ಒಸಮಾ ಬಿನ್‌ ಲಾಡೆನ್‌ಗೆ ಹುತಾತ್ಮ ಪಟ್ಟ ಕೊಟ್ಟ ಪಾಕ್‌ ಪ್ರಧಾನಿ!

By Kannadaprabha News  |  First Published Jun 26, 2020, 1:06 PM IST

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್ತಿನ ಬಜೆಟ್‌ ಅಧಿವೇಶನವನ್ನುದ್ದೇಶಿಸಿ ಮಾತನಾಡುವ ವೇಳೆ ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಾಗಿದ್ದ ಒಸಮಾ ಬಿನ್‌ ಲಾಡೆನ್‌ನನ್ನು ಹುತಾತ್ಮ ಎಂದು ಸಂಬೋಧಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ಇಸ್ಲಾಮಾಬಾದ್‌(ಜೂ.26): ಅಮೆರಿಕದ ಸೇನಾ ಪಡೆಯಿಂದ ಹತ್ಯೆಗೀಡಾದ ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಾಗಿದ್ದ ಒಸಮಾ ಬಿನ್‌ ಲಾಡೆನ್‌ನನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹುತಾತ್ಮ ಎಂದು ಸಂಬೋಧಿಸಿದ್ದಾರೆ. ಅಲ್ಲದೆ ಭಯೋತ್ಪಾದನೆ ವಿರುದ್ಧದ ಅಮೆರಿಕದ ಯುದ್ಧದಲ್ಲಿ ಕೈಜೋಡಿಸುವ ಮೂಲಕ ಪಾಕಿಸ್ತಾನ ಮುಖಭಂಗ ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ. 

ಸ್ವಿಸ್‌ ಬ್ಯಾಂಕಲ್ಲಿರುವ ಭಾರತೀಯರ ಹಣ 6,625 ಕೋಟಿ ರು.ಗೆ ಕುಸಿತ

Tap to resize

Latest Videos

ಈ ಬಗ್ಗೆ ಗುರುವಾರ ಸಂಸತ್ತಿನ ಬಜೆಟ್‌ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಖಾನ್‌, ‘ನಮಗೇ ಮಾಹಿತಿ ನೀಡದೆ ನಮ್ಮ ಗಡಿಯೊಳಕ್ಕೆ ಸೇನೆಯನ್ನು ನುಗ್ಗಿಸಿ ಲಾಡೆನ್‌ನನ್ನು ಅಮೆರಿಕ ಕೊಲ್ಲುತ್ತದೆ. ಈ ಘಟನೆ ಬಳಿಕ ಇಡೀ ವಿಶ್ವವೇ ನಮ್ಮನ್ನು ಟೀಕಿಸಲು ಆರಂಭಿಸಿತು. ಜೊತೆಗೆ, ಭಯೋತ್ಪಾದನೆ ವಿರುದ್ಧದ ಅಮೆರಿಕದ ದಾಳಿಯಲ್ಲಿ ಪಾಕಿಸ್ತಾನದ 70 ಸಾವಿರ ಮಂದಿ ಸಾವನ್ನಪ್ಪಿದ್ದರು. ಇದು ಪಾಕಿಸ್ತಾನಕ್ಕೆ ಮುಜುಗರದ ಸಂಗತಿ’ ಎಂದಿದ್ದಾರೆ.

ಐಸಿಸ್‌ ಮುಖ್ಯಸ್ಥನ ತಲೆಗೆ 75 ಕೋಟಿ ರುಪಾಯಿ ಇನಾಮು ಘೋಷಿಸಿದ ಅಮೆರಿಕ!

ವಾಷಿಂಗ್ಟನ್‌: ಐಸಿಸ್‌ ಉಗ್ರ ಸಂಘಟನೆಯ ನೂತನ ಮುಖ್ಯಸ್ಥ ಅಮಿರ್‌ ಮೊಹಮ್ಮದ್‌ ಸೈದ್‌ ಅಬ್ದುಲ್‌-ರಹ್ಮಾ ಅಲ್‌ ಮಾವ್ಲಾ ಕುರಿತು ಮಾಹಿತಿ ನೀಡಿದವರಿಗೆ 10 ಮಿಲಿಯನ್‌ ಡಾಲರ್‌(75 ಕೋಟಿ ರು.) ಬಹುಮಾನ ನೀಡುವುದಾಗಿ ಅಮೆರಿಕ ಘೋಷಣೆ ಮಾಡಿದೆ. 

2019ರ ಅಕ್ಟೋಬರ್‌ನಲ್ಲಿ ಅಮೆರಿಕ ಭರ್ಜರಿ ಕಾರಾರ‍ಯಚರಣೆ ಮೂಲಕ ಆಗಿನ ಐಸಿಸ್‌ ಮುಖ್ಯಸ್ಥನಾಗಿದ್ದ ಅಬುಕರ್‌ ಅಲ್‌ ಬಗ್ದಾದಿಯನ್ನು ಸಂಹಾರ ಮಾಡಿತ್ತು. ಆ ನಂತರ ಬಗ್ದಾದಿ ಉತ್ತರಾಧಿಕಾರಿಯಾಗಿ ಅಲ್‌ ಮಾವ್ಲಾ ನೇಮಕಗೊಂಡಿದ್ದ.  ಅವನ ಹಿಡಿಯಲು ಸಾಹಸ  ಪಡುತ್ತಿರುವ ಅಮೆರಿಕ ಅಲ್‌ ಮಾವ್ಲಾ ತಲೆಗೆ 5 ಮಿಲಿಯನ್‌ ಡಾಲರ್‌(37.5 ಕೋಟಿ ರು.) ಘೋಷಣೆ ಮಾಡಿತ್ತು. ಇದನ್ನು ಇದೀಗ 75 ಕೋಟಿ ರು.ಗೆ ಪರಿಷ್ಕರಣೆ ಮಾಡಿದೆ.


 

click me!