ಕೆನಡಾದಲ್ಲಿ ಗುಜರಾತಿಗಳ ಕಾರುಬಾರು: ಕೆನಡಿಯನ್ ಮಹಿಳೆಗೆ ಫ್ಲಾಟ್ ಕೊಡಲು ನಿರಾಕರಣೆ

Published : Sep 03, 2025, 06:44 PM IST
canada city

ಸಾರಾಂಶ

ಕೆನಡಾದಲ್ಲಿ ಗುಜರಾತಿ ಮೂಲದ ಮನೆ ಮಾಲೀಕರು ಸ್ಥಳೀಯ ನಿವಾಸಿಗಳಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ ಎಂದು ಕೆನಡಿಯನ್ ಮಹಿಳೆ ಆರೋಪಿಸಿದ್ದಾರೆ. ವಸತಿ ಬಿಕ್ಕಟ್ಟಿಗೆ ಭಾರತೀಯ ವಲಸಿಗರೇ ಕಾರಣ ಎಂದು ಆಕೆ ದೂರಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಾನು ಭಾರತೀಯ ಮೂಲದ ಗುಜರಾತಿ ಅಲ್ಲದ ಕಾರಣಕ್ಕೆ ನನಗೆ ಕೆನಡಾದಲ್ಲಿ ರೂಮ್ ಕೊಡುವುದಕ್ಕೆ ನಿರಾಕರಿಸಲಾಯ್ತು ಎಂದು ಸ್ವತಃ ಕೆನಡಿಯನ್ ಪ್ರಜೆಯಾಗಿರುವ ಮಹಿಳೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಟ್ಯಾರೋ ಕಾರ್ಡ್ ರೀಡರ್ ಆಗಿರುವ ಕ್ಯಾರೋಲಿನ್ ಐರನ್‌ವಿಲ್ ಅವರು ತಮ್ಮ ದೇಶದಲ್ಲೇ ತಮ್ಮ ಅನುಭವಕ್ಕೆ ಬಂದ ತಾರತಮ್ಯ ನೀತಿಯ ಬಗ್ಗೆ ಸಾಮಾಜಿಕ ಜಾಲತಾಣವಾದ ಥ್ರೆಡ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

ಕೆನಡಿಯನ್ ಮೂಲದ ಮಹಿಳೆಗೆ ಕೆನಡಾದಲ್ಲಿ ಮನೆ ನಿರಾಕರಿಸಿದ ಗುಜರಾತಿಗಳು 

ತಾನು ಕೆನಡಾದ ಡೌನ್‌ಟೌನ್‌ನಲ್ಲಿ ವಾಸ ಮಾಡುತ್ತಿರುವುದಾಗಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿರುವ ಈ ಐರನ್‌ವಿಲ್‌ ತನಗೆ ಬರಹ ರೂಪದಲ್ಲಿ ಭೂಮಾಲೀಕರು ಮನೆ ನೀಡುವುದಿಲ್ಲ ಎಂದು ಹೇಳಿದರು, ಇದರಿಂದ ನಾನು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಕೆನಡಾದ ಯಾವ ನಗರದಲ್ಲಿ ತನಗೆ ಈ ರೀತಿಯ ಅನುಭವ ಆಯ್ತು ಎಂದು ಆಕೆ ಹೇಳಿಕೊಂಡಿಲ್ಲ.

ಕೆನಡಾದಲ್ಲಿ 2 ಲಕ್ಷಕ್ಕೂ ಹೆಚ್ಚು ಗುಜರಾತಿಗಳ ವಾಸ:

2021 ರ ಕೆನಡಾದ ಜನಗಣತಿಯ ಪ್ರಕಾರ, ಕೆನಡಾದಲ್ಲಿ 2 ಲಕ್ಷಕ್ಕೂ ಹೆಚ್ಚು ಗುಜರಾತಿಗಳು ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಟೊರೊಂಟೊ ಮತ್ತು ಅದರ ಉಪನಗರಗಳಲ್ಲಿ ನೆಲೆಸಿದ್ದಾರೆ. ಇದರ ಜೊತೆಗೆ ಪಂಜಾಬಿ ಮತ್ತು ಹಿಂದಿ ನಂತರ ಕೆನಡಾದಲ್ಲಿ ಹೆಚ್ಚು ಮಾತನಾಡುವ ಮೂರನೇ ಭಾರತೀಯ ಭಾಷೆ ಗುಜರಾತಿಯಾಗಿದೆ.

ಸ್ಥಳೀಯ ನಿವಾಸಿಗಳಿಗೆ ಬಾಡಿಗೆ ಮೆನ ನಿರಾಕರಿಸಿದ ಆರೋಪ

ನಾನು ಗುಜರಾತ್ ಭಾರತೀಯನಲ್ಲದ ಕಾರಣ ನನಗೆ ಅಪಾರ್ಟ್‌ಮೆಂಟ್ ನಿರಾಕರಿಸಲಾಯಿತು. ಇದು ಪ್ರತ್ಯೇಕ ಅಪಾರ್ಟ್ಮೆಂಟ್ ಘಟಕ, ಹಂಚಿಕೊಂಡಿರುವಂತಹದಲ್ಲಎಂದು ಕ್ಯಾರೋಲಿನ್ ಐರನ್‌ವಿಲ್ ಥ್ರೆಡ್ಸ್‌ನಲ್ಲಿ ಬರೆದಿದ್ದಾರೆ. ಅಲ್ಲದೇ ಕೆನಡಾದ ವಸತಿ ಬಿಕ್ಕಟ್ಟಿಗೆ ಭಾರತೀಯ ವಲಸಿಗರೇ ಕಾರಣ ಭಾರತೀಯರು ಕೆನಡಾಕ್ಕೆ ವಲಸೆ ಹೋಗಿ, ಮನೆಗಳನ್ನು ಖರೀದಿಸಿ, ನಂತರ ಸ್ಥಳೀಯರಾದ ಕೆನಡಿಯನ್ನರಿಗೆ ಬಾಡಿಗೆಗೆ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರು ಕೆನಡಾಕ್ಕೆ ಬಂದು, ಲಭ್ಯವಿರುವ ಮನೆಗಳನ್ನು ಖರೀದಿಸಿದರು. ನಂತರ ಕೆನಡಾದ ನಾಗರಿಕರಿಗೇ ವಸತಿಗೆ ಮನೆ ನೀಡಲು ನಿರಾಕರಿಸಿದರು. ಇವರ ಈ ವರ್ತನೆಯಿಂದ ನಮಗೆ ಇಲ್ಲಿ ವಸತಿ ಬಿಕ್ಕಟ್ಟು ಉಂಟಾಗಿದೆ. ಇದರ ವಿರುದ್ಧ ನಾನು ಮೊಕದ್ದಮೆ ಹೂಡಲು ಸಿದ್ಧಳಾಗಿದ್ದೇನೆ ಎಂದು ಐರನ್‌ವಿಲ್ ಹೇಳಿದ್ದಾರೆ.

ಆದರೆ ಐರನ್‌ವಿಲ್ ಅವರ ಈ ಪೋಸ್ಟ್ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಕಥೆಯ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆ ಎತ್ತಿದ್ದಲ್ಲದೇ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಈ ರೀತಿ ಎಂದಿಗೂ ಆಗಿಲ್ಲ. ಇದು ವಲಸೆ ವಿರೋಧಿ ಯತ್ನದ ಪರೋಕ್ಷ ಪ್ರಯತ್ನಇದನ್ನು ಸರಿಯಾಗಿ ಮಾಡಿ, ಇದು ದುಃಖಕರ ಮತ್ತು ಕರುಣಾಜನಕವಾಗಿದೆ. ಒಂದು ವೇಳೆ ನೀವು ಹೇಳಿದ್ದೇ ನಿಜವಾಗಿದ್ದರೆಅದನ್ನು ಸಾಬೀತುಪಡಿಸಿ ಮತ್ತು ಮೊಕದ್ದಮೆ ಹೂಡಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಆದರೆ ಐರನ್‌ವಿಲ್ ಅವರ ಮಾತನ್ನು ಹಲವರು ಒಪ್ಪಿಕೊಂಡಿದ್ದಾರೆ. ಈ ರೀತಿಯ ಘಟನೆ ತುಂಬಾ ಆಗಾಗ್ಗೆ ಸಂಭವಿಸುತ್ತದೆ ಎಂದು ನಾನು ಕೇಳಿದ್ದೇನೆ. ನಾನು ನನಗಾಗಿ ಅಪಾರ್ಟ್ಮೆಂಟ್ ಹುಡುಕುತ್ತಿರುವಾಗ, ಬಿಳಿಯರಿಗೆ ಅಥವಾ ಭಾರತೀಯರಲ್ಲದವರಿಗೆ ಮನೆ ಬಾಡಿಗೆ ನೀಡಲು ನಿರಾಕರಿಸಿದ ನೂರಾರು ಮನೆ ಮಾಲೀಕರು ನನಗೆ ಕಾಣಲು ಸಿಕ್ಕಿದರು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು ಎಂದಿಗೂ ಸಂಭವಿಸಿಲ್ಲ ಎಂದು ಹೇಳುವ ಜನರು ಕೆನಡಿಯನ್ನರಲ್ಲ ಅಥವಾ ಕಳೆದ 8 ವರ್ಷಗಳಲ್ಲಿ ಯಾವುದೇ ಪ್ರಮುಖ ಕೆನಡಾದ ನಗರದಲ್ಲಿ ಅಪಾರ್ಟ್ಮೆಂಟ್ ಬಾಡಿಗೆ ಪಡೆಯಲು ಪ್ರಯತ್ನಿಸಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಹೊಸ ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ: ಮಧ್ಯ ಆಗಸದಲ್ಲಿ ಟಾಯ್ಲೆಟ್ ಬ್ಲಾಕ್: ಮೂತ್ರ ವಿಸರ್ಜನೆಗೆ ವೃದ್ಧೆಗೆ ಬಾಟಲಿ ನೀಡಿದ ಏರ್‌ಲೈನ್ಸ್

ಇದನ್ನೂ ಓದಿ:  ಜೋರಾಗಿ ಮಳೆ, ಕೈಗೆ ಸಿಗದ ಉಬರ್ ಓಲಾ: ಮನೆಗೆ ಹೋಗಲು ಮಿನಿ ಟ್ರಕ್ ಬುಕ್ ಮಾಡಿದ ಉದ್ಯೋಗಿಗಳು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!