Pakistan Satellites Monitoring India: ಭಾರತದ ಮೇಲೆ ನಿಗಾ ಇಡಲು ಪಾಕ್‌ನಿಂದ 16 ತಿಂಗಳಲ್ಲಿ 6 ಉಪಗ್ರಹ ಉಡಾವಣೆ!

Kannadaprabha News   | Kannada Prabha
Published : Jun 09, 2026, 10:25 AM IST
Pakistan Satellites Monitoring India Every 48 Hours Report Claims

ಸಾರಾಂಶ

ಕಳೆದ 16 ತಿಂಗಳಲ್ಲಿ ಪಾಕಿಸ್ತಾನವು ಚೀನಾದ ಸಹಾಯದಿಂದ 6 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಉಪಗ್ರಹಗಳು ಮುಖ್ಯವಾಗಿ ಭಾರತದ, ಅದರಲ್ಲೂ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಮೇಲೆ ಕಣ್ಣಿಡಲು ನಿಯೋಜಿಸಲ್ಪಟ್ಟಿವೆ. ಉತ್ತಮ ಕ್ಯಾಮರಾ ಮತ್ತು ಎಐ ತಂತ್ರಜ್ಞಾನ ಬಳಸಿ ಭಾರತದ ಸೇನಾ ಚಟುವಟಿಕೆಗಳ ಮೇಲೆ ನಿಗಾ.

  • ಉತ್ತಮ ಕ್ಯಾಮರಾ, ಸೆನ್ಸಾರ್‌, ಎಐ ಅಳವಡಿಕೆ
  • ಜಮ್ಮು ಕಾಶ್ಮೀರದತ್ತ ಪಾಕ್‌ ಸ್ಯಾಟಲೈಟ್‌ ಕಣ್ಣು
  • ಚೀನಾದ ಜತೆಗೂ ಈ ಮಾಹಿತಿ ಹಂಚಿಕೆ ಆತಂಕ

ಇಸ್ಲಾಮಾಬಾದ್‌: ಭಾರತದ ಮೇಲೆ ಕಣ್ಣಿಡುವ ಉದ್ದೇಶದಿಂದ ನೆರೆದೇಶ ಪಾಕಿಸ್ತಾನವು ಕಳೆದ 16 ತಿಂಗಳುಗಳಲ್ಲಿ 6 ಉಪಗ್ರಹಗಳನ್ನು ಉಡಾವಣೆ ಮಾಡಿದೆ ಎಂದು ‘ದ ಪ್ರಿಂಟ್‌’ ವರದಿ ಮಾಡಿದೆ. ಪಾಕ್‌ನ ಬಾಹ್ಯಾಕಾಶ ಸಂಸ್ಥೆ ಸುಪಾರ್ಕೋ ಸ್ಥಾಪನೆಯಾದಾಗಿನಿಂದ ಹಾರಿಸಿರುವುದು 15 ಉಪಗ್ರಹಗಳನ್ನಷ್ಟೇ ಎಂಬುದು ಗಮನಾರ್ಹ.

2025ರ ಜನವರಿಯಿಂದ ಈ ವರ್ಷದ ಜೂನ್‌ ವರೆಗೆ ಪಾಕ್‌ ಉಡಾವಣೆ ಮಾಡಿದ ಬಹುತೇಕ ಉಪಗ್ರಹಗಳನ್ನು, ಭಾರತದ ಭೂಪ್ರದೇಶ ಕಾಣುವಂತೆ ಕಕ್ಷೆಗಳಲ್ಲಿ ನಿಯೋಜಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಇವುಗಳು ಜಮ್ಮು ಕಾಶ್ಮೀರದ ಮೇಲೆ ಕಣ್ಣಿಟ್ಟಿದೆ ಎಂದು ವರದಿ ಹೇಳಿದೆ.

ಕಕ್ಷೆಯಲ್ಲಿರುವ ಸ್ಯಾಟಲೈಟ್‌ಗಳಲ್ಲಿ ಉತ್ತಮ ರೆಸಲ್ಯೂಷನ್‌ (ಸ್ಪಷ್ಟತೆ) ಕ್ಯಾಮರಾ, ಸೆನ್ಸರ್‌, ಎಐ ಬೆಂಬಲಿತ ಫೊಟೋ ಪರಿಶೀಲನೆ ತಂತ್ರಜ್ಞಾನವಿದ್ದು, ನೆರೆರಾಷ್ಟ್ರದಲ್ಲಿ ಆಗುತ್ತಿರುವ ಮೂಲಸೌಕರ್ಯ ಅಭಿವೃದ್ಧಿ, ಸೇನಾ ನೆಲೆಗಳು, ಸೇನೆಯ ಓಡಾಟ ಮತ್ತು ಸಮುದ್ರದಲ್ಲಾಗುವ ಚಟುವಟಿಕೆಗಳನ್ನು ನಿಖರವಾಗಿ ನೋಡಬಹುದಾಗಿದೆ.

ಅತ್ತ ಪಾಕ್‌ ಮಾತ್ರ, ಕೃಷಿ, ವಿಪತ್ತು ನಿರ್ವಹಣೆ, ಸಂಪನ್ಮೂಲ ಮೇಲ್ವಿಚಾರಣೆಗಾಗಿ ಆಧುನಿಕ ಭೂ-ವೀಕ್ಷಣಾ ಉಪಗ್ರಹಗಳು ಉಡಾವಣೆ ಮಾಡಲಾಗಿದ್ದು, ಇವು ಸೇನೆಗೆ ನೆರವು ನೀಡುತ್ತದಷ್ಟೇ ಎಂದು ಹೇಳುತ್ತಿದೆ.

ಚೀನಾ ಸಾಥ್‌:

ಪಾಕಿಸ್ತಾನದ ಬಹುತೇಕ ಉಪಗ್ರಹಗಳು ಕಕ್ಷೆ ಸೇರಿರುವುದು ಚೀನಾದ ರಾಕೆಟ್‌ಗಳಲ್ಲಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ರನ್‌ವೇನಲ್ಲೇ ವಿಮಾನ ಪತನ, ಅಪ್ಪಳಿಸಿ ಸ್ಫೋಟಗೊಂಡ ದೃಶ್ಯ ಸೆರೆ
ಮತ್ತೆ ಅಮೇರಿಕಾಗೆ ಹಾರಿರೋ ಯಶ್; USA ಸುತ್ತಾಡಿ ರಾಕಿಂಗ್ ಸ್ಟಾರ್ ಮಾಡ್ತಿರೋ ಪ್ಲಾನ್ ಏನ್ ಗೊತ್ತಾ?