
ಕಜಾನ್ (ಡಿ.25): ಬುಧವಾರ ಕಝಾಕಿಸ್ತಾನದ ಅಕ್ಟೌ ನಗರದ ಬಳಿ ಅಜರ್‌ಬೈಜಾನ್ ಏರ್‌ಲೈನ್ಸ್‌ನ ಎಂಬ್ರೇಯರ್ 190 ವಿಮಾನ ದುರಂತದಲ್ಲಿ ಪತನಗೊಂಡಿದೆ. ಈ ಘಟನೆ ಜಾಗತಿಕ ಗಮನ ಸೆಳೆದಿದೆ. ದುರಂತದ ಕೆಲವು ಕ್ಷಣಗಳ ಮೊದಲು ಪ್ರಯಾಣಿಕರೊಬ್ಬರು ಸೆರೆಹಿಡಿದ ಭಯಾನಕ ವಿಡಿಯೋವೊಂದು ಹೊರಬಿದ್ದಿದೆ. ಪತನದ ಮೊದಲು ತನ್ನ ಪತ್ನಿಗೆ ಕಳುಹಿಸಿದ್ದ ಈ ವಿಡಿಯೋ, ವಿಮಾನದಲ್ಲಿನ ಭಯಾನಕ ವಾತಾವರಣವನ್ನು ತೋರಿಸಿದೆ. ಈ ವಿಡಿಯೋದಲ್ಲಿ ಆಕ್ಸಿಜನ್ ಮಾಸ್ಕ್‌ಗಳು ಸೀಲಿಂಗ್‌ನಿಂದ ತೂಗಾಡುತ್ತಿರುವುದು ಮತ್ತು ಪ್ರಯಾಣಿಕರು ಬ್ಲಾಸ್ಟ್‌ಗೆ ಸಜ್ಜಾಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಪ್ರಾರ್ಥನೆ ಮತ್ತು ಸಹಾಯಕ್ಕಾಗಿ ಕೂಗುಗಳು ವಿಮಾನದ ಒಳಗೆ ಪ್ರತಿಧ್ವನಿಸಿವೆ ವರದಿಗಳ ಪ್ರಕಾರ, ವಿಡಿಯೋವನ್ನು ರೆಕಾರ್ಡ್ ಮಾಡಿದ ಪ್ರಯಾಣಿಕ ವಿಮಾನ ವೇಗವಾಗಿ ಇಳಿಯಲು ಪ್ರಾರಂಭಿಸಿದಾಗ ಅದನ್ನು ತನ್ನ ಪತ್ನಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾನೆ.
ನೋಡಿ: ದುರಂತದ ಕೆಲವು ಕ್ಷಣಗಳ ಮೊದಲು ವಿಮಾನದ ಒಳಗಿನ ದೃಶ್ಯ
ಅಕ್ಟೌನಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿ ಸಂಭವಿಸಿದ ಈ ದುರಂತದಲ್ಲಿ ಕನಿಷ್ಠ 32 ಜನರು ಸಾವು ಕಂಡಿದ್ದಾರೆ. ಅನೇಕರು ಗಂಭೀರ ಸ್ಥಿತಿಯಲ್ಲಿದ್ದಾರೆ. ಎಂಬ್ರೇಯರ್ 190 ವಿಮಾನವು ಅಜೆರ್ಬೈಜಾನ್‌ನ ಬಾಕುನಿಂದ ರಷ್ಯಾದ ಗ್ರೋಜ್ನಿಗೆ ಹೋಗುತ್ತಿತ್ತು. ವಿಮಾನದಲ್ಲಿ ಐದು ಸಿಬ್ಬಂದಿ ಸೇರಿದಂತೆ 67 ಜನರಿದ್ದರು.
ದುರಂತದ ನಂತರ ತೆಗೆದ ಹೆಚ್ಚುವರಿ ವೀಡಿಯೊಗಳು, ಬದುಕುಳಿದವರು ತಮ್ಮ ಸಹ ಪ್ರಯಾಣಿಕರನ್ನು ವಿಮಾನದ ಅವಶೇಷಗಳಿಂದ ಎಳೆಯುತ್ತಿರುವುದನ್ನು ತೋರಿಸುತ್ತವೆ. ವಿಮಾನದ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿದೆ. ತುರ್ತು ಕಾರ್ಯಕರ್ತರು ಮತ್ತು ಬದುಕುಳಿದವರ ಪ್ರಯತ್ನಗಳು ದುರಂತದ ಪರಿಣಾಮವನ್ನು ಎತ್ತಿ ತೋರಿಸುತ್ತವೆ. ಮೊಬೈಲ್ ಫೋನ್ ದೃಶ್ಯಗಳು ವಿಮಾನದ ಶಾರ್ಪ್ ಡೌನ್‌ಫಾಲ್‌ಅನ್ನು ತೋರಿಸಿದೆ.ಇದು ಪತನದ ನಂತರದ ಭೀಕರ ಸ್ಫೋಟದಲ್ಲಿ ಕೊನೆಗೊಂಡಿದೆ.
ಪಕ್ಷಿ ಡಿಕ್ಕಿಯಾದ ನಂತರ ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ. ಪತನದ ಕೆಲವು ಕ್ಷಣಗಳ ಮೊದಲು ವಿಮಾನವು ಬಲವಾದ GPS ಜ್ಯಾಮಿಂಗ್ ಅನುಭವಿಸಿದೆ ಎಂದು ವರದಿಯಾಗಿದೆ. FlightRadar24 ಡೇಟಾವು ಹಾರಾಟದ ಕೊನೆಯ ನಿಮಿಷಗಳಲ್ಲಿ ಅನಿಯಮಿತ ಎತ್ತರದ ಬದಲಾವಣೆಗಳನ್ನು ಬಹಿರಂಗಪಡಿಸಿದೆ.
72 ಪ್ರಯಾಣಿಕರಿದ್ದ ವಿಮಾನ ಅಕ್ತಾವುನಲ್ಲಿ ಪತನ, ಕೊನೆಯ ಕ್ಷಣಗಳ ದೃಶ್ಯ ಸೆರೆ!
ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಡಿಸೆಂಬರ್ 26 ಅನ್ನು ಶೋಕ ದಿನವೆಂದು ಘೋಷಿಸಿದ್ದಾರೆ. ಸಂತ್ರಸ್ಥ ಕುಟುಂಬಗಳಿಗೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ ಮತ್ತು ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಅಧಿಕೃತ ನಿಯೋಗವನ್ನು ಕಳುಹಿಸಿದ್ದಾರೆ. “ಸಂತ್ರಸ್ಥ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಅವರು ಬರೆದಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹ ಸಂತಾಪ ಸೂಚಿಸಿದ್ದಾರೆ ಮತ್ತು ತುರ್ತು ಉಪಕರಣಗಳು ಮತ್ತು ವೈದ್ಯಕೀಯ ಸಿಬ್ಬಂದಿಯೊಂದಿಗೆ ವಿಮಾನವನ್ನು ಕಝಾಕಿಸ್ತಾನ್‌ಗೆ ಕಳುಹಿಸುವ ಮೂಲಕ ಸಹಾಯವನ್ನು ನೀಡಿದ್ದಾರೆ. ಕಝಾಕಿಸ್ತಾನ್, ಅಜೆರ್ಬೈಜಾನ್ ಮತ್ತು ರಷ್ಯಾದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಿಮಾನದ ಒಳಗಿನ ಭಯಾನಕ ದೃಶ್ಯಗಳು ವಾಯುಯಾನ ದುರಂತಗಳ ಮಾನವ ನಷ್ಟವನ್ನು ನೆನಪಿಸುತ್ತವೆ.
ಭಾರತ ಸೇರಿ ವಿಶ್ವದ 7 ಭೀಕರ ವಿಮಾನ ದುರಂತಗಳು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ