ವಿಮಾನ ಪತನಕ್ಕೂ ಮುನ್ನ ಪ್ರಯಾಣಿಕರ ಪ್ರಾರ್ಥನೆ ವಿಡಿಯೋ ಸೆರೆ, ದುರಂತ ಘಟನೆಯ ಚಿತ್ರಣ!

By Chethan Kumar  |  First Published Dec 26, 2024, 2:22 PM IST

ಕಜಕಿಸ್ತಾನದಲ್ಲಿ ಪ್ರಯಾಣಿಕರ ವಿಮಾನ ಪತನದಲ್ಲಿ ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. 29 ಮಂದಿ ಬದುಕುಳಿದಿದ್ದಾರೆ. ವಿಮಾನ ಪತನಕ್ಕೂ ಮುನ್ನ ಹಾಗೂ ನಂತರದ ಭೀಕರ ದೃಶ್ಯಗಳನ್ನು ಪ್ರಯಾಣಿಕರು ಸೆರೆ ಹಿಡಿದ್ದಾರೆ. ಚೀರಾಟ, ಪ್ರಾರ್ಥನೆಯ ಆತಂಕದ ದೃಶ್ಯ ಲಭ್ಯವಾಗಿದೆ.


ಕಜಕಿಸ್ತಾನ್(ಡಿ.26) ಅಜರ್‌ಬೈಜಾನ್ ಏರ್‌ಲೈನ್ಸ್ ಪತನದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರ ಚಿಕಿತ್ಸೆ ಮುಂದುವರಿದಿದೆ. ಇದರ ನಡುವೆ ಸಾವಿನ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. 67 ಪ್ರಯಾಣಿಕರಿದ್ದ ವಿಮಾನ ಅಕ್ಟೌವ್‌ನಲ್ಲಿ ಪತನಗೊಂಡಿತ್ತು. ಭೀಕರ ವಿಮಾನ ದುರಂತದ ವಿಡಿಯೋಗಳು ಕೆಲವೇ ಕ್ಷಣಗಳಲ್ಲಿ ಲಭ್ಯವಾಗಿತ್ತು. ಇದೀಗ ವಿಮಾನ ಪತನದ ವೇಳೆ ಪ್ರಯಾಣಿಕರ ವಿಡಿಯೋ, ಪತನದ ಬಳಿಕದ ವಿಡಿಯೋಗಳು ಲಭ್ಯವಾಗಿದೆ. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಈ ವಿಡಿಯೋ ಸೆರೆ ಹಿಡಿದ್ದಾನೆ. ಪ್ರಯಾಣಿಕರು ಆತಂಕ, ಚೀರಾಡುತ್ತಿರುವ ದೃಶ್ಯಗಳು ಲಭ್ಯವಿದೆ. ಕೆಲವೇ ಹೊತ್ತಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿ ಪತನಗೊಂಡಿದೆ. ಪತನದ ಬಳಿಕವೂ ಪ್ರಯಾಣಿಕ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಆಗಿದೆ.

ವಿಮಾನ ಪತದನ ಕೊನೆಯ ಕ್ಷಣಗಳು ಹಾಗೂ ಪತನದ ನಂತರದ ಕ್ಷಣಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.ವಿಮಾನದೊಳಗೆ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆಕ್ಸಿಜನ್ ಮಾಸ್ಕ್ ಹೊರಗೆ ಎಳೆಯಲಾಗಿತ್ತು. ಪ್ರಯಾಣಿಕರು ಆತಂಕಗೊಂಡಿದ್ದರು. ಹಲವರು ಕಾಪಾಡುವಂತೆ ಕೂಗಿಕೊಳ್ಳುತ್ತಿದ್ದಾರೆ. ಮತ್ತೆ ಕೆಲ ಪ್ರಯಾಣಿಕರು ದೇವರ ಮೋರೆ ಹೋಗಿದ್ದರು. ಕಾರಣ ಈ ಪ್ರಯಾಣಿಕರ ರಕ್ಷಣೆಗೆ ಬೇರೆ ಯಾವುದೇ ಮಾರ್ಗ ಇರಲಿಲ್ಲ.

Tap to resize

Latest Videos

undefined

72 ಪ್ರಯಾಣಿಕರಿದ್ದ ವಿಮಾನ ಅಕ್ತಾವುನಲ್ಲಿ ಪತನ, ಕೊನೆಯ ಕ್ಷಣಗಳ ದೃಶ್ಯ ಸೆರೆ!

ವಿಡಿಯೋ ಸೆರೆ ಹಿಡಿದ ಪ್ರಯಾಣಿಕ ಒಂದೊಂದು ಮಾತುಗಳನ್ನಾಡುತ್ತಾ ಇದರ ನಡುವೆ ದೇವರ ಪ್ರಾರ್ಥನೆ ಮಾಡಿದ್ದಾನೆ. ವಿಮಾನ ಅಕ್ಟೌವ್‌ ಆಗಸದಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಪ್ರತಿ ಸೆಕೆಂಡ್ ಆತಂಕ ಹೆಚ್ಚಾಗುತ್ತಿತ್ತು. ವಿಮಾನ ನೇರವಾಗಿ ಭೂಮಿಯತ್ತ ಧಾವಿಸಿತ್ತು. ನಿಯಂತ್ರಿಸಲು ಪ್ರಯತ್ನಗಳು ನಡೆದರೂ ಪರಿಸ್ಥಿತಿ ಪೈಲೆಟ್ ಕೈಮೀರಿ ಹೋಗಿತ್ತು. ಪ್ರಯಾಣಿಕರ ಕ್ಯಾಬಿನ್ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.

 

The final moments of the Azerbaijan Airlines plane before its crash in Kazakhstan were captured by a passenger onboard.

Aftermath also included in the footage. pic.twitter.com/nCRozjdoUY

— Clash Report (@clashreport)

 

ವಿಮಾನ ನೇರವಾಗಿ ನೆಲಕ್ಕೆ ಅಪ್ಪಳಿಸಿದೆ. ಕೆಲವರ ಕೂಗೂಟ ಕೇಳಿಸುತ್ತಿದೆ. ಮತ್ತೆ ಕೆಲವರ ಪ್ರಾಣ ಪಕ್ಷಿ ನೋಡು ನೋಡುತ್ತಿದ್ದಂತೆ ಹಾರಿ ಹೋಗಿದೆ. ಆದರೆ ಪತನದ ಬಳಿಕವೂ ವಿಡಿಯೋ ರೆಕಾರ್ಡ್ ಆಗಿದೆ. ವಿಮಾನ ನೆಲಕ್ಕೆ ಅಪ್ಪಳಿಸಿ ಪತನದ ಕೆಲ ಹೊತ್ತಿನ ಬಳಿಕ ವಿಡಿಯೋ ರೆಕಾರ್ಡ್ ಮಾಡಿದ ಪ್ರಯಾಣಿಕ ತನ್ನ ಆಪ್ತರು ಹೇಗಿದ್ದಾರೆ ಅನ್ನೋದು ಪ್ರಶ್ನಿಸುತ್ತಿರುವ ದೃಶ್ಯ ಕೂಡ ರೆಕಾರ್ಡ್ ಆಗಿದೆ. ಈ ಎರಡು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಕಜಕಿಸ್ತಾನದಲ್ಲಿ ನಡೆದ ಅಜರ್‌ಬೈಜಾನ್ ಏರ್‌ಲೈನ್ಸ್ ದುರಂತದ ದೃಶ್ಯ ಎನ್ನಲಾಗಿದೆ.

ಕಜಕಿಸ್ತಾನದ ಬಾಕುವಿನಿಂದ ರಷ್ಯಾದ  ಗ್ರೋಜ್ನಿಗೆ ಹೊರಟಿದ್ದ ಪ್ರಯಾಣಿಕ ವಿಮಾನ ಡಿಸೆಂಬರ್ 25ರಂದು ಬೆಳಗ್ಗೆ ಪತನಗೊಂಡಿತ್ತು. ಪತನದ ಬೆನ್ನಲ್ಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿತ್ತು. ರಕ್ಷಣಾ ಕಾರ್ಯದಲ್ಲಿ ನಿರತವಾಗಿತ್ತು. ಇದರ ಪರಿಣಾಮ 29 ಪ್ರಯಾಣಿಕರು ಬದುಕುಳಿದಿದ್ದಾರೆ. ಇನ್ನು ವಿಮಾನ ಪತನಕ್ಕೆ ಸ್ಪಷ್ಟ ಕಾರಣ ಕುರಿತು ತನಿಖೆ ನಡೆಯುತ್ತಿದೆ.

ಮಿಗ್ 29 ಯುದ್ಧ ವಿಮಾನ ಪತನ: ಜಿಗಿದು ಪಾರಾದ ಪೈಲಟ್


 

A surviving passenger from the Aktau plane crash manages to capture footage of inside the cabin pic.twitter.com/shIblEmV1d

— RT (@RT_com)
click me!