ಕ್ರಿಸ್ತನ ಜನ್ಮಸ್ಥಳದಲ್ಲಿ ಸತತ 2ನೇ ವರ್ಷವೂ ನಡೆಯದ ಕ್ರಿಸ್‌ಮಸ್‌!

Published : Dec 25, 2024, 09:26 PM IST
ಕ್ರಿಸ್ತನ ಜನ್ಮಸ್ಥಳದಲ್ಲಿ ಸತತ 2ನೇ ವರ್ಷವೂ ನಡೆಯದ ಕ್ರಿಸ್‌ಮಸ್‌!

ಸಾರಾಂಶ

ಪಶ್ಚಿಮ ದಂಡೆಯಲ್ಲಿನ ಯುದ್ಧದಿಂದಾಗಿ, ಯೇಸುಕ್ರಿಸ್ತನ ಜನ್ಮಸ್ಥಳವಾದ ಬೆತ್ಲೆಹೆಮ್ನಲ್ಲಿ ಕ್ರಿಸ್‌ಮಸ್ ವಾತಾವರಣವು ಕತ್ತಲೆಯಾಗಿದೆ. ನೇಟಿವಿಟಿ ಚರ್ಚ್ ಅನ್ನು ಸತತ ಎರಡನೇ ವರ್ಷ ಯಾವುದೇ ಅಲಂಕಾರ ಮಾಡಲಾಗಿಲ್ಲ. ಉಕ್ರೇನ್ ಮತ್ತು ಸಿರಿಯಾದಲ್ಲೂ ಯುದ್ಧದ ನಡುವೆ ಕ್ರಿಸ್‌ಮಸ್ ಆಚರಣೆಗಳು ನಡೆಯುತ್ತಿವೆ.

ನವದೆಹಲಿ (ಡಿ.25): ಪ್ರಪಂಚದಾದ್ಯಂತ ಕ್ರಿಸ್‌ಮಸ್ ಹಬ್ಬದ ಸಂಭ್ರಮದ ವಾತಾವರಣವಿದೆ. ಚರ್ಚ್‌ಗಳನ್ನು ಅಲಂಕರಿಸಲಾಗಿದೆ, ಮಾರುಕಟ್ಟೆಗಳು ಚಟುವಟಿಕೆಯಿಂದ ಸಂಭ್ರಮದಲ್ಲಿದೆ. 24ರಂದು ರಾತ್ರಿ ವ್ಯಾಟಿಕನ್ ನ ಸೇಂಟ್ ಪೀಟರ್ಸ್ ಬೆಸಿಲಿಕಾ ಚರ್ಚ್ ನ ಪವಿತ್ರ ಬಾಗಿಲು ತೆರೆಯುವ ಮೂಲಕ ಕ್ರೈಸ್ತರ ಪರಮೋಚ್ಚ ಧಾರ್ಮಿಕ ಮುಖಂಡ ಪೋಪ್ ಫ್ರಾನ್ಸಿಸ್ ಕ್ರಿಸ್ ಮಸ್ ಆಚರಣೆಗೆ ಚಾಲನೆ ನೀಡಿದರು. ಅದೇ ಸಮಯದಲ್ಲಿ, ಪಶ್ಚಿಮ ದಂಡೆಯಲ್ಲಿನ ಯುದ್ಧದಿಂದಾಗಿ, ಯೇಸುಕ್ರಿಸ್ತನ ಜನ್ಮಸ್ಥಳವಾದ ಬೆತ್ಲೆಹೆಮ್ನಲ್ಲಿ ವಾತಾವರಣವು ಕತ್ತಲೆಯಾಗಿದೆ. ಅವರ ಜನ್ಮಸ್ಥಳದಲ್ಲಿ ನಿರ್ಮಿಸಲಾದ ನೇಟಿವಿಟಿ ಚರ್ಚ್ ಅನ್ನು ಸತತ ಎರಡನೇ ವರ್ಷ ಯಾವುದೇ ಅಲಂಕಾರ ಮಾಡಲಾಗಿಲ್ಲ. ಇನ್ನೊಂದೆೆ ರಷ್ಯಾ ಕ್ರಿಸ್ಮಸ್ ಸಮಯದಲ್ಲಿ ಇಡೀ ಉಕ್ರೇನ್ ಮೇಲೆ ದಾಳಿ ಮಾಡಿದೆ. ಯುದ್ಧದ ಕಾರಣ, ಉಕ್ರೇನಿಯನ್ ಸೈನಿಕರು ಬಂಕರ್‌ಗಳಲ್ಲಿ ಕ್ರಿಸ್‌ಮಸ್ ಆಚರಿಸುತ್ತಿರುವುದು ಕಂಡುಬಂದಿದೆ. ಮತ್ತೊಂದೆಡೆ, ಅಸಾದ್ ಪರಾರಿಯಾದ ನಂತರ, ಸಿರಿಯಾದಲ್ಲಿ ಕ್ರಿಶ್ಚಿಯನ್ನರು ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ. ಆದರೆ, ಸೋಮವಾರ ರಾತ್ರಿ ಇಲ್ಲಿನ ಕ್ರಿಸ್ಮಸ್ ಟ್ರೀಗೆ ಬೆಂಕಿ ಹಚ್ಚಲಾಗಿದೆ. 

"ಪ್ರತಿ ವರ್ಷ, ಸ್ಕೌಟ್ಸ್, ಗಾಯನ, ಅಲಂಕಾರಗಳು, ಕ್ರಿಸ್‌ಮ್‌ ಟ್ರೀಯನ್ನು ಇಲ್ಲಿ ಇಡಲಾಗುತ್ತಿತ್ತು. ಕ್ಯಾರೊಲ್ಗಳನ್ನು ಹಾಡಲಾಗುತ್ತದೆ ಮತ್ತು ಆಚರಣೆಗಳು ನಡೆಯುತ್ತಿತ್ತು" ಎಂದು ಬೆತ್ಲೆಹೆಮ್ನಲ್ಲಿರುವ ಗ್ರೀಕ್ ಆರ್ಥೊಡಾಕ್ಸ್ ಪ್ಯಾರಿಷ್ ಪಾದ್ರಿ ಫಾದರ್ ಇಸಾ ಥಾಲ್ಜಿಹ್ ತಿಳಿಸಿದ್ದಾರೆ. ಆದರೆ, ಈ ವರ್ಷದ ಕ್ರಿಸ್‌ಮಸ್‌ ಮತ್ತೊಮ್ಮೆ ನಮ್ಮ ಬದುಕಿನಲ್ಲಿ ಕತ್ತಲೆಯನ್ನೇ ತಂದಿದೆ. ಇಲ್ಲಿನ ಯಾರ ಮುಖದಲ್ಲೂ ಸಂಭ್ರಮ ಕಾಣುತ್ತಿಲ್ಲ ಎಂದಿದ್ದಾರೆ. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಸಾಮಾನ್ಯ ಜನಸಂದಣಿಯು ಕೂಡ ಈ ಪ್ರದೇಶದಲ್ಲಿ ಕಾಣಿಸುತ್ತಿಲ್ಲ ಎಂದು ಥಾಲ್ಜಿಹ್ ಹೇಳಿದ್ದಾರೆ. ಈ ವರ್ಷ ಬೆಥ್ ಲೆಹೆಮ್‌ನಿಂದ ಗಾಜಾಕ್ಕೆ ಕರೆ "ತಾಳ್ಮೆ, ದೃಢತೆ, ಪ್ರಾರ್ಥನೆ, ಭರವಸೆ ಮತ್ತು ಸಾಂತ್ವನ" ಎಂದು ಅವರು ಹೇಳಿದರು.

Azerbaijan Airlines Plane Crash: ಪ್ರಯಾಣಿಕರ ಕೊನೇ ಕ್ಷಣದ ವಿಡಿಯೋ ವೈರಲ್‌!

ಆಕ್ರಮಿತ ವೆಸ್ಟ್ ಬ್ಯಾಂಕ್‌ನ ಬೆಥ್ ಲೆಹೆಮ್‌ನ ಕ್ರಿಶ್ಚಿಯನ್ ಪಾದ್ರಿ ಮುಂಥರ್ ಐಸಾಕ್, ನಗರದ ಮನಸ್ಥಿತಿಯು ದುಃಖ ಮತ್ತು ಕೋಪದಿಂದ ಕೂಡಿದೆ ಆದರೆ ಒಗ್ಗಟ್ಟು ಮತ್ತು ಸ್ಥೈರ್ಯದಿಂದ ಕೂಡಿದೆ ಎಂದು ಎಂದಿದ್ದಾರೆ. ಗಾಜಾದ ಮೇಲೆ ಆಗುತ್ತಿರುವ ಯುದ್ಧವನ್ನು ಮುಂದುವರಿಸುತ್ತಿರುವ ಬಗ್ಗೆ ಜಗತ್ತಿನಲ್ಲಿ ಕೋಪ ಮಾಡುತ್ತಿದೆ ಎಂದು ಹೇಳಿದ್ದಾರೆ. ಆದರೆ, ಕ್ರಿಸ್ಮಸ್ ಪ್ರಾರ್ಥನೆಗಳನ್ನು ನಡೆಸುವುದು ಪ್ರತಿಭಟನೆಯ ಪ್ರಮುಖ ಸಂದೇಶವಾಗಿದೆ ಎಂದು ಅವರು ಹೇಳಿದ್ದಾರೆ.

ಪತ್ನಿ ಆರೈಕೆಗಾಗಿ VRS ತೆಗೆದುಕೊಂಡ ಉದ್ಯೋಗಿ, ಫೇರ್‌ವೆಲ್‌ ಪಾರ್ಟಿಯಲ್ಲೇ ಹೋಯ್ತು ಜೀವನ ಸಂಗಾತಿ ಪ್ರಾಣ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು