ಗಲ್ವಾನ್ ಆಯ್ತು, ಈಗ ಮತ್ತೊಂದು ಗಡಿಯಲ್ಲಿ ಚೀನಾ ಕ್ಯಾತೆ..!

Kannadaprabha News   | Asianet News
Published : Jun 26, 2020, 08:02 AM IST
ಗಲ್ವಾನ್ ಆಯ್ತು, ಈಗ ಮತ್ತೊಂದು ಗಡಿಯಲ್ಲಿ ಚೀನಾ ಕ್ಯಾತೆ..!

ಸಾರಾಂಶ

ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ರಕ್ತದೋಕುಳಿ ಹರಿಸಿದ್ದ ಚೀನಿ ಸೈನಿಕರು ಇದೀಗ ಭಾರತದ ಮತ್ತೊಂದು ಗಡಿ ಪ್ರದೇಶದಲ್ಲಿ ಕ್ಯಾತೆ ಶುರುವಿಟ್ಟುಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜೂ.26): ಭಾರತ ಹಾಗೂ ಚೀನಾ ನಡುವೆ 45 ವರ್ಷಗಳಲ್ಲೇ ಮೊದಲ ರಕ್ತಪಾತಕ್ಕೆ ಸಾಕ್ಷಿಯಾದ ಗಲ್ವಾನ್‌ ಕಣಿವೆಯಿಂದ ಸೇನೆ ವಾಪಸ್‌ ಕರೆಸಿಕೊಳ್ಳಲು ಉಭಯ ದೇಶಗಳು ನಿರ್ಧರಿಸಿದ ಬೆನ್ನಲ್ಲೇ, ಚೀನಾ ಹೊಸ ಸಂಘರ್ಷಕ್ಕೆ ಇಳಿದಿದೆ. ಗಲ್ವಾನ್‌ನಿಂದ ಉತ್ತರಕ್ಕಿರುವ ದೆಪ್ಸಾಂಗ್‌ಗೆ ಏಕಾಏಕಿ ಭಾರಿ ಪ್ರಮಾಣದಲ್ಲಿ ಯೋಧರನ್ನು ನಿಯೋಜನೆ ಮಾಡಿದೆ. ಇದಕ್ಕೆ ತಿರುಗೇಟು ಕೊಟ್ಟಿರುವ ಭಾರತ ಕೂಡ ಸೈನಿಕರು ಹಾಗೂ ಸಮರ ಸಲಕರಣೆಗಳನ್ನು ರವಾನಿಸಿದೆ.

ದೆಪ್ಸಾಂಗ್‌ನಲ್ಲಿ ತನ್ನದೆಂದು ವಾದಿಸುತ್ತಿರುವ ಪ್ರದೇಶದ ಬಳಿಗೆ ಭಾರಿ ಸಂಖ್ಯೆಯಲ್ಲಿ ಯೋಧರನ್ನು ಚೀನಾ ಕಳುಹಿಸಿದೆ. ಸೈನಿಕರ ನಿಯೋಜನೆಯಿಂದಾಗಿ ಭಾರತೀಯ ಯೋಧರ ಗಸ್ತಿಗೆ ಅಡ್ಡಿಯಾಗಿದೆ. ಇದರೊಂದಿಗೆ ಭಾರತ- ಚೀನಾ ನಡುವೆ ಗಡಿಯಲ್ಲಿ ಇತ್ತೀಚಿನ ದಿನಗಳಲ್ಲಿ 5ನೇ ಬಿಕ್ಕಟ್ಟಿನ ಸ್ಥಳ ಉದ್ಭವಿಸಿದಂತಾಗಿದೆ. ಈವರೆಗೆ ಪಾಂಗಾಂಗ್‌ ಸರೋವರದ ಫಿಂಗರ್‌ 4, ಹಾಟ್‌ ಸ್ಟ್ರಿಂಗ್‌ ಸೆಕ್ಟರ್‌, ಗಲ್ವಾನ್‌ ಕಣಿವೆಯ 14 ಮತ್ತು 15ನೇ ಗಸ್ತು ಪಾಯಿಂಟ್‌ನಲ್ಲಿ ಉಭಯ ದೇಶಗಳ ನಡುವೆ ತಿಕ್ಕಾಟ ಇತ್ತು.

3 ಪರಮಾಣು ಯುದ್ಧ ನೌಕೆ ಬೆನ್ನಲ್ಲೇ ಭಾರತದ ಬೆಂಬಲಕ್ಕೆ ಸೇನೆ ಕಳಿಸಿದ ಅಮೆರಿಕ

ದೆಪ್ಸಾಂಗ್‌ ಕಣಿವೆಯಲ್ಲಿ ಚೀನಾ 2013ರಲ್ಲೂ ಕ್ಯಾತೆ ತೆಗೆದಿತ್ತು. ಇದೀಗ ಚೀನಾ ಯೋಧರ ಜಮಾವಣೆಯಿಂದಾಗಿ ಭಾರತೀಯ ಸೇನೆ ಯೋಧರು 10, 11, 11ಎ, 12 ಹಾಗೂ 13 ಗಸ್ತು ಕೇಂದ್ರಗಳಿಗೆ ಹೋಗುವುದೇ ಕಷ್ಟವಾಗಲಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ