
ಮದುವೆ ಸಮಯದಲ್ಲಿ ವಧು ಹಾಗೂ ವರನ ಕಡೆಯಿಂದ ಪರಸ್ಪರ ಹಲವು ತಮಾಷೆಯ ಹಾಗೂ ಗಂಭೀರವಾದ ಬೇಡಿಕೆಗಳಿರುತ್ತವೆ. ಕೆಲವು ಕಡೆಗಳಲ್ಲಿ ವರದಕ್ಷಿಣೆ ಚಾಲ್ತಿಯಲ್ಲಿದ್ದಾರೆ. ಮತ್ತೆ ಕೆಲವು ಕಡೆ ವಧು ದಕ್ಷಿಣೆಯೂ ವಾಡಿಕೆಯಲ್ಲಿದೆ. ಅದೇ ರೀತಿ ಪಾಕಿಸ್ತಾನದಲ್ಲಿ ಹೆಣ್ಣು ಕೊಟ್ಟ ಮಾವನೋರ್ವ ಅಳಿಯನ ಬಳಿ ವಿಚಿತ್ರವಾದ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ತಮ್ಮ ಹೈದರಾಬಾದ್‌ನ ಮನೆಯ ಮೇಲೆ ನೋಟಿನ ಸುರಿಮಳೆ ಸುರಿಸುವಂತೆ ಸೂಚಿಸಿದ್ದಾರೆ. ಮಾವನ ಮಾತನ್ನು ಗಂಭೀರವಾಗಿ ಪರಿಗಣಿಸಿದ ಅಳಿಯ ಇದಕ್ಕಾಗಿ ಖಾಸಗಿ ಹೆಲಿಕಾಪ್ಟರನ್ನೇ ಬುಕ್ ಮಾಡಿ ಹಣದ ಸುರಿಮಳೆ ಸುರಿಸಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಮದುವೆ ಸಮಯದಲ್ಲಿ ವಧುವರರ ಮೇಲೆ ಹಣ ಸುರಿಸುವುದು ಅಸಾಮಾನ್ಯವಾದ ವಿಚಾರವೇನಲ್ಲ, ಉತ್ತರ ಭಾರತದ ಮದುವೆಗಳಲ್ಲಿ ಇಂತಹವೆಲ್ಲಾ ಸಾಮಾನ್ಯ ಎನಿಸಿವೆ. ಕೆಲವರು ಹಣದ ಹಾರ ಮಾಡಿ ವಧು ವರರ ಕೊರಳಿಗೆ ಹಾಕಿದರೆ ಮತ್ತೆ ಕೆಲವರು ಮೇಲಿನಿಂದ ಹಣದ ಮಳೆ ಸುರಿಸುತ್ತಾರೆ. ಆದರೆ ನೆರೆಯ ಪಾಕಿಸ್ತಾನದಲ್ಲಿ ವರನೋರ್ವ ಹೆಣ್ಣು ಕೊಟ್ಟ ಮಾವನ ಆಸೆ ಈಡೇರಿಸಲು ಆಕಾಶದಿಂದಲೇ ನೇರವಾಗಿ ಮಾವನ ಮನೆ ಮೇಲೆಯೇ ಹಣದ ಮಳೆ ಸುರಿಸಿದ್ದಾನೆ.
ಪಾಕಿಸ್ತಾನಿ ವಧುವಿನ ಪೋಷಕರು ತಮ್ಮ ಹೊಸ ಅಳಿಯನ ಬಳಿ ತಮ್ಮ ಮದುವೆಯ ವಿಶೇಷ ದಿನದಂದು ಮನೆಯ ಮೇಲೆ ಹಣದ ಮಳೆ ಸುರಿಸುವಂತೆ ಕೇಳಿದ್ದಾರೆ. ಮಾವನ ಮಾತು ಕೇಳಿದ ವರ ಆಸೆ ಈಡೇರಿಸಲು ಹಣದ ಹಿಡಿದುಕೊಂಡು ಸೀದಾ ಟೆರೇಸ್ ಮೇಲೆ ಹೋಗಿಲ್ಲ, ಅದರ ಬದಲಾಗಿ ಅವರು ಕಲ್ಪನೆಯೂ ಮಾಡಿರದಂತೆ ಸೀದಾ ಖಾಸಗಿ ಹೆಲಿಕಾಪ್ಟರನ್ನೇ ಬುಕ್ ಮಾಡಿದ್ದಾನೆ. ನಂತರ ಹೆಲಿಕಾಪ್ಟರ್ ಮೂಲಕ ಮನೆ ಮೇಲೆ ಹಣದ ಸುರಿಮಳೆ ಸುರಿಸಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರ ಗಮನ ಸೆಳೆದಿದೆ.
ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಅಮಲ್ಕಾ ಎಂಬುವವರು ಪೋಸ್ಟ್ ಮಾಡಿದ್ದಾರೆ. ವಧುವಿನ ತಂದೆಯ ಮನವಿಯಂತೆ ವರನ ಕಡೆಯವರು ವಧುವಿನ ಪಾಕಿಸ್ತಾನದ ಹೈದರಾಬಾದ್‌ನಲ್ಲಿರುವ ನಿವಾಸದ ಮೇಲೆ ಹಣದ ಮಳೆ ಸುರಿಸಿದರು. ಮಗನ ಹೆಂಡತಿ ಮನೆಯವರ ಆಸೆ ಈಡೇರಿಸಲು ವರನ ತಂದೆ ಖಾಸಗಿ ವಿಮಾನ ಕರೆತಂದರು ಹಾಗೂ ಅವರ ಮನೆ ಮೇಲೆ ಲಕ್ಷಾಂತರ ರೂಪಾಯಿಯ ಸುರಿಮಳೆಗೈದರು ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ. ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನದ ರೂಪಾಯಿ ಬೆಲೆ ಕಳೆದುಕೊಂಡಿದೆ. ಹೀಗಾಗಿ ಜನ ಹಣವನ್ನು ಗಾಳಿಯಲ್ಲಿ ಹಾರಿಸುತ್ತಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಹಣ ಬೆಲೆ ಕಳೆದುಕೊಂಡಾಗ ಹೀಗಾಗುತ್ತೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾವು ಈ ಕೂಡಲೇ ಐಎಂಎಫ್‌ಗೆ ಈ ವಿಚಾರ ತಿಳಿಸಿ ಪಾಕಿಸ್ತಾನಕ್ಕೆ ಹಣದ ಸಹಾಯ ಮಾಡುವುದನ್ನು ನಿಲ್ಲಿಸಬೇಕು. ಅವರು ಉಪಯೋಗವಿಲ್ಲದ ಕಾರ್ಯಕ್ರಮಗಳಿಗೆ ಹಣ ವ್ಯಯ ಮಾಡುತ್ತಿದ್ದಾರೆ. ಅದರರ್ಥ ಅವರ ಬಳಿ ಹಣ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆದ್ರೂ ಹಣ ಇಲ್ಲ ನೆರವು ನೀಡಿ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮುಂದೆ ಪಾಕಿಸ್ತಾನ ಬಡಿದಾಡಿಕೊಳ್ಳಿದ್ರೆ ಅಲ್ಲಿನ ಜನ ಹಣವನ್ನು ಈ ರೀತಿ ಮಳೆಯಂತೆ ಸುರಿಸ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ