ಅಮೆರಿಕ H-1B ವೀಸಾ ಹಿಂದೆ ಭಾರತದ ಚಿಲ್ಕೂರು ದೇವಸ್ಥಾನ ಕೈವಾಡ, ಯುಎಸ್ ಸಂಸದನ ವಂಗ್ಯ

Published : May 14, 2026, 10:14 PM IST
Eric Schmitt mocks temple

ಸಾರಾಂಶ

ಅಮೆರಿಕ ಸಂಸದ ಇದೀಗ ಭಾರಿ ವಿವಾದ ಸೃಷ್ಟಿಸಿದ್ದಾರೆ. ಅಮೆರಿಕದ H-1B ವೀಸಾ ಭಾರತೀಯರ ಕೈಸೇರುತ್ತಿದೆ. ಅಮೆರಿಕದ ವೀಸಾ ಕಾರ್ಟೆಲ್ ವ್ಯವಸ್ಥೆ ಹೀಗೆ ಹದಗೆಡಲು ಭಾರತದ ಚಿಲ್ಕೂರು ದೇವಸ್ಥಾನದ ಕೈವಾಡವಿದೆ ಎಂದಿದ್ದಾರೆ

ವಾಶಿಂಗ್ಟನ್ (ಮೇ.14) ಅಮೆರಿಕದ ರಿಪಬ್ಲಿಕನ್ ಸಂಸದ ಎರಿಕ್ ಸ್ಮಿತ್ ವಿವಾದ ಸೃಷ್ಟಿಸಿದ್ದಾರೆ. H-1B ವೀಸಾ ಹಾಗೂ ವೀಸಾ ಜಾರಿಗೊಳಿಸುತ್ತಿರುವ ಪದ್ಧತಿ ವಿರುದ್ಧ ಹರಿಹಾಯ್ದ ಎರಿಕ್ ಸ್ಮಿತ್ , ಭಾರತೀಯರನ್ನು, ಭಾರತದ ದೇವಸ್ಥಾನವನ್ನು ಟಾರ್ಗೆಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಅಮೆರಿಕ ಕಾರ್ಮಿಕರಿಗೆ ಅನ್ಯಾಯ ಮಾಡಿ, ಭಾರತೀಯರಿಗೆ ಲಾಭ ಮಾಡಿಕೊಡುತ್ತಿರುವ H-1B ವೀಸಾ ಪದ್ಧತಿ ಅಕ್ರಮವಾಗಿದೆ. ಇದರ ಹಿಂದೆ ವೀಸಾ ಕಾರ್ಟೆಲ್ ವ್ಯವಸ್ಥೆ ಕೆಲಸ ಮಾಡುತ್ತಿದೆ. ಭಾರತದಲ್ಲಿ ವೀಸ ಕಾರ್ಟೆಲ್‌ಗೆ ಚಿಲ್ಕೂರು ದೇವಸ್ಥಾನವೇ ಇದೆ ಎಂದು ವಿವಾದ ಸೃಷ್ಟಿಸಿದ್ದಾರೆ.

ಎರಿಕ್ ಸ್ಮಿತ್ ಹೇಳಿದ್ದೇನು? ಏನಿದು ವೀಸಾ ವಿವಾದ

ಅಮೆರಿಕ ಉದ್ಯೋಗ ಮಾರುಕಟ್ಟೆಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ ಎಂದು ಎರಿಕ್ ಸ್ಮಿತ್ ಆರೋಪಿಸಿದ್ದಾರೆ. H-1B ವೀಸಾ ಜಾರಿ ಪದ್ಧತಿಯಲ್ಲಿ ಅಮರಿಕದ ಪ್ರತಿಭಾನ್ವಿತ, ಕೌಶಲ್ಯ ಭರಿತ ಉದ್ಯೋಗಗಳಿಗೆ ಅನ್ಯಾಯವಾಗುತ್ತಿದೆ. ಈ ವ್ಯವಸ್ಥೆ ಹೇಗಿದೆ ಎಂದರೆ ಭಾರತೀಯ ಉದ್ಯೋಗಿಗಳಿಗೆ ಹಾಗೂ ಟೆಕ್ ಕಂಪನಿಗಳಿಗೆ ಲಾಭ ಮಾಡಿಕೊಡಲು ಈ H-1B ವೀಸಾ ಪದ್ದತಿ ಮಾಡಲಾಗಿದೆ ಎಂದು ಎರಿಕ್ ಸ್ಮಿತ್ ಆರೋಪಿಸಿದ್ದಾರೆ.

ಅಮೆರಿಕದಲ್ಲಿ ವೀಸಾ ಕಾರ್ಟೆಲ್ (ವೀಸಾ ಗುಂಪು) ಕೆಲಸ ಮಾಡುತ್ತಿದೆ. ವಿಶ್ವವಿದ್ಯಾಲಯ, ಹಲವು ಎಜೆನ್ಸಿಗಳು, ನೇಮಕಾತಿ ಕಂಪನಿಗಳು ಸೇರಿಕೊಂಡು ಈ ಅಕ್ರಮ ನಡೆಸುತ್ತಿದೆ. H-1B ವೀಸಾವನ್ನು ಅಮೆರಿಕ ಪ್ರಜೆಗಳಿಗಿಂತ ವಿದೇಶಿಗರಿಗೆ ಅದರಲ್ಲೂ ಭಾರತೀಯರಿಗೆ ನೀಡಲಾಗುತ್ತಿದೆ. ಅಮೆರಿದ ಮೂಲಕ ಟೆಕ್ ಕಂಪನಿಗಳು ಅಮರಿಕ ಪ್ರಜೆಗಳನ್ನು ಕೆಲಸದಿಂದ ತೆಗೆದು, H-1B ವೀಸಾ ಮೂಲಕ ಭಾರತೀಯರನ್ನು ನೇಮಿಸಿಕೊಳ್ಳುತ್ತಿದೆ ಎಂದು ಎರಿಕ್ ಸ್ಮಿತ್ ಆರೋಪಿಸಿದ್ದಾರೆ. ಈ ಕುರಿತು ಆಕ್ರೋಶ ಹೊರಹಾಕುತ್ತಾ ಭಾರತದ ಚಿಲ್ಕೂರು ಬಾಲಾಜಿ ದೇವಸ್ಥಾನ ಉಲ್ಲೇಖಿಸಿದ್ದು ಮಾತ್ರವಲ್ಲ, ವ್ಯಂಗ್ಯವಾಡಿದ್ದಾರೆ.

ಚಿಲ್ಕೂರು ಬಾಲಾಜಿ ದೇವಸ್ಥಾನ ಕುರಿತು ಟ್ವೀಟ್

ಅಮರೆಕ ಸಂಸದ ಎರಿಕ್ ಸ್ಮಿತ್ H-1B ವೀಸಾ ಕುರಿತು ಆಕ್ರೋಶ ಹೊರಹಾಕುತ್ತಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಹೈದರಾಬಾದ್‌ನ ಚಿಲ್ಕೂರು ಬಾಲಾಜಿ ದೇವಸ್ಥಾನವನ್ನು ಉಲ್ಲೇಖಿಸಿದ್ದು ಮಾತ್ರವಲ್ಲ ವ್ಯಂಗ್ಯವಾಡಿದ್ದಾರೆ. ಅಮರಿಕದಲ್ಲಿ ವೀಸಾ ಕಾರ್ಟೆಲ್ ಅಕ್ರಮವಾಗಿ ಕೆಲಸ ಮಾಡುತ್ತಿದ್ದರೆ, ಈ ವೀಸಾ ಭಾರತೀಯರಿಗೆ ಸಿಗಲು ಹೈದರಾಬಾದ್‌ನಲ್ಲಿ ಚಿಲ್ಕೂರು ಬಾಲಾಜಿ ದೇವಸ್ಥಾನವಿದೆ ಎಂದಿದ್ದಾರೆ. ಈ ದೇವಸ್ಥಾನದ ಫೋಟೋವನ್ನು ಸಂಸದ ಹಂಚಿಕೊಂಡಿದ್ದಾರೆ. ಸಾವಿರಾರು ಭಾರತೀಯರು ಚಿಲ್ಕೂರು ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸುತ್ತಿದ್ದಾರೆ. ಭಾರತೀಯರಿಗೆ H-1B ವೀಸಾ ಸಿಗುತ್ತಿದೆ. ಅಮೆರಿಕನ್ನರಿಗೆ ಈ ರೀತಿಯ ಯಾವುದೇ ವ್ಯವಸ್ಥೆ ಇಲ್ಲ ಎಂದು ಎರಿಕ್ ಸ್ಮಿತ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಎರಿಕ್ ಸ್ಮಿತ್ ಚಿಲ್ಕೂರು ಬಾಲಾಜಿ ದೇವಸ್ಥಾನ ಉಲ್ಲೇಖಿಸಿದ್ದೇಕೆ?

ಹೈದರಾಬಾದ್‌ನ ಚಿಲ್ಕೂರು ಬಾಲಾಜಿ ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನ. ಈ ದೇವಸ್ಥಾನಕ್ಕೆ ಸ್ಥಳೀಯರು ವೀಸಾ ದೇವಸ್ಥಾನ ಎಂದು ಕರೆಯುತ್ತಾರೆ. ವಿಶೇಷವಾಗಿ ವಿದೇಶ ಪ್ರಯಾಣ ಮಾಡುವವರು, ಉದ್ಯೋಗ ಅರಸಿ ಸಂದರ್ಶನಕ್ಕೆ ತಯಾರಿ ಮಾಡಿಕೊಳ್ಳುವವರು, ವಿದೇಶದಲ್ಲಿ ಉದ್ಯೋಗ ಅರಸುತ್ತಿರುವವರು ಈ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಪ್ರಾರ್ಥಿಸುತ್ತಾರೆ. ಇಲ್ಲಿಗೆ ಬಂದು ಪ್ರಾರ್ಥಿಸಿದರೆ ತಮ್ಮ ವಿದೇಶದಲ್ಲಿನ ಉದ್ಯೋಗ ಬಹುತೇಕ ನನಸಾಗುವ ನಂಬಿಕೆ ಇದೆ. ಇದೇ ರೀತಿ ದರ್ಶನ, ಪೂಜೆ ಮಾಡಿದ ಭಕ್ತರ ಬೇಡಿಕೆ ಈಡೇರಿದ ಹಲವು ಉದಾಹರಣೆಗಳಿವೆ. ಹೀಗಾಗಿ ಈ ದೇವಸ್ಥಾನ ವೀಸಾ ದೇವಸ್ಥಾನ ಎಂದೇ ಜನಪ್ರಿಯಗೊಂಡಿದೆ. ಇದೀಗ ಎರಿಕ್ ಸ್ಮಿತ್ ಇದೇ ಕಾರಣದಿಂದ ಅಮರಿಕದಲ್ಲಿ ಭಾರತೀಯರಿಗೆ H-1B ವೀಸಾ ನೀಡಲು ವೀಸಾ ಕಾರ್ಟೆಲ್ ಅಕ್ರಮವಾಗಿ ಕೆಲಸ ಮಾಡುತ್ತಿದ್ದರೆ, ಭಾರತದಲ್ಲಿ ವೀಸಾ ದೇವಸ್ಥಾನ ಬೆಂಬಲ ನೀಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಎರಿಕ್ ಸ್ಮಿತ್ ದೇವಸ್ಥಾನ ಕುರಿತು ವ್ಯಂಗ್ಯವಾಡಿರುವುದು ಹಲವು ಭಕ್ತರ ಆಕ್ರೋಶಕ್ಕೆ ಕಾರಣಾವಾಗಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾನೇ ಸಾಕಿದ ಹಾವು: ಪ್ಯಾಂಟ್‌ನೊಳಗೆ ನುಗ್ಗಿ ಸೂಕ್ಷ್ಮ ಜಾಗದ ಮೇಲೆ ದಾಳಿ! ಹಾವಾಡಿಗ ಪರದಾಡುವ ವಿಡಿಯೋ ವೈರಲ್!
ಕೇವಲ 22 ಟಿಕೆಟ್ ಸೇಲ್, ಪಾಕಿಸ್ತಾನದ ಧುರಂಧರ್ ಸಿನಿಮಾದ ಕಣ್ಣೀರ ಕತೆ ಈಗ ಫುಲ್ ಟ್ರೋಲ್