ಹೊಸ ವರ್ಷದ ಮೊದಲ ದಿನವೇ ಬೊರ್ಬನ್ ರಸ್ತೆಯಲ್ಲಿ ಉಗ್ರರ ದಾಳಿ, ಹಲವರು ಬಲಿ!

By Chethan Kumar  |  First Published Jan 1, 2025, 9:48 PM IST

ಹೊಸ ವರ್ಷದ ಮೊದಲ ದಿನವೇ ಬೊರ್ಬೊನ್ ರಸ್ತೆಯಲ್ಲಿ ಭೀಕರ ಭಯೋತ್ಪಾದಕರ ದಾಳಿಯಾಗಿದೆ. ಜನರ ಮೇಲೆ ಟ್ರಕ್ ನುಗ್ಗಿಸಿ ಬಳಿಕ ಗುಂಡಿನ ಸುರಿಮಳೆಗೈದ ಉಗ್ರರು ಹಲವರ ಬಲಿ ಪಡೆದಿದ್ದಾರೆ. ಗುಂಡಿನ ದಾಳಿ ವಿಡಿಯೋ ಸೆರೆ


ನ್ಯೂ ಒರ್ಲಿಯನ್ಸ್(ಜ.01) ಹೊಸ ವರ್ಷದ ಮೊದಲ ದಿನವೇ ಸಂಭ್ರಮ ಮರೆಯಾಗಿದೆ. ಅಮೆರಿಕದ ನ್ಯೂ ಒರ್ಲಿಯನ್ಸ್‌ನ ಫ್ರೆಂಚ್ ಕ್ವಾರ್ಟರ್ ಬಳಿ ಉಗ್ರರು ದಾಳಿಯಾಗಿದೆ. ಕಿಕ್ಕಿರಿದು ತುಂಬಿದ್ದ ಬೋರ್ಬೊನ್ ರಸ್ತೆಗೆ ಭಯೋತ್ಪಾದಕರು ವೇಗವಾಗಿ ಟ್ರಕ್ ನುಗ್ಗಿಸಿದ್ದಾರೆ. ಜನರ ಮೇಲೆ ಟ್ರಕ್ ಹತ್ತಿಸಿದ ಬಳಿಕ ಕಾರಿನಿಂದ ಹೊರಬಂದ ಉಗ್ರರು ಜನರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಈ ದಾಳಿಯಲ್ಲಿ 10ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಜನವರಿ 1ರ ಬೆಳಗಿನ ಜಾವ ಬೋರ್ಬೋನ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷಾಚರಣೆ ಸಂಭ್ರಮ ಇನ್ನೂ ನಿಂತಿರಲಿಲ್ಲ. ರಸ್ತೆಯಲ್ಲಿ ಹಲವು ಸಾರ್ವಜನಿಕರಿದ್ದಾಗಲೇ ವೇಗವಾಗಿ ಟ್ರಕ್ ನುಗ್ಗಿ ಬಂದಿದೆ. ಹಲವು ನಾಗರೀಕರ ಮೇಲೆ ಟ್ರಕ್ ಹತ್ತಿದೆ. ಬಳಿಕ ಟ್ರಕ್‌ನಿಂದ ಇಳಿದ ಉಗ್ರನೊಬ್ಬ ಸಾರ್ವಜನಿಕರ ಮೇಲೆ ಏಕಾಏಕಿ ಗಂಡಿನ ದಾಳಿ ನಡೆಸಿದ್ದಾನೆ. ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿರುವ ಕಾರಣ ಪ್ರತಿಕ್ರಿಯಿಸುವ ಮೊದಲೇ ಉಗ್ರ ಗುಂಡಿನ ಸುರಿಮಳೆಗೆರೆದಿದ್ದಾರೆ. ಹೀಗಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ.

Tap to resize

Latest Videos

26/11 ಮುಂಬೈ ದಾಳಿ ಆರೋಪಿ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಸಾವು

ಇತ್ತ ಪೊಲೀಸರು ಪ್ರತಿ ದಾಳಿ ನಡೆಸಿ ಉಗ್ರನ ಸದೆಬಡಿದಿದ್ದಾರೆ. ಅಷ್ಟರೊಳಗೆ ಭಾರಿ ನೋವು ಸಂಭವಿಸಿದೆ. ಟ್ರಕ್ ಹರಿದು ಹಲವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಗುಂಡಿನ ದಾಳಿಯಾಗಿದೆ. ಗುಂಡಿನ ದಾಳಿಗೆ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಟ್ರಕ್ ಹರಿದ ಬೆನ್ನಲ್ಲೇ ಎಲ್ಲರೂ ಗಾಯಗೊಂಡವರನ್ನು ಮೇಲಕ್ಕೆತ್ತಿ ಆಸ್ಪತ್ರೆ ದಾಖಲಿಸಲು ಓಡೋಡಿ ಬಂದಿದ್ದಾರೆ. ಗಾಯಗೊಂಡವರ ಆಪ್ತರು, ಸ್ಛಳೀಯರು ಸಹಾಯಕ್ಕೆ ಮುಂದಾಗಿದ್ದಾರೆ. ಅಷ್ಟರೊಳಗೆ ಟ್ರಕ್‌ನಿಂದ ಹೊರಬಂದ ಉಗ್ರ ಗುಂಡಿನ ದಾಳಿ ನಡೆಸಿದ್ದಾರೆ. ಹೀಗಾಗಿ ಗುಂಪು ಗುಂಪಾಗಿದ್ದ ನಾಗರೀಕರು ಕ್ಷಣಾರ್ಧದಲ್ಲಿ ಬಲಿಯಾಗಿದ್ದಾರೆ. 

 

Man drives through crowd in New Orleans

pic.twitter.com/GtAVgAaB7r

— Kreately.in (@KreatelyMedia)

 

ಪ್ರತ್ಯಕ್ಷ ದರ್ಶಿಗಳು ಆಘಾತಗೊಂಡಿದ್ದಾರೆ. ಕಳೆದ 15 ವರ್ಷದಳಿಂದ ನ್ಯೂ ಒರ್ಲಿಯನ್ಸ್‌ನಲ್ಲಿ ನಿವಾಸಿಗಳಾಗಿರುವ ಹಲವರು ಅತ್ಯಂತ ಭೀಕರ ಘಟನೆ ಎಂದು ವಿವರಿಸಿದ್ದಾರೆ. ಹೊಸ ವರ್ಷದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೊರಗಿದ್ದರು. ರಸ್ತೆ, ರೆಸ್ಟೋರೆಂಟ್ ಸೇರಿದಂತೆ ಅವರವರ ಆಸಕ್ತಿಯ ಸ್ಥಳಗಳಲ್ಲಿ ಹೊಸ ವರ್ಷ ಆನಂದಿಸುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರೂ ಪೊಲೀಸರು ಪ್ಲಾಸ್ಟಿಕ್ ಬ್ಯಾರಿಕೇಟ್ ಹಾಕಿದ್ದರು. ಇದು ಕೈಬೆರಳಿನಲ್ಲಿ ತಳ್ಳಿದರೂ ಕೆಳಕ್ಕೆ ಬೀಳುತ್ತದೆ. ಹೆಚ್ಚು ಜನಸಂದಣಿ ಇರುವ ಕಡೆ ಪೊಲೀಸರು ಮತ್ತಷ್ಟು ಭದ್ರತೆ ಕೈಗೊಳ್ಳಬೇಕಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
 

click me!