Unknown Gunman: ಪಾಕ್‌ನಲ್ಲಿ ಮತ್ತೊಬ್ಬ ಟಾಪ್ ಲಷ್ಕರ್ ಉಗ್ರನ ಹತ್ಯೆ!

Kannadaprabha News   | Kannada Prabha
Published : May 16, 2026, 05:30 AM IST
Pakistan Top LeT commander Mir shukr khan killed by unknown men

ಸಾರಾಂಶ

ಭಾರತದಲ್ಲಿ ನಡೆದ ಹಲವು ಉಗ್ರ ಕೃತ್ಯಗಳ ಸಂಚುಕೋರ ಎನ್ನಲಾದ ಲಷ್ಕರ್‌ ಕಮಾಂಡರ್‌ ಮೀರ್‌ ಶುಕ್ರ್‌ ಖಾನ್ ರೈಸಾನಿಯನ್ನು ಅನಾಮಿಕ ವ್ಯಕ್ತಿಗಳು ಪಾಕಿಸ್ತಾನದ ಖ್ವೆಟ್ಟಾದಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲೂ ಧುರಂಧರ್‌ನ ಪಾತ್ರ ಶಂಕಿಸಲಾಗಿದೆ.

ಲಷ್ಕರ್‌ ಕಮಾಂಡರ್‌ ಶುಕ್ರ್‌ ಖಾನ್‌ ಹತ್ಯೆ

ಇಸ್ಲಾಮಾಬಾದ್‌: ಭಾರತದಲ್ಲಿ ನಡೆದ ಹಲವು ಉಗ್ರ ಕೃತ್ಯಗಳ ಸಂಚುಕೋರ ಎನ್ನಲಾದ ಲಷ್ಕರ್‌ ಕಮಾಂಡರ್‌ ಮೀರ್‌ ಶುಕ್ರ್‌ ಖಾನ್ ರೈಸಾನಿಯನ್ನು ಅನಾಮಿಕ ವ್ಯಕ್ತಿಗಳು ಪಾಕಿಸ್ತಾನದ ಖ್ವೆಟ್ಟಾದಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲೂ ಧುರಂಧರ್‌ನ ಪಾತ್ರ ಶಂಕಿಸಲಾಗಿದೆ.

ಲಷ್ಕರ್‌ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮರಳುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಗಳು ಮೀರ್‌ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ದಾಳಿಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವುದೇ ಸಂಘಟನೆ ಇದುವರೆಗೆ ಘಟನೆಯ ಹೊಣೆ ಹೊತ್ತಿಲ್ಲ.

ಮೀರ್‌, ಬಲೂಚಿಸ್ತಾನದಲ್ಲಿ ಲಷ್ಕರ್‌ ಸಂಘಟನೆಯ ಕಮಾಂಡರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ. ಸಂಘಟನೆಗೆ ಯುವಕರನ್ನು ನೇಮಕ ಮಾಡುವ, ಭಾರತದ ಗಡಿಬಳಿಯ ಉಗ್ರ ತರಬೇತಿ ಕೇಂದ್ರಗಳ ಮೂಲಸೌಕರ್ಯಗಳ ಹೊಣೆ ಹೊತ್ತಿದ್ದ ಎನ್ನಲಾಗಿದೆ. ಕಳೆದ 2 ತಿಂಗಳ ಅವಧಿಯಲ್ಲಿ ಭಾರತಕ್ಕೆ ಬೇಕಾಗಿದ್ದ ಹಲವು ಉಗ್ರರು ಇದೇ ರೀತಿಯಲ್ಲಿ ನಿಗೂಢ ದಾಳಿಗೆ ಬಲಿಯಾಗಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚೀನಾ ಹ್ಯಾಕ್ ಮಾಡಬಹುದೆಂಬ ಭೀತಿಗೆ ಸ್ವದೇಶದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ನಿಯೋಗ!
ಇದೊಂದು ವೈರಲ್ ಫೋಟೋ ಜಗತ್ತಿನ ನಿದ್ದೆ ಕೆಡಿಸಿದೆ; ನೀವಿನ್ನೂ ನೋಡಿಲ್ವಾ? ಏನೋ ಬರೆದಿದೆ ಅದ್ರಲ್ಲಿ ನೋಡಿ!