ನಾಯಿಗೆ ಹೆಚ್ಚು ಆಹಾರ ನೀಡ್ತೀರಾ? ಎಚ್ಚರ..ಮಹಿಳೆ ಅನುಭವಿಸ್ತಿದ್ದಾಳೆ ಜೈಲು ಶಿಕ್ಷೆ

By Roopa Hegde  |  First Published Jul 30, 2024, 10:51 AM IST

ನಮ್ಮಲ್ಲಿ ನಾಯಿ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಮನೆಯಲ್ಲಿ ಮೂರ್ನಾಲ್ಕು ನಾಯಿ ಸಾಕುವವರಿದ್ದಾರೆ. ನಾಯಿ ಪ್ರೀತಿ ಹೆಚ್ಚಿರಲಿ ಆದ್ರೆ ತಟ್ಟೆಗೆ ಹಾಕೋ ಆಹಾರ ಮಿತಿಯಾಗಿರಲಿ. ಇಲ್ಲ ಅಂದ್ರೆ ಜೈಲು ಸೇರಬೇಕಾಗುತ್ತೆ. 
 


ಸಾಕು ನಾಯಿ ಇರಲಿ ಇಲ್ಲ ಬೀದಿ ನಾಯಿ ಇರಲಿ, ಅದಕ್ಕೆ ಆಹಾರ ನೀಡುವಾಗ ಎಚ್ಚರ ಇರಲಿ. ನಾಯಿಗೆ ಹೊಟ್ಟೆ ತುಂಬಿದ್ಯಾ ಇಲ್ವಾ ಎಂಬುದನ್ನು ಪತ್ತೆ ಮಾಡದೆ, ನಿಮ್ಮಿಷ್ಟದಂತೆ ಅದಕ್ಕೆ ಆಹಾರ ಹಾಕಿದ್ರೆ ಜೈಲು ಸೇರ್ಬೇಕಾಗುತ್ತೆ ಹುಷಾರ್. ಈ ಮಹಿಳೆ ಕೂಡ ಇಂಥದ್ದೇ ಕೆಲಸ ಮಾಡಿ ಈಗ ಜೈಲು ಸೇರಿದ್ದಾಳೆ. ತನ್ನ ಸಾಕು ನಾಯಿಗೆ ಅತಿಯಾಗಿ ಆಹಾರ ನೀಡಿದ್ದೇ ಈಕೆಗೆ ಮುಳುವಾಗಿದೆ. ನಾಯಿಗೆ ಆಹಾರ ನೀಡಿ ನೀಡಿ ಅದ್ರ ತೂಕ ಹೆಚ್ಚಾಗಿದ್ದಲ್ಲದೆ ಒಂದು ದಿನ ನಾಯಿ ಸಾವನ್ನಪ್ಪಿದೆ. ಈ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. 

ನ್ಯೂಜಿಲ್ಯಾಂಡ್ (New Zealand) ನಲ್ಲಿ ಈ ಘಟನೆ ನಡೆದಿದೆ. ಮಹಿಳೆಗೆ ಎರಡು ತಿಂಗಳ ಜೈಲು (Prison) ಶಿಕ್ಷೆಯನ್ನು ವಿಧಿಸಲಾಗಿದೆ. ಮಹಿಳೆ ನಾಯಿಗೆ ಮಿತಿಗಿಂತ ಹೆಚ್ಚು ಆಹಾರವನ್ನು ನೀಡಿದ್ದರಿಂದ ನಾಯಿ (Dog) ಸಾವನ್ನಪ್ಪಿದೆ. ರಾಯಲ್ ನ್ಯೂಜಿಲೆಂಡ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ (SPCA) ಪ್ರಕಾರ, ಪ್ರಾಣಿ ನಿಯಂತ್ರಣ ಅಧಿಕಾರಿಗಳು ಅಕ್ಟೋಬರ್ 2021 ರಲ್ಲಿ ಮಹಿಳೆ ಮನೆಗೆ ಹೋದಾಗ  ನುಗ್ಗಿ ಹೆಸರಿನ ನಾಯಿಯನ್ನು ನೋಡಿದ್ರು. 

Tap to resize

Latest Videos

undefined

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಒಂದೇ ವಾರದಲ್ಲಿ ದಾಖಲೆಯ 1650 ಕೋಟಿ ರೂ ದೇಣಿಗೆ!

ನಾಯಿ ಪ್ರತಿ ದಿನ ಮಿತಿಗಿಂತ ಹೆಚ್ಚು ಆಹಾರ ಸೇವನೆ ಮಾಡಿದ್ದರಿಂದ ಅದ್ರ ತೂಕ 53.7 ಕೆ.ಜಿಯಾಗಿತ್ತು. ಎಷ್ಟು ಕೊಬ್ಬಿತ್ತೆಂದ್ರೆ ಅದರ ಹೃದಯ ಬಡಿತ ಕೇಳಲು ಸಾಧ್ಯವಾಗ್ತಿರಲಿಲ್ಲ. ನಾಯಿಗೆ ಕಾಂಜಂಕ್ಟಿವಿಟಿಸ್ ಆಗಿತ್ತು. ಅದ್ರ ತೂಕ ಹೆಚ್ಚಾದ ಕಾರಣ ಅದು ನಡೆಯೋದು ಕಷ್ಟವಾಗಿತ್ತು. 10 ಮೀಟರ್ ನಡೆಯಬೇಕು ಅಂದ್ರೆ ಅದು ಮೂರು ಬಾರಿ ನಿಲ್ಲುತ್ತಿತ್ತು.

ನಾಯಿಗೆ ಮಹಿಳೆ ಕೊಡ್ತಿದ್ದಳು ಈ ಎಲ್ಲ ಆಹಾರ : ಅಧಿಕಾರಿಗಳು ಆ ಸಮಯದಲ್ಲಿ ಮಹಿಳೆಯ ವಿಚಾರಣೆ ನಡೆಸಿದ್ದರು. ಆಗ ಮಹಿಳೆ ನಾಯಿಗೆ ಯಾವೆಲ್ಲ ಆಹಾರ ನೀಡ್ತೇನೆ ಎಂಬ ಪಟ್ಟಿಯನ್ನು ನೀಡಿದ್ದಳು. ಬಿಸ್ಕತ್ ಹಾಗೂ ನಾಯಿ ಆಹಾರವಲ್ಲದೆ, ಚಿಕನ್ ನ 8 -10 ಪೀಸ್ ನೀಡ್ತಿದ್ದಳು. ಅಧಿಕಾರಿಗಳು ಮಹಿಳೆ ವರ್ತನೆಯನ್ನು ಟೀಕಿಸಿದ್ದರು. ಮಹಿಳೆ ಅತಿಯಾದ ಪ್ರೀತಿಗೆ ನಾಯಿಯ ತೂಕ ಹೆಚ್ಚಾಗಿತ್ತು. ಅದೇ ನಾಯಿ ಸಾವಿಗೆ ಕಾರಣವಾಯ್ತು. ನಾಯಿಗೆ ಎಷ್ಟು ಆಹಾರ ನೀಡಬೇಕು ಎಂಬುದನ್ನು ನಾಯಿ ಸಾಕುವವರು ತಿಳಿದಿರಬೇಕು ಎಂದು ಅಧಿಕಾರಿಗಳು ಹೇಳಿದ್ದರು.

ನಾಯಿಗೆ ಎಷ್ಟು ಆಹಾರವನ್ನು ನೀಡಬೇಕು? :  ಇಷ್ಟ ಎನ್ನುವ ಕಾರಣಕ್ಕೆ ಮನೆಯಲ್ಲಿ ನಾಯಿ ಸಾಕಿದ್ರೆ ಸಾಲದು, ಅದನ್ನು ಬೆಳೆಸುವ, ಆರೈಕೆ ಮಾಡುವ ವಿಧಾನ ತಿಳಿದಿರಬೇಕು. ಅನೇಕರು ಮನೆಯಲ್ಲಿ ತಯಾರಿಸಿದ ಎಲ್ಲ ಆಹಾರವನ್ನು ನಾಯಿಗೆ ನೀಡ್ತಾರೆ. ಬೀದಿ ನಾಯಿಗಳಿಗೆ ಕೂಡ ಅತಿಯಾದ ಆಹಾರವನ್ನು ನೀಡ್ತಿರುತ್ತಾರೆ. ಇದು ಸಂಪೂರ್ಣ ತಪ್ಪು. ನಾಯಿಗೆ ಅಗತ್ಯವಿರುವ ಕ್ಯಾಲೊರಿಗಳ ಪ್ರಮಾಣವನ್ನು ತಿಳಿದುಕೊಳ್ಳುವುದು ಮುಖ್ಯ.  ಎಲ್ಲಾ ನಾಯಿಗಳು ತಮ್ಮ ವಯಸ್ಸು, ತಳಿ, ಗಾತ್ರ, ಚಟುವಟಿಕೆಯ ಮಟ್ಟ ಮತ್ತು ಇತರ ಹಲವು ಅಂಶಗಳ ಆಧಾರದ ಮೇಲೆ ವಿಭಿನ್ನ ಪ್ರಮಾಣದ ಕ್ಯಾಲೊರಿಗಳನ್ನು ಬಯಸುತ್ತವೆ. ನಾಯಿಯ ತೂಕಕ್ಕೆ ತಕ್ಕಂತೆ ನೀವು ಕ್ಯಾಲೋರಿ ನೀಡಬೇಕು. 4.5 ಕೆಜಿ  ನಾಯಿಗೆ 400 ಕ್ಯಾಲೋರಿ ಅವಶ್ಯಕ. ಅದೇ 13 ಕೆಜಿಯಿಂದ 27 ಕೆಜಿ ತೂಕವಿರುವ ನಾಯಿಗೆ 900 - 1300 ಕ್ಯಾಲೋರಿ ನೀಡಬೇಕು. 27 ಕೆಜಿಯಿಂದ 32 ಕೆಜಿ ತೂಕ ಇರುವ ನಾಯಿಗೆ 1700 ಕ್ಯಾಲೋರಿ ಅಗತ್ಯವಿರುತ್ತದೆ.

ಇದು ದುಬೈನ ಅತ್ಯಂತ ದುಬಾರಿ ಚಾಕೋಲೇಟ್, ನಿಮ್ಮ ಮನಸ್ಸಿನಲ್ಲಿ ಬೇರೆ ಚಿತ್ರಣ ಬಂದ್ರೆ ಅಚ್ಚರಿಯಿಲ್ಲ!

ನಾಯಿ ಆಹಾರದ ಮಾರ್ಗಸೂಚಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅನುಸರಿಸುವುದು ಮುಖ್ಯವಾಗಿದೆ.  ಮನುಷ್ಯರಂತೆ, ಅವುಗಳಿಗೆ ಪೌಷ್ಟಿಕಾಂಶದ ಅಗತ್ಯತೆಗಳಿವೆ. ಯಾವುದೇ ಪೋಷಕಾಂಶದ ಕೊರತೆ ಅಥವಾ ಹೆಚ್ಚಿನ ಪೋಷಕಾಂಶ ಅವುಗಳಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.  

click me!