ಬದುಕುಳಿಯಲು 7 ದಿನ ಸತ್ತ ಮಾಲೀಕನ ಕಾಲು ತಿಂದ ಮನೆಯಲ್ಲಿದ್ದ 28 ಸಾಕು ನಾಯಿಗಳು

By Mahmad Rafik  |  First Published Jul 30, 2024, 1:28 PM IST

ಕೊನೆಗೆ ಸತ್ತಿದ್ದ ಅಟ್ಟಪೋಲ್  ಬಲಗಾಲನ್ನು ತಿಂದು ನಾಯಿಗಳು ಬದುಕುಳಿದಿವೆ. ಒಂದು ವಾರ ಮನೆಯಲ್ಲಿದ್ದ ಅಟ್ಟಪೋಲ್  ಶವ ಪೊಲೀಸರು ಬರೋಷ್ಟರಲ್ಲಿ ಭಾಗಶಃ ಕೊಳೆತ್ತಿತ್ತು ಎಂದು ವರದಿಯಾಗಿದೆ.


ಬ್ಯಾಂಕಾಕ್: ಥೈಲ್ಯಾಂಡ್ ರಾಜಧಾನಿ ಬ್ಯಾಂಕಕ್‌ನಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯೊಂದರಲ್ಲಿದ್ದ 28 ನಾಯಿಗಳು ಬದುಕುಳಿಯಲ ಸತ್ತ ತನ್ನ ಮಾಲೀಕನ ಕಾಲು ತಿಂದಿವೆ. ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, 62 ವರ್ಷದ ಅಟ್ಟಪೋಲ್ ಚಾರೋನಪಿಥಕ್ ಎಂಬವರು ಶನಿವಾರ ಮೃತರಾಗಿದ್ದಾರೆ. ಮೃತ ಅಟ್ಟಪೋಲ್ ಮನೆಯಲ್ಲಿ ಚಿಹಾವೂ, ಶಿ ತ್ಸು ಸೇರಿದಂತೆ ವಿವಿಧ ತಳಿಯ 28 ನಾಯಿಗಳನ್ನು ಸಾಕಿದ್ದರು. ಕೆಲ ದಿನಗಳಿಂದ ಅಟ್ಟಪೋಲ್ ಚಾರೋನಪಿಥಕ್ ಅವರ ಕಾರ್ ನಿಂತಲ್ಲೇ ನಿಂತಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ತೆಗೆದು ನೋಡಿದಾಗ ಭಯಾನಕ ದೃಶ್ಯವನ್ನು ನೋಡಿದ್ದಾರೆ. 

ಅಟ್ಟಪೋಲ್ ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಸಕ್ಕರೆ ಪ್ರಮಾಣ ಅಧಿಕವಾದ ಕಾರಣ ಅಟ್ಟಪೋಲ್ ಶನಿವಾರ ನಿಧನರಾಗಿದ್ದಾರೆ. ಅಟ್ಟಪೋಲ್  ನಿಧನದ ಬಳಿಕ ಮನೆಯಲ್ಲಿದ್ದ ನಾಯಿಗಳಿಗೆ ಒಂದು ವಾರ ಆಹಾರವೇ ಸಿಕ್ಕಿಲ್ಲ. ಕೊನೆಗೆ ಸತ್ತಿದ್ದ ಅಟ್ಟಪೋಲ್  ಬಲಗಾಲನ್ನು ತಿಂದು ನಾಯಿಗಳು ಬದುಕುಳಿದಿವೆ. ಒಂದು ವಾರ ಮನೆಯಲ್ಲಿದ್ದ ಅಟ್ಟಪೋಲ್  ಶವ ಪೊಲೀಸರು ಬರೋಷ್ಟರಲ್ಲಿ ಭಾಗಶಃ ಕೊಳೆತ್ತಿತ್ತು ಎಂದು ವರದಿಯಾಗಿದೆ. ಬಾಗಿಲು ತೆಗೆದು ನೋಡಿದಾಗ ಮನೆಯಿಂದ ದುರ್ನಾತ ಬರುತ್ತಿತ್ತು. ಮನೆ ನಾಯಿಗಳ ಮಲದಿಂದ ತುಂಬಿತ್ತು ಎಂದು ಪೊಲೀಸರು ಮತ್ತು ಪಶು ಕಲ್ಯಾಣ ಸಂಘಟನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Latest Videos

undefined

ನೇಪಾಳದ ವಿಮಾನ ಪತನಕ್ಕೆ ಕಾರಣವಾಯ್ತಾ ಟೇಬಲ್‌ಟಾಪ್ ರನ್‌ವೇ; ಭಾರತದಲ್ಲಿಯೂ ಇವೆ ಇಂತಹ ಏರ್‌ಪೋರ್ಟ್‌ಗಳು!

ಮೊದಲಿಗೆ ಅಟ್ಟಪೋಲ್  ಶವದ ಸುತ್ತ 15 ನಾಯಿಗಳಿವೆ ಎಂಬ ಮಾಹಿತಿ ಬಂದಿತ್ತು. ಪೊಲೀಸರ ತಂಡ ಹಾಗೂ ವೈದ್ಯರು ಅಲ್ಲಿ ತೆರಳಿದಾಗ ಎರಡು  ನಾಯಿಗಳ ಶವ ಸಹ ಸಿಕ್ಕಿದೆ ಎಂದು ದಿ ವಾಯ್ಸ್ ಫೌಂಡೇಶನ್ ಹೇಳಿಕೆ ಬಿಡುಗಡೆ ಮಾಡಿದೆ. ಅಟ್ಟಪೋಲ್ ಮನೆಯಲ್ಲಿ ಒಟ್ಟು 30 ನಾಯಿಗಳನ್ನು ಸಾಕಿದ್ದರು. ಉಳಿದಿದ್ದ 28 ಶ್ವಾನಗಳನ್ನು ರಕ್ಷಣೆ  ಮಾಡಲಾಗಿದೆ. 

ಆಹಾರ ಹಾಗೂ ಕುಡಿಯುವ ನೀರು ಸಿಗದೇ ನಾಯಿಗಳ ಆರೋಗ್ಯ ಕ್ಷೀಣವಾಗಿತ್ತು. ಅಧಿಕಾರಿಗಳು ನಾಯಿಗಳಿದ್ದ ಗಂಭೀರ ಸ್ಥಿತಿಯ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಿ ವಾಯ್ಸ್ ಫೌಂಡೇಶನ್ ಸೋಶಿಯಲ್ ಮೀಡಿಯಾದಲ್ಲಿ ಪೋಟೋಗಳನ್ನು ಹಂಚಿಕೊಂಡು ಶ್ವಾನಪ್ರಿಯರ ಸಹಾಯವನ್ನು ಕೇಳಿದೆ. ಈ ನಾಯಿಗಳಿಗೆ 28 ಮಾಲೀಕರು ಬೇಕಾಗಿದ್ದಾರೆ. ಸದ್ಯ ಈ 28 ಅನಾಥ ಶ್ವಾನಗಳಿಗೆ ಚಿಕಿತ್ಸೆ ಕೊಡಿಸಲು ಆರೈಕೆ ಮಾಡಲು ಆರ್ಥಿಕ ಸಹಾಯ ಬೇಕಿದೆ ಎಂದು ಫೌಂಡೇಶನ್ ಮನವಿ ಮಾಡಿಕೊಂಡಿದೆ. 

ನಾಯಿಗೆ ಹೆಚ್ಚು ಆಹಾರ ನೀಡ್ತೀರಾ? ಎಚ್ಚರ..ಮಹಿಳೆ ಅನುಭವಿಸ್ತಿದ್ದಾಳೆ ಜೈಲು ಶಿಕ್ಷೆ

click me!