ಮೆಸಾಚುಸೆಟ್ಸ್: ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೇಲೆ ಚಲಿಸುತ್ತಿದ್ದ ರೈಲಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಬಿದ್ದಿದ್ದು, ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ನದಿಗೆ ಹಾರಿದ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಸಾಚುಸೆಟ್ಸ್ ಬೇ ಸಾರಿಗೆ ಪ್ರಾಧಿಕಾರದ ಒಳ ಬರುವ ಆರೆಂಜ್ ಲೈನ್ ರೈಲು ಇನ್ನೇನು ಮಿಸ್ಟಿಕ್ ನದಿಯನ್ನು ದಾಟಿ ಸೋಮರ್‌ವಿಲ್ಲೆಯಲ್ಲಿರುವ ಅಸೆಂಬ್ಲಿ ನಿಲ್ದಾಣ ಸಮೀಪಿಸಬೇಕು ಎನ್ನುವಷ್ಟರಲ್ಲಿ ಸೇತುವೆ ಮೇಲೆಯೇ ರೈಲಿಗೆ ಬೆಂಕಿ ಹತ್ತಿಕೊಂಡು ಹೊತ್ತಿ ಉರಿಯಲಾರಂಭಿಸಿದೆ. ಈ ವೇಳೆ ಜೀವ ಉಳಿಸಿಕೊಳ್ಳಲು ಕೆಲ ಪ್ರಯಾಣಿಕರು ನದಿಗೆ ಹಾರಿದ್ದಾರೆ. ಅಮೆರಿಕಾದ ಬೋಸ್ಟನ್‌ನ ಉತ್ತರ ಭಾಗದಲ್ಲಿ ಈ ಘಟನೆ ನಡೆದಿದೆ.
ರೈಲಿನಲ್ಲಿದ್ದ ಪ್ರಯಾಣಿಕರು ಬಲವಂತವಾಗಿ ಕಿಟಕಿಯಿಂದ ನದಿಗೆ ಜಿಗಿದಿದ್ದಾರೆ. ನಂತರ ರೈಲಿನ ತಳದಲ್ಲಿದ್ದ ಲೋಹದ ಫಲಕವು ಸಡಿಲಗೊಂಡು ವಿದ್ಯುದೀಕರಣಗೊಂಡ ಮೂರನೇ ಹಳಿಯನ್ನು ಸ್ಪರ್ಶಿಸಿದ ಪರಿಣಾಮ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ದುರಂತದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ತಿಳಿದು ಬಂದಿದೆ. MBTA ಜನರಲ್ ಮ್ಯಾನೇಜರ್ ಸ್ಟೀವ್ ಪೋಫ್ಟಾಕ್ ಘಟನೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಥಮಿಕ ಮಾಹಿತಿ ಪ್ರಕಾರ 6 ಅಡಿ 1 ಇಂಚು ಇರುವೀ ಲೋಹದ ಫಲಕವನ್ನು 'ಸಿಲ್' ಎಂದು ಕರೆಯುತ್ತಾರೆ, ಅದು ರೈಲಿನ ತಳದ ಉದ್ದಕ್ಕೂ ಚಲಿಸುತ್ತದೆ. ಆದರೆ ಇದು ಸಡಿಲಗೊಂಡ ಪರಿಣಾಮ ವಿದ್ಯುತ್ ಪ್ರವಹಿಸುತ್ತಿದ್ದ ಹೈ-ವೋಲ್ಟೇಜ್ ಹಳಿಗೆ ಸ್ಪರ್ಶಿಸಿತ್ತು. ಪರಿಣಾಮ ಇದರಿಂದ ಕಿಡಿ ಹೊತ್ತಿಕೊಂಡು ಬೆಂಕಿ ಉಂಟಾಗಿದೆ ಎಂದು ಅವರು ಹೇಳಿದರು.
ಬೆಂಕಿಯಿಂದ ತಪ್ಪಿಸಿಕೊಳ್ಳುವ ಸಮಯದಲ್ಲಿ ರೈಲಿನ ಪ್ರಯಾಣಿಕರು ಬೋಗಿಯ ನಾಲ್ಕು ಕಿಟಕಿಗಳಿಂದ ಹೊರಗೆ ಹಾರಿದ್ದಾರೆ. ಈ ರೈಲಿನಲ್ಲಿದ್ದ ಸುಮಾರು 200 ಪ್ರಯಾಣಿಕರಲ್ಲಿ ಹೆಚ್ಚಿನವರು MBTA ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟರು ಎಂದು ಪೋಫ್ಟಾಕ್ ಹೇಳಿದರು. ಇನ್ನು ಈ ಸಂದರ್ಭದಲ್ಲಿ ನದಿಗೆ ಹಾರಿದ ಮಹಿಳೆ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದರು ಎಂದು ಅವರು ತಿಳಿಸಿದರು. ಅಲ್ಲದೇ ಈ ಘಟನೆ ನಡೆದ ಎರಡು ನಿಮಿಷಗಳಲ್ಲಿ ಮೂರನೇ ಹಳಿಗೆ ವಿದ್ಯುತ್ ಸ್ಥಗಿತಗೊಳಿಸಲಾಯಿತು ಎಂದು ಅವರು ಹೇಳಿದರು.
ಗುಜರಿ ಕಾರು ತಂದು ಬೆಂಕಿ ಹಚ್ಚಿದ ಕಾಂಗ್ರೆಸ್ಸಿಗರು..!
43 ವರ್ಷ ಹಳೆಯ ಈ ರೈಲನ್ನು ಒಂದು ತಿಂಗಳ ಹಿಂದೆಯೇ ಪರಿಶೀಲಿಸಲಾಗಿತ್ತು, ಈ ವೇಳೆ ಸಡಿಲಗೊಂಡ ಫಲಕದ ಪರಿಶೀಲನೆಯೂ ನಡೆದಿದೆ. ಬೆಂಕಿ ಸಂಭವಿಸಿದ ನಂತರ ಸೇವೆಯಲ್ಲಿರುವ ಇತರ ಆರೆಂಜ್ ಲೈನ್ ಮೇಲೆ ಅದೇ ಫಲಕವನ್ನು ಪರಿಶೀಲಿಸಲಾಯಿತು ಮತ್ತು ಆ ವೇಳೆ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೋಫ್ಟಾಕ್ ಹೇಳಿದರು. ಘಟನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಅನಾಹುತದ ವಿಡಿಯೋ ವೈರಲ್ ಆಗುತ್ತಿದೆ.
ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಬೆಂಕಿ; ಕೂಡಲೇ ನಂದಿಸಿದ ಸಿಬ್ಬಂದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ