನ್ನೂ ಓದಿ: ಸಾವಿನಿಂದ ಜಸ್ಟ್ ಮಿಸ್: ಕಾರಿನ ಡ್ಯಾಶ್‌ಕ್ಯಾಮ್ ವೀಡಿಯೋ ಭಾರಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ