ಪಾಕ್‌ನಾದ್ಯಂತ ಭಾರಿ ವಿದ್ಯುತ್‌ ವ್ಯತ್ಯಯ: ತನಿಖೆಗೆ ಆದೇಶಿಸಿದ ಪ್ರಧಾನಿ ಶೆಹಬಾಜ್‌ ಷರೀಫ್‌

By Kannadaprabha NewsFirst Published Jan 24, 2023, 9:56 AM IST
Highlights

ತರಂಗಾಂತರ ಮತ್ತು ವೋಲ್ಟೇ​ಜ್‌​ನಲ್ಲಿ ಉಂಟಾದ ಸಮ​ಸ್ಯೆ​ಯಿಂದಾಗಿ ಗ್ರಿಡ್‌​ನಲ್ಲಿ ಸಮಸ್ಯೆ ಕಾಣಿ​ಸಿ​ಕೊಂಡಿದ್ದು, ಹಲವು ಪ್ರದೇ​ಶ​ಗ​ಳ ಜನರು ವಿದ್ಯುತ್‌ ಇಲ್ಲದೇ ಪರ​ದಾ​ಡು​ವಂತಾ​ಯಿತು.

ಇಸ್ಲಾ​ಮಾ​ಬಾ​ದ್‌ (ಜನವರಿ 24, 2023): ಇಂಧನ ಉಳಿ​ಸು​ವು​ದ​ಕ್ಕಾಗಿ ಮತ್ತು ಚಳಿಗಾಲದಲ್ಲಿ ವಿದ್ಯುತ್‌ ಬೇಡಿಕೆ ಕಡಿಮೆ ಇರುವ ಕಾರಣ ರಾತ್ರಿ ಆಫ್‌ ಮಾಡ​ಲಾ​ಗಿದ್ದ ರಾಷ್ಟ್ರೀಯ ಪವ​ರ್‌​ಗ್ರಿಡ್‌ ಮುಂಜಾನೆ ಆನ್‌ ಆಗದೇ ಪಾಕಿ​ಸ್ತಾ​ನದ ರಾಜ​ಧಾನಿ ಇಸ್ಲಾ​ಮಾ​ಬಾದ್‌, ಲಾಹೋರ್‌, ಕರಾಚಿ ಮತ್ತು ಪೇಶಾ​ವರ ನಗ​ರ​ಗಳು ಸೇರಿ​ದಂತೆ ದೇಶದ ಹಲವು ಭಾಗ​ಗ​ಳಲ್ಲಿ ವಿದ್ಯುತ್‌ ವ್ಯತ್ಯ​ಯ​ವಾ​ಗಿದೆ. ಪಾಕಿ​ಸ್ತಾ​ನದ ಇಂಧನ ಸಚಿ​ವಾ​ಲ​ಯದ ಪ್ರಕಾರ ಸೋಮ​ವಾರ ಬೆಳಿಗ್ಗೆ 7.34ರ ಸುಮಾ​ರಿಗೆ ಪವ​ರ್‌​ಗ್ರಿ​ಡ್‌​ನಲ್ಲಿ ತಾಂತ್ರಿಕ ದೋಷ ಕಾಣಿ​ಸಿ​ಕೊಂಡಿದೆ. ತರಂಗಾಂತರ ಮತ್ತು ವೋಲ್ಟೇ​ಜ್‌​ನಲ್ಲಿ ಉಂಟಾದ ಸಮ​ಸ್ಯೆ​ಯಿಂದಾಗಿ ಗ್ರಿಡ್‌​ನಲ್ಲಿ ಸಮಸ್ಯೆ ಕಾಣಿ​ಸಿ​ಕೊಂಡಿದ್ದು, ಹಲವು ಪ್ರದೇ​ಶ​ಗ​ಳ ಜನರು ವಿದ್ಯುತ್‌ ಇಲ್ಲದೇ ಪರ​ದಾ​ಡು​ವಂತಾ​ಯಿತು. ತಾಂತ್ರಿಕ ಸಮ​ಸ್ಯೆ​ಯಿಂದ ಹೀಗಾ​ಗಿದೆ. ಮುಂದಿನ 12 ಗಂಟೆ​ಗ​ಳಲ್ಲಿ ಇದನ್ನು ಸರಿ​ಪ​ಡಿ​ಸ​ಲಾ​ಗು​ತ್ತದೆ ಎಂದು ಸಚಿ​ವಾ​ಲಯ ಹೇಳಿತ್ತು. ಇದರ ಬೆನ್ನಲ್ಲೇ ಸೋಮವಾರ ಸಂಜೆ ಸ್ಥಿತಿ ಸಹಜಕ್ಕೆ ಬಂದಿದೆ ಎಂದು ಹೇಳಲಾಗಿದ್ದರೂ, ಹಲವೆಡೆ ಇನ್ನೂ ವಿದ್ಯುತ್ ಲಭ್ಯವಿಲ್ಲ ಎಂದು ತಿಳಿದುಬಂದಿದೆ.

ಇನ್ನು, ವಿದ್ಯುತ್ (Electricity) ಇಲ್ಲದೆ ದೇಶದ (Country) ಪ್ರಮುಖ ನಗರಗಳು ಸಹ ಪರದಾಡಿದ ಘಟನೆ ಹಿನ್ನೆಲೆ, ಈ ಬಗ್ಗೆ ತನಿಖೆಗೆ ಪಾಕಿಸ್ತಾನ ಪ್ರಧಾನಿ (Pakistan Prime Minister) ಶೆಹಬಾಜ್‌ ಷರೀಫ್‌ (Shehbaz Sharif) ಆದೇಶಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ಟಿವಿ (Geo TV) ವರದಿ ಮಾಡಿದೆ. ಆದರೂ, ವಿದ್ಯುತ್ ಅನ್ನು ಇನ್ನೂ ರಾಷ್ಟ್ರವ್ಯಾಪಿ ಸಂಪೂರ್ಣವಾಗಿ ಮರುಸ್ಥಾಪಿಸಲಾಗಿಲ್ಲ ಎಂದು ತಿಳಿದುಬಂದಿದ್ದು, ಇದರಿಂದ ಕಂಪನಿಗಳಿಗೆ ಮತ್ತು 22 ಕೋಟಿಗೂ ಹೆಚ್ಚು ಜನರ (People) ದೈನಂದಿನ ಜೀವನವನ್ನು ಅಡ್ಡಿಪಡಿಸುತ್ತಿದೆ.

ಇದನ್ನು ಓದಿ: ಭಿಕ್ಷೆ ಬೇಡುವುದು, ವಿದೇಶಿ ಸಾಲ ಕೇಳುವುದು ನಾಚಿಕೆಗೇಡಿನ ಸಂಗತಿ: ಪಾಕ್‌ ಪ್ರಧಾನಿ; ನಿಜವಾದ ಮೋದಿ ಭವಿಷ್ಯ..!

ಇಸ್ಲಾಮಾಬಾದ್‌ನಲ್ಲಿ ತಾಪಮಾನವು ಸುಮಾರು 4 ಡಿಗ್ರಿ ಸೆಲ್ಸಿಯಸ್ ಮತ್ತು ಕರಾಚಿಯಲ್ಲಿ 8 ಡಿಗ್ರಿ ಸೆಲ್ಸಿಯಸ್ ಕುಸಿಯುವ ಮುನ್ಸೂಚನೆಯ ನಡುವೆ 16 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಸ್ಥಗಿತಗೊಂಡಿದೆ. ವಿದ್ಯುತ್ ಉಲ್ಬಣದಿಂದ ಈ ತೊಂದರೆಯಾಗಿದೆ ಎಂದು ಇಂಧನ ಸಚಿವ ಖುರ್ರಂ ದಸ್ತಗಿರ್ ಅವರು ಹೇಳಿಕೊಂಡಿದ್ದಾರೆ. ಆದರೂ, 3 ತಿಂಗಳಲ್ಲಿ ಎರಡನೇ ಮಹತ್ವದ ಗ್ರಿಡ್ ಸ್ಥಗಿತವಾಗಿದೆ ಮತ್ತು ಪಾಕಿಸ್ತಾನದ ಜನಸಂಖ್ಯೆಗೆ ಪ್ರತಿದಿನವೂ ಕತ್ತಲ ರಾತ್ರಿ ಅನುಭವಿಸುವಂತಾಗಿದೆ. 

ಗುಡ್ಡುದಿಂದ ಕ್ವೆಟ್ಟಾವರೆಗಿನ ಪ್ರಸರಣ ಮಾರ್ಗದಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ ವಿದ್ಯುತ್ ಕಡಿತವು ಸಂಭವಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಜೆ ನ್ಯೂಸ್ ವರದಿ ಮಾಡಿದೆ. ಸಿಂಧ್, ಪಂಜಾಬ್ ಮತ್ತು ಇಸ್ಲಾಮಾಬಾದ್ ಪ್ರದೇಶಗಳು ವಿದ್ಯುತ್ ಸ್ಥಗಿತದಿಂದ ಪ್ರಭಾವಿತವಾಗಿವೆ ಎಂದು ಮೂಲಗಳು ಬಹಿರಂಗಪಡಿಸಿವೆ. ಮೂಲಗಳ ಪ್ರಕಾರ, ವಿದ್ಯುತ್ ಸಂಪೂರ್ಣ ಮರುಸ್ಥಾಪನೆಗೆ ಸಮಯ ತೆಗೆದುಕೊಳ್ಳಬಹುದು. ಪಾಕಿಸ್ತಾನದಲ್ಲಿ ಕಳೆದ 4 ತಿಂಗಳುಗಳಲ್ಲಿ ವರದಿಯಾದ ಎರಡನೇ ವಿದ್ಯುತ್ ದೊಡ್ಡ ವ್ಯತ್ಯಯ ಇದಾಗಿದ್ದು, ಇದು ಪ್ರಸ್ತುತ ಇಂಧನ ಬಿಕ್ಕಟ್ಟು ಮತ್ತು ಹೆಚ್ಚಿನ ಇಂಧನ ವೆಚ್ಚವನ್ನು ಎದುರಿಸುತ್ತಿದೆ.

ಇದನ್ನೂ ಓದಿ: ನಾವು ಪಾಠ ಕಲಿತಿದ್ದೇವೆ: ಪ್ರಧಾನಿ ಮೋದಿ ಜತೆ ಪ್ರಾಮಾಣಿಕ ಮಾತುಕತೆ ನಡೆಸಬೇಕು ಎಂದ ಪಾಕ್‌ ಪಿಎಂ ಶೆಹಬಾಜ್‌..!

ಇಸ್ಲಾಮಾಬಾದ್, ರಾವಲ್ಪಿಂಡಿ, ಅಟ್ಟಾಕ್, ಜೇಲಂ, ಚಕ್ವಾಲ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (Pak Occupied Kashmir) (ಪಿಒಕೆ) ಭಾಗಗಳಿಗೆ ವಿದ್ಯುತ್ ಒದಗಿಸುವ ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿ (Islamabad Electricity Supply Company) (ಐಇಎಸ್‌ಸಿಒ) ತನ್ನ ಕಂಪನಿಯ 117 ಗ್ರಿಡ್ ಸ್ಟೇಷನ್‌ಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸುದ್ದಿ ವರದಿ ಹೇಳಿದೆ. 

ಆರ್ಥಿಕ ಸಂಕಷ್ಟಕ್ಕೆ ಸಿಲು​ಕಿ​ರುವ ಪಾಕಿ​ಸ್ತಾನ ಇಂಧನ ವೆಚ್ಚ​ವನ್ನು ಉಳಿ​ತಾಯ ಮಾಡಲು ರಾತ್ರಿಯ ವೇಳೆ ವಿದ್ಯುತ್‌ ಬಳ​ಕೆ​ಯನ್ನು ಸೀಮಿ​ತ​ಗೊ​ಳಿ​ಸಿದೆ. ಅಲ್ಲದೆ, ತೀವ್ರ ಚಳಿಗಾಲದ ಕಾರಣ ವಿದ್ಯುತ್‌ಗೆ ಕಡಿಮೆ ಬೇಡಿಕೆ ಇದೆ. ಹೀಗಾಗಿ ಪವರ್‌ ಗ್ರಿಡ್‌ನಲ್ಲಿ ರಾತ್ರಿ ವಿದ್ಯುತ್‌ ಉತ್ಪಾದನೆ ನಿಲ್ಲಿಸಲಾಗುತ್ತಿದೆ. ಪಾಕಿ​ಸ್ತಾನ ಈ ತಾಂತ್ರಿಕ ಸಮ​ಸ್ಯೆಯ ಕಾರಣ ವಿದ್ಯುತ್‌ ವ್ಯತ್ಯಯ ಎದು​ರಿ​ಸು​ತ್ತಿ​ರು​ವುದು ಇದೇ ಮೊದ​ಲಲ್ಲ. ಕಳೆದ ವರ್ಷ ಅಕ್ಟೋ​ಬ​ರ್‌​ನಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡು ಇಡೀ ದೇಶ 12 ಗಂಟೆ​ಗಳ ಕಾಲ ಕತ್ತ​ಲಲ್ಲಿ ಮುಳು​ಗಿತ್ತು.

ಇದನ್ನೂ ಓದಿ: ಪಾಕ್‌ನಲ್ಲಿ ಆಹಾರಕ್ಕೆ ತೀವ್ರ ಹಾಹಾಕಾರ: ಗನ್‌ ಹಿಡಿದು ಸರ್ಕಾರದಿಂದ ಆಹಾರ ವಿತರಣೆ

click me!