ಪಾಕ್ ಪಿಎಂ ಶಹಬಾಜ್ ಷರೀಪ್ ರಷ್ಯಾದೊಂದಿಗೆ ಬಲಿಷ್ಠ ಸಂಬಂಧ ಬಯಸುತ್ತೇವೆ ಎಂದಾಗ ಪುಟಿನ್ ಹೇಳಿದ್ದೇನು? 'ದುರದೃಷ್ಟವಶಾತ್' ಎಂದಿದ್ಯಾಕೆ?

Published : Sep 03, 2025, 08:19 PM IST
Pakistan PM Shahbaz Sharif Meets Putin at SCO Summit 2025

ಸಾರಾಂಶ

SCO ಶೃಂಗಸಭೆಯಲ್ಲಿ ಭಾರತ, ಅಫ್ಘಾನಿಸ್ತಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ ಷರೀಫ್ ಮತ್ತು ಪುಟಿನ್. ವ್ಯಾಪಾರ ಕುಸಿತದ ಬಗ್ಗೆ ಪುಟಿನ್ 'ದುರದೃಷ್ಟ' ಎಂದಿದ್ದೇಕೆ? ನವೆಂಬರ್‌ನಲ್ಲಿ ರಷ್ಯಾದಲ್ಲಿ ನಡೆಯಲಿರುವ SCO ಸಭೆಗೆ ಷರೀಫ್‌ಗೆ ಆಹ್ವಾನ.

ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಷರೀಫ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾರತ, ದಕ್ಷಿಣ ಏಷ್ಯಾ, ಅಫ್ಘಾನಿಸ್ತಾನ, ಮಧ್ಯಪ್ರಾಚ್ಯ ಹಾಗೂ ಉಕ್ರೇನ್ ಯುದ್ಧ ಸೇರಿದಂತೆ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.

ದುರದೃಷ್ಟವಶಾತ್ ಎಂದಿದ್ದೇಕೆ ಪುಟಿನ್?

ರಷ್ಯಾದೊಂದಿಗೆ ವ್ಯಾಪಾರ, ಇಂಧನ, ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಬಯಕೆಯನ್ನು ವ್ಯಕ್ತಪಡಿಸಿದರು. ಭಾರತದೊಂದಿಗಿನ ನಿಮ್ಮ ಸಂಬಂಧವನ್ನು ನಾವು ಗೌರವಿಸುತ್ತೇವೆ. ಆದರೆ, ರಷ್ಯಾದೊಂದಿಗೆ ಬಲಿಷ್ಠ ಸಂಬಂಧವನ್ನು ನಾವು ಬಯಸುತ್ತೇವೆ," ಎಂದು ಶಹಬಾಜ್ ಷರೀಫ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುಟಿನ್, 'ದುರದೃಷ್ಟವಶಾತ್, ವಿವಿಧ ಕಾರಣಗಳಿಂದ ನಮ್ಮ ವ್ಯಾಪಾರ ಕಡಿಮೆಯಾಗಿದೆ. ಆದರೆ, ಪಾಕಿಸ್ತಾನ ಎದುರಿಸುತ್ತಿರುವ ಸವಾಲುಗಳನ್ನು ಜಯಿಸಲಿದೆ ಎಂಬ ವಿಶ್ವಾಸವಿದೆ' ಎಂದರು. ಪಾಕಿಸ್ತಾನದಲ್ಲಿ ಇತ್ತೀಚಿನ ಪ್ರವಾಹದ ಬಗ್ಗೆ ಶಹಬಾಜ್ ಷರೀಫ್ ಅವರಿಂದ ಮಾಹಿತಿಯನ್ನು ಪುಟಿನ್ ಪಡೆದರು.

SCO ವೇದಿಕೆಯ ಮಹತ್ವ

ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ SCO ನಂತಹ ವೇದಿಕೆಗಳು ಮಹತ್ವದ್ದು ಎಂದು ಪುಟಿನ್ ಒತ್ತಿ ಹೇಳಿದರು. ಪಾಕಿಸ್ತಾನವು ತನ್ನ ನೆರೆಹೊರೆಯವರೊಂದಿಗೆ ಸಾಮಾನ್ಯ ಮತ್ತು ಸ್ಥಿರ ಸಂಬಂಧವನ್ನು ಬಯಸುತ್ತದೆ. ನಾವು ಎಲ್ಲಾ ಅಂತರರಾಷ್ಟ್ರೀಯ ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನು ಗೌರವಿಸುತ್ತೇವೆ ಮತ್ತು ಎಲ್ಲಾ ಸದಸ್ಯ ರಾಷ್ಟ್ರಗಳು ಇದೇ ತತ್ವವನ್ನು ಅನುಸರಿಸಬೇಕೆಂದು ನಿರೀಕ್ಷಿಸುತ್ತೇವೆ' ಶಹಬಾಜ್ ಷರೀಫ್ ತಿಳಿಸಿದರು.'

ಪುಟಿನ್‌ರಿಂದ ಆಹ್ವಾನ

ನವೆಂಬರ್‌ನಲ್ಲಿ ರಷ್ಯಾದಲ್ಲಿ ನಡೆಯಲಿರುವ SCO ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಲು ಪುಟಿನ್ ಆಹ್ವಾನವನ್ನು ಶಹಬಾಜ್ ಷರೀಫ್ ಸ್ವೀಕರಿಸಿದ್ದಾರೆ. ಈ ಸಭೆಯು ರಷ್ಯಾ-ಪಾಕಿಸ್ತಾನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

17 ವರ್ಷಗಳ ಬಳಿಕ ತಾರಿಕ್ ರೆಹಮಾನ್ ಬಾಂಗ್ಲಾಕ್ಕೆ ಎಂಟ್ರಿ; ಭುಗಿಲೆದ್ದ ರಾಜಕೀಯ ಸಂಘರ್ಷ, ಯೂನಸ್ ಸರ್ಕಾರಕ್ಕೆ ಭಾರೀ ಹಿನ್ನಡೆ
ನೋವಿನ ಕೂಗು ಕೇಳಲಿಲ್ಲ, ಕೆನಡಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ 8 ಗಂಟೆ ನರಳಾಡಿ ಹೃದಯಾಘಾತದಿಂದ ಭಾರತೀಯನ ಸಾವು!