China warn Trump: ತೈವಾನ್‌ ವಿಷಯಕ್ಕೆ ಬಂದ್ರೆ ಸರಿ ಇಲ್ಲ..; ಟ್ರಂಪ್‌ಗೆ ಚೀನಾ ನೇರ ವಾರ್ನಿಂಗ್‌!

Kannadaprabha News   | Kannada Prabha
Published : May 15, 2026, 06:53 AM IST
China Warns Trump Over Taiwan Issue at Beijing Summit

ಸಾರಾಂಶ

China Warns Trump ಚೀನಾ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತೈವಾನ್ ವಿಷಯದಲ್ಲಿ ಎಚ್ಚರಿಕೆ ನೀಡಿದ್ದಾರೆ. ತೈವಾನ್ ವಿಚಾರವನ್ನು ಸರಿಯಾಗಿ ನಿಭಾಯಿಸದಿದ್ದರೆ ಉಭಯ ದೇಶಗಳ ನಡುವೆ ಸಂಘರ್ಷ ಉಂಟಾಗಬಹುದು ಎಂದು ಕ್ಸಿ ಸ್ಪಷ್ಟಪಡಿಸಿದ್ದಾರೆ.

  • ಸಂಘರ್ಷಕ್ಕೆ ಕಾರಣ ಆಗ್ಬಹುದು: ಕ್ಸಿ ಎಚ್ಚರಿಕೆ\
  • ಪ್ರಾದೇಶಿಕ ಶಾಂತಿಗೆ ಚೀನಾ ಅಪಾಯ: ತೈವಾನ್‌
  • ಇರಾನ್‌ ಮೇಲೆ ಒತ್ತಡಕ್ಕೆ ಸಹಾಯ ಕೇಳಿಲ್ಲ: ಮಾರ್ಕೊ

ಬೀಜಿಂಗ್‌: 3 ದಿನಗಳ ಪ್ರವಾಸಕ್ಕೆಂದು ಚೀನಾಗೆ ತೆರಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮೊದಲ ಸುತ್ತಿನ ಮಾತುಕತೆ ವೇಳೆಯೇ ಮುಖಭಂಗವಾಗಿದೆ. ಸಭೆ ವೇಳೆ ಚೀನಾಧ್ಯಕ್ಷ ಕ್ಸಿ ಜಿನ್‌ಪಿಂಗ್‌, ‘ತೈವಾನ್‌ ವಿಚಾರವನ್ನು ಸರಿಯಾಗಿ ನಿರ್ವಹಿಸಿದರೆ ಉಭಯ ದೇಶಗಳ ಸಂಬಂಧ ಸ್ಥಿರವಾಗಿರಬಹುದು. ಇಲ್ಲದಿದ್ದರೆ ಸಂಘರ್ಷಕ್ಕದು ಕಾರಣ ಆಗಬಹುದು’ ಎಂದು ಟ್ರಂಪ್‌ಗೆ ಹೇಳಿರುವುದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದೆ.

ತೈವಾನ್‌ ತನ್ನ ಭಾಗ ಎಂದು ಚೀನಾ ಪರಿಗಣಿಸುತ್ತದೆ. ಆದರೆ ಅಮೆರಿಕ ಮಾತ್ರ ತೈವಾನ್‌ ಜತೆ ಅನಧಿಕೃತ ಸಂಬಂಧ ಹೊಂದಿದ್ದು, ಶಸ್ತ್ರಾಸ್ತ್ರ ಪೂರೈಕೆಯನ್ನು ಮುಂದುವರಿಸಿದೆ. ಇದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ. ಆದ್ದರಿಂದಲೇ ಕ್ಸಿ, ‘ತೈವಾನ್‌ ವಿಚಾರದಲ್ಲಿ ನಾಜೂಕಾಗಿ ವ್ಯವಹರಿಸಿದರಷ್ಟೇ ಅಮೆರಿಕದೊಂದಿಗಿನ ನಮ್ಮ ಸಂಬಂಧ ಸ್ಥಿರವಾಗಿರುತ್ತದೆ. ಇಲ್ಲದಿದ್ದರೆ ಅದು ಸಂಘರ್ಷಕ್ಕೂ ಕಾರಣವಾಗಿ, ದ್ವಿಪಕ್ಷೀಯ ಸಂಬಂಧವನ್ನು ಅಪಾಯಕ್ಕೆ ಒಡ್ಡಬಹುದು’ ಎಂದು ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.

ಮಾತುಕತೆಯ ಬಳಿಕ ಸುದ್ದಿಗಾರರು ತೈವಾನ್‌ ಬಗ್ಗೆ ಕೇಳಿದಾಗ ಟ್ರಂಪ್‌ ಉತ್ತರ ನೀಡದೆ ನುಣುಚಿಕೊಂಡ ಘಟನೆಯೂ ನಡೆಯಿತು.

ಚೀನಾ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳದ ತೈವಾನ್‌ ಇದಕ್ಕೆ ಪ್ರತಿಕ್ರಿಯಿಸಿದ್ದು, ‘ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಚೀನಾ ಒಂದೇ ಅಪಾಯವಾಗಿದೆ’ ಎಂದು ಕಿಡಿ ಕಾರಿದೆ.

ಸಹಾಯ ಕೇಳಿಲ್ಲ:

ಚೀನಾ ಇರಾನ್‌ನ ಮಿತ್ರದೇಶವಾಗಿದೆ. ಆದ್ದರಿಂದ, ಟ್ರಂಪ್‌ ಅವರು ತಮ್ಮ ಭೇಟಿ ವೇಳೆ ಕದನವಿರಾಮಕ್ಕೆ ಒಪ್ಪುವಂತೆ ಇರಾನ್‌ ಮೇಲೆ ಒತ್ತಡ ಹೇರಲು ಕ್ಸಿ ಬಳಿ ಮನವಿ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮರಿಕ ವಿದೇಶಾಂಗ ಸಚಿವ ಮಾರ್ಕೋ ರುಬಿಯೊ, ‘ನಮಗೆ ಚೀನಾ ಸಹಾಯದ ಅಗತ್ಯವೇ ಇಲ್ಲ’ ಎಂದಿದ್ದಾರೆ.

ಬುಧವಾರ ರಾತ್ರಿ ಚೀನಾಗೆ ಬಂದಿಳಿದಿದ್ದ ಟ್ರಂಪ್‌, ಶುಕ್ರವಾರ ಅಮೆರಿಕಕ್ಕೆ ಮರಳಲಿದ್ದಾರೆ. 2017ರ ಬಳಿಕ ಇದು ಅವರ ಮೊದಲ ಚೀನಾ ಭೇಟಿಯಾಗಿದೆ.

ಅತ್ತ ಟ್ರಂಪ್‌ ಹಾಗೂ ಕ್ಸಿ ನಡುವೆ ನಡೆದ ಮಾತುಕತೆ ಬಗ್ಗೆ ವೈಟ್‌ಹೌಸ್‌ ಹೇಳಿಕೆ ಬಿಡುಗಡೆ ಮಾಡಿದ್ದು, ‘ಆರ್ಥಿಕ ಸಹಕಾರ ವರ್ಧನೆ, ಹೋರ್ಮುಜ್‌ ಜಲಸಂಧಿ ಮೇಲಿನ ನಿರ್ಬಂಧ ತೆರವು, ಇರಾನ್‌ ಅಣುಶಕ್ತವಾಗದಂತೆ ತಡೆಯುವುದು ಸೇರಿದಂತೆ ಹಲವು ವಿಷಯಗಳ ನಡುವೆ ಚರ್ಚೆ ನಡೆಸಲಾಯಿತು’ ಎಂದು ಮಾಹಿತಿ ನೀಡಿದೆ. ಆದರೆ ತೈವಾನ್‌ ವಿಷಯವನ್ನು ಉಲ್ಲೇಖಿಸಿಲ್ಲ.

ಸದ್ಯ ಚೀನಾದ ವಸ್ತುಗಳ ಮೇಲೆ ಅಮೆರಿಕ ಶೇ.20ರಷ್ಟು ತೆರಿಗೆ ಹೇರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕ H-1B ವೀಸಾ ಹಿಂದೆ ಭಾರತದ ಚಿಲ್ಕೂರು ದೇವಸ್ಥಾನ ಕೈವಾಡ, ಯುಎಸ್ ಸಂಸದನ ವಂಗ್ಯ
ತಾನೇ ಸಾಕಿದ ಹಾವು: ಪ್ಯಾಂಟ್‌ನೊಳಗೆ ನುಗ್ಗಿ ಸೂಕ್ಷ್ಮ ಜಾಗದ ಮೇಲೆ ದಾಳಿ! ಹಾವಾಡಿಗ ಪರದಾಡುವ ವಿಡಿಯೋ ವೈರಲ್!