ಸೌದಿ ಅರೇಬಿಯಾಗೆ ಪಾಕಿಸ್ತಾನದಿಂದ 13,000 ಸೈನಿಕರು, 18 ಜೆಟ್ ರವಾನೆ

Published : Apr 12, 2026, 09:19 AM IST
us iran ceasefire china role pakistan mediation trump threat hormuz strait oil crisis global diplomacy analysis

ಸಾರಾಂಶ

ಕಳೆದ ವರ್ಷದ ರಕ್ಷಣಾ ಒಪ್ಪಂದದ ಅನ್ವಯ, ಪಾಕಿಸ್ತಾನವು 13,000 ಸೈನಿಕರು ಮತ್ತು ಯುದ್ಧ ವಿಮಾನಗಳನ್ನು ಒಳಗೊಂಡ ಮಿಲಿಟರಿ ತುಕಡಿಯನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿದೆ. ಈ ನಿಯೋಜನೆಯು ಉಭಯ ದೇಶಗಳ ನಡುವಿನ ಜಂಟಿ ಮಿಲಿಟರಿ ಸಹಕಾರ ಮತ್ತು ರಕ್ಷಣಾ ಬಲವರ್ಧನೆಯ ಉದ್ದೇಶವನ್ನು ಹೊಂದಿದೆ.

13,000 ಸೈನಿಕರು ಮತ್ತು18 ವಿಮಾನಗಳ ಪಾಕಿಸ್ತಾನಿ ಮಿಲಿಟರಿ ತುಕಡಿ ಸೌದಿ ಅರೇಬಿಯಾಗೆ

ಲಾಹೋರ್: ಕಳೆದ ವರ್ಷದ ರಕ್ಷಣಾ ಒಪ್ಪಂದದಂತೆ 13,000 ಸೈನಿಕರು ಮತ್ತು 10 ರಿಂದ 18 ವಿಮಾನಗಳನ್ನು ಒಳಗೊಂಡ ಪಾಕಿಸ್ತಾನಿ ಮಿಲಿಟರಿ ತುಕಡಿಯು ಸೌದಿ ಅರೇಬಿಯಾವನ್ನು ತಲುಪಿದೆ ಎಂದು ಸೌದಿ ಸರ್ಕಾರ ಶನಿವಾರ ತಿಳಿಸಿದೆ. ಸೌದಿಯ ಕಿಂಗ್ ಅಬ್ದುಲಜೀಜ್ ವಾಯು ನೆಲೆಗೆ ನಿಯೋಜಿಸಲಾದ ಈ ಸೇನಾ ತುಕಡಿಯಲ್ಲಿ ಪಾಕ್ ವಾಯುಪಡೆಯ ಯುದ್ದ ವಿಮಾನಗಳು ಮತ್ತು ಸಹಾಯಕ ವಿಮಾನಗಳು ಸೇರಿವೆ. ಜಂಟಿ ಮಿಲಿಟರಿ ಸಹಕಾರ ಹಾಗೂ ಉಭಯ ದೇಶಗಳ ರಕ್ಷಣಾ ಬಲವರ್ಧನೆಯ ಉದ್ದೇಶದಿಂದ ಪಾಕ್ ಇವುಗಳನ್ನು ರವಾನಿಸಿದೆ ಎಂದು ಸೌದಿ ಸರ್ಕಾರ ಹೇಳಿದೆ.

ಕಳೆದ ತಿಂಗಳು ಇರಾನ್ ಕೊಲ್ಲಿಯಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸುತ್ತಿರುವಾಗ, ಪಾಕ್ ಸೌದಿಗೆ ಕ್ಷಿಪಣಿ ಪ್ರತಿಬಂಧಕಗಳನ್ನು ಕಳಿಸಿತ್ತು ಎನ್ನಲಾಗಿದೆ.

ಯುದ್ಧದ ಬಳಿಕ ಮೊದಲ ಬಾರಿ ದುಬೈ ಭಾರತೀಯರ ಜತೆ ಜೈಶಂಕರ್ ಭೇಟಿ

ಅಬುಧಾಬಿ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕ‌ರ್ ಅವರು ಯುಎಇಯಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿಯಾದರು. ಯುದ್ಧದ ಬಳಿಕ ಜೈಶಂಕರ್ ಭಾರತೀಯರ ಭೇಟಿ ಆಗುತ್ತಿರುವುದು ಇದೇ ಮೊದಲು. 2 ದಿನಗಳ ಯುಎಇ ಭೇಟಿಯಲ್ಲಿರುವ ಜೈಶಂಕರ್, ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವತ್ತ ಗಮನಹರಿಸುವ ನಿರೀಕ್ಷೆಯಿದೆ.

ಇದನ್ನೂಓದಿ: 50 ವರ್ಷಗಳ ಬಳಿಕ ನಾಸಾದ ಯಶಸ್ವಿ ಚಂದ್ರಯಾನ ದಿಗ್ವಿಜಯದ ಹಿಂದೆ ಭಾರತೀಯ ಅಮಿತ್ ಕ್ಷತ್ರಿಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

50 ವರ್ಷಗಳ ಬಳಿಕ ನಾಸಾದ ಯಶಸ್ವಿ ಚಂದ್ರಯಾನ ದಿಗ್ವಿಜಯದ ಹಿಂದೆ ಭಾರತೀಯ ಅಮಿತ್ ಕ್ಷತ್ರಿಯ
ಹೋರ್ಮುಜ್ ತೆರೆಯಲು ಇರಾನ್‌ಗೆ ತಾನೇ ಹೂತಿಟ್ಟ ಜಲಬಾಂಬ್ ಅಡ್ಡಿ: ಹೋರ್ಮುಜ್‌ ತೆರವು ಆರಂಭಿಸಿದ್ದೇವೆ ಎಂದ ಟ್ರಂಪ್