ಒಲಿಂಪಿಕ್ಸ್ ನಲ್ಲಿ ನೀಡಲಾಗಿದ್ದ ಕಾಂಡೋಮ್ ಅನ್‌ ಬಾಕ್ಸಿಂಗ್ ಮಾಡಿದ ಮಹಿಳಾ ಸ್ಪರ್ಧಿ, ವಿಡಿಯೋ ವೈರಲ್

By Mahmad Rafik  |  First Published Jul 30, 2024, 5:40 PM IST

ಒಲಿಂಪಿಕ್ಸ್ ನಲ್ಲಿ ನೀಡಲಾಗಿರುವ ಕಾಂಡೋಮ್ ನ್ನು ಮಹಿಳಾ ಸ್ಪರ್ಧಿ ಅನ್ ಬಾಕ್ಸಿಂಗ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. 


ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ ಆರಂಭವಾಗಿದ್ದು, ಭಾರತ ಎರಡು ಕಂಚುಗಳನ್ನು ಗೆದ್ದಿದ್ದು ತನ್ನ ಪದಕದ ಬೇಟೆಯನ್ನು ಮುಂದುವರಿಸಿದೆ. ಕಳೆದ ಬಾರಿ ಕೋವಿಡ್ ಆತಂಕದ ಹಿನ್ನೆಲೆ ಅಥ್ಲೀಟ್ಸ್‌ಗಳಿಗೆ ಲೈಂಗಿಕ ಸಂಪರ್ಕ ಹೊಂದಲು ಅವಕಾಶ ಕಲ್ಪಿಸಿರಲಿಲ್ಲ. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ ಗೆ ಆಗಮಿಸಿರುವ ಸ್ಪರ್ಧಿಗಳಿಗೆ 21 ಬಾರಿ ಸೆಕ್ಸ್ ಹೊಂದಲು ಸಾಧ್ಯವಾಗುವಷ್ಟು ಕಾಂಡೋಮ್ ಗಳನ್ನು ವಿತರಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ಮಾಹಿತಿ ನೀಡಿದ್ದಾರೆ. ಇದೀಗ ಒಲಿಂಪಿಕ್ಸ್ ನಲ್ಲಿ ನೀಡಲಾಗಿರುವ ಕಾಂಡೋಮ್ ನ್ನು ಮಹಿಳಾ ಸ್ಪರ್ಧಿ ಅನ್ ಬಾಕ್ಸಿಂಗ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. 

ಬೆಡ್‌ ಮೇಲೆ ಕಾಂಡೋಮ್ ಪ್ಯಾಕೇಟ್‌ಗಳು ಬಿದ್ದಿರೋದನ್ನು ಮಹಿಳೆಯೊಬ್ಬರು ವಿಡಿಯೋ ಮಾಡುತ್ತಿರುತ್ತಾರೆ. ವಿಡಿಯೋ ಮಾಡುತ್ತಿರುವ ಮಹಿಳೆ, ಇವತ್ತು ನನ್ನ ಗೆಳತಿ ಆಕೆಯ ಸಂಗಾತಿ ಎಂಜಾಯ್ ಮಾಡೋ ಪ್ಲಾನ್ ಮಾಡಿದಂತಿದೆ ಅಂತಾರೆ. ಅಷ್ಟರಲ್ಲೇ ಹೊರಗಿನಿಂದ ಕೋಣೆಯೊಳಗೆ ಬರುವ ಮಹಿಳೆ, ಕಾಂಡೋಮ್ ಪ್ಯಾಕೇಟ್ ಹರಡಿರುವ ಬೆಡ್ ಮೇಲೆ ಬಂದು ಮಲಗಿ ಜೋರಾಗಿ ನಗುತ್ತಾರೆ. ನಂತರ ಕಾಂಡೋಮ್ ಪ್ಯಾಕೇಟ್ ತೋರಿಸುತ್ತಾ ನಾವು ಅನ್‌ಬಾಕ್ಸಿಂಗ್ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಮೇಲಿನ ಕವರ್ ತೆಗೆದಾಗ ಒಳಗೆ ಎರಡು ಪ್ಯಾಕೇಟ್ ಇರೋದನ್ನು ಕಂಡು ಮಹಿಳೆ ಖುಷಿಯಿಂದ ನಗುತ್ತಾರೆ.

Tap to resize

Latest Videos

undefined

ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರೊಡಕ್ಟ್!

ಈ ಕುರಿತು ಸ್ಕೈ ನ್ಯೂಸ್ ಜೊತೆ ಮಾತನಾಡಿರುವ ಒಲಿಂಪಿಕ್ಸ್ ಕ್ರೀಡಾಗ್ರಾಮದ ಡೈರೆಕ್ಟರ್ ಲೌರೆಂಟ್ ಮಿಚೌದ್, ಎಲ್ಲಾ ಸ್ಪರ್ಧಿಗಳು ಅನ್ಯೋನ್ಯತೆಯಿಂದ ಇರಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ. ಕ್ರೀಡಾಪಟುಗಳಿಗಾಗಿ ಆರಾಮದಾಯಕ ಕೋಣೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಅಥ್ಲೀಟ್ 21 ಬಾರಿ ಲೈಂಗಿಕತೆ ಹೊಂದಲು ಬೇಕಾಗುವಷ್ಟು ಕಾಂಡೋಮ್‌ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. 

ಕಾಂಡೋಮ್ ವಿತರಣೆ ಆರಂಭ ಯಾವಾಗ? 

ಮೊದಲ ಬಾರಿ 1988ರ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಹೆಚ್‌ಐವಿ ಹಾಗೂ ಏಡ್ಸ್ ಜಾಗೃತಿ ಮೂಡಿಸುವ ಉದ್ದೇಶದಿಂದ ಅಥ್ಲೀಟ್‌ಗಳಿಗೆ ಕಾಂಡೋಮ್ ವಿತರಣೆ ಮಾಡಲಾಗಿತ್ತು. ನಂತರ ಈ ಪದ್ದತಿ ಪ್ರತಿ ಒಲಿಂಪಿಕ್ಸ್‌ನಲ್ಲಿ ಕಾಂಡೋಮ್ ವಿತರಣೆ ಮಾಡಲು ಶುರುವಾಯ್ತು. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೋವಿಡ್ ಭಯದಿಂದ ಸ್ಪರ್ಧಿಗಳಿಗೆ ಲೈಂಗಿಕ ಸಂಪರ್ಕ ಹೊಂದಲು ಅವಕಾಶ ನೀಡಿರಲಿಲ್ಲ. ಮುಂಜಾಗ್ರತ ಕ್ರಮವಾಗಿ ಅಥ್ಲಿಟ್‌ಗಳಿಗೆ ಆರು ಅಡಿ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಅದಾಗಿಯೋ 1.5 ಲಕ್ಷ ಕಾಂಡೋಮ್ ವಿತರಣೆ ಮಾಡಲಾಗಿತ್ತು.  

ಖ್ಯಾತ ಆಟಗಾರ ಹಾಕೊಂಡಿದ್ದ ಹೇರ್‌ನೆಟ್‌ನ್ನು ಕಾಂಡೋಮ್‌ಗೆ ಹೋಲಿಸಿದ ನೆಟ್ಟಿಗರು

Will Vishwaguru distribute 1,000,000 condoms to athletes if it hosts the Olympics in 2036?

Around 300,000 condoms have been distributed to athletes in the Paris Olympics. Tinder, Bumble matches are on record numbers. pic.twitter.com/V6FDYp1uHI

— Lord Immy Kant (Eastern Exile) (@KantInEast)
click me!