
ಟೆಕ್ಸಾಸ್ (ಜೂ.08) ಆಗಸದಲ್ಲಿ ಪ್ರಯಾಣದಲ್ಲಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪೈಲೆಟ್ ತಕ್ಷಣವೇ ತುರ್ತು ಲ್ಯಾಂಡಿಂಗ್ ಮಾಡಲು ಸಂದೇಶ ರವಾನಿಸಿದ್ದಾರೆ. ಆದರೆ ವಿಮಾನ ಇನ್ನೇನು ಲ್ಯಾಂಡಿಂಗ್ ಆಗಬೇಕು ಅನ್ನುವಷ್ಟರಲ್ಲೇ ವಿಮಾನ ರನ್‌ವೇನಲ್ಲೆ ನೆಲಕ್ಕೆ ಅಪ್ಪಳಿಸಿದೆ. ತಕ್ಷಣವೇ ವಿಮಾನದಲ್ಲಿ ಬೆಂಕಿ ಜ್ವಾಲೆ ಆವರಿಸಿ ಸುಟ್ಟು ಭಸ್ಮವಾದ ಘಟನೆ ಡೊಮೈನಿಕನ್ ರಿಪಬ್ಲಿಕನ್‌ನ ಲಾ ರೊಮಾನಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಆಸ್ಟಿನ್ ಲಾ ರೊಮಾನಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಆಗಸದಲ್ಲಿ ಪ್ರಯಾಣ ಮಾಡುತ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಪೈಲೆಟ್ ತುರ್ತು ಸಂದೇಶ ಕಳುಹಿಸಿದ್ದಾರೆ. ಬಳಿಕ ಮರಳಿ ಲಾ ರೊಮಾನಿಯಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಮುಂದಾಗಿದ್ದಾರೆ. ಇದರಂತೆ ವಿಮಾನ ಲ್ಯಾಡಿಂಗ್ ವೇಳೆ ಸಮಸ್ಯೆಯಾಗಿದೆ. ಪರಿಣಾಮ ವಿಮಾನ ರನ್‌ವೇಗೆ ಅಪ್ಪಳಿಸಿದೆ. ಸೆಕೆಂಡ್‌ಗಳ ಅಂತರದಲ್ಲಿ ವಿಮಾನದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡ ಹೊತ್ತಿ ಉರಿದಿದೆ. ಘಟನೆಯಲ್ಲಿ ಇಬ್ಬರು ಪೈಲೆಟ್ ಸಾವು ಕಂಡಿದ್ದಾರೆ.
ಅದೃಷ್ಟವಶಾತ್ ಈ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಕೇವಲ ಇಬ್ಬರು ಪೈಲೆಟ್ ಮಾತ್ರ ಪ್ರಯಾಣ ಬೆಳೆಸಿದ್ದರು. ಖಾಸಗಿ ಜೆಟ್ ವಿಮಾನ ಇದಾಗಿತ್ತು. ಗಲ್ಫ್‌ಸ್ಟೀಮ್ G200 ವಿಮಾನ ಕೆಲವೆ ಸೆಕೆಂಡ್‌ಗಳಲ್ಲಿ ಸ್ಫೋಟಗೊಂಡು ಸುಟ್ಟು ಬೂದಿಯಾಗಿದೆ. ಇತ್ತ ಅಮೆರಿಕ ರಿಜಿಸ್ಟ್ರೇಶನ್ ವಿಮಾನ ಇದಾಗಿದೆ. ಇತ್ತ ಅಮೆರಿಕನ್ ಏವಿಯೇಶನ್ ಎಜೆನ್ಸಿ ತನಿಖೆದೆ ಆದೇಶಿಸಿದೆ.
ವಿಮಾನ ತುರ್ತು ಲ್ಯಾಂಡಿಂಗ್ ಮಾಡುತ್ತಿರುವ ಹಾಗೂ ಸ್ಫೋಟಗೊಂಡು ಸುಟ್ಟು ಬೂದಿಯಾದ ಘಟನೆ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ವಿಮಾನ ಲ್ಯಾಂಡಿಂಗ್ ಮಾಡುತ್ತಿರುವ ದೃಶ್ಯವಿದೆ. ರನ್‌ವೇನಲ್ಲಿ ಲ್ಯಾಂಡ್ ಆದ ವಿಮಾನ ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ಪೈಲೆಟ್ ಮತ್ತೆ ವಿಮಾನ ಟೇಕ್ ಆಫ್ ಮಾಡಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನ ಅರ್ಧಕ್ಕೆ ಕೈಕೊಟ್ಟಿದೆ. ಹೀಗಾಗಿ ವಿಮಾನ ಮತ್ತೆ ರನ್‌ವೇಗೆ ಅಪ್ಪಳಿಸಿದೆ. ಅಷ್ಟರಲ್ಲೇ ವಿಮಾನದ ಇಂಧನದಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಈ ಸಂಪೂರ್ಣ ದೃಶ್ಯ ಸೆರೆಯಾಗಿದೆ.
A tragic accident occurred in the Dominican Republic last evening. A Gulfstream G200, tail number N318JF, departed La Romana International Airport for Austin, Texas, but declared an emergency after takeoff. The crew attempted to return to LRM, but the jet touched down hard on… pic.twitter.com/4dIKpNwQc3
— Turbine Traveller (@Turbinetraveler) June 8, 2026
ಇತ್ತ ಪೈಲೆಟ್ ತುರ್ತು ಲ್ಯಾಂಡಿಂಗ್ ಸಂದೇಶ ನೀಡಿದ ಬೆನ್ನಲ್ಲೇ ರನ್ ವೇ ಸಜ್ಜುಮಾಡಲಾಗಿತ್ತು. ಆದರೆ ವಿಮಾನ ಯಶಸ್ವಿಯಾಗಿ ಲ್ಯಾಂಡ್ ಆಗಲಿಲ್ಲ. ಸ್ಫೋಟದಲ್ಲಿ ಇಬ್ಬರು ಪೈಲೆಟ್ ಮೃತಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ