ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದಲ್ಲಿ ಬರ್ಖಾ ದತ್ ಹೆಸರು ಉಲ್ಲೇಖ!

By Santosh Naik  |  First Published Apr 1, 2022, 3:02 PM IST

ಅವಿಶ್ವಾಸ ಗೊತ್ತುವಳಿಯಿಂದ ಇಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಭಾರತದ ಪತ್ರಕರ್ತೆ ಬರ್ಖಾ ದತ್ ಅವರ ಪುಸ್ತಕವನ್ನು ಉಲ್ಲೇಖಿಸಿ, ಮಾಜಿ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನಿ ಸೇನೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ನೇಪಾಳದಲ್ಲಿ ಪ್ರಧಾನಿ ಮೋದಿಯನ್ನು ಗುಟ್ಟಾಗಿ ಭೇಟಿಯಾಗುತ್ತಿದ್ದರು ಎಂದು ಹೇಳಿದ್ದಾರೆ.
 


ನವದೆಹಲಿ (ಏ.1): ಪಾಕಿಸ್ತಾನದ ಅಸೆಂಬ್ಲಿಯಲ್ಲಿ (Pakistan assembly)  ಅಲ್ಪಮತಕ್ಕೆ ಕುಸಿದ ಬಳಿಕ ಅಧಿಕಾರದಲ್ಲಿ ಉಳಿಯಲು ಹೆಣಗಾಡುತ್ತಿರುವ ಪ್ರಧಾನಿ ಇಮ್ರಾನ್ ಖಾನ್ (PM Imran Khan), ಗುರುವಾರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಭಾರತೀಯ ಪತ್ರಕರ್ತೆ ಬರ್ಖಾ ದತ್ (Indian journalist Barkha Dutt) ಅವರ ಹೆಸರನ್ನು ಉಲ್ಲೇಖ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಭಾನುವಾರ ಪಾಕಿಸ್ತಾನದ ಸಂಸತ್ತಿನಲ್ಲಿ ವಿಶ್ವಾಸಮತ (No Confidence Vote) ಸಾಬೀತುಪಡಿಸಬೇಕಿರುವ ಇಮ್ರಾನ್ ಖಾನ್ ಅವರ ವಿದಾಯ ಭಾಷಣ ಇದು ಎಂದು ಹಲವರು ವಿಶ್ಲೇಷಿಸಿದ್ದಾರೆ.

ಬರ್ಖಾ ದತ್ ಅವರ ಪುಸ್ತಕವನ್ನು ಉಲ್ಲೇಖಿಸಿದ ಇಮ್ರಾನ್ ಖಾನ್, ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಪಾಕಿಸ್ತಾನಿ ಸೇನೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ನೇಪಾಳದಲ್ಲಿ ಪ್ರಧಾನಿ ಮೋದಿಯನ್ನು ಗುಟ್ಟಾಗಿ ಭೇಟಿಯಾಗುತ್ತಿದ್ದರು ಎಂದು ಹೇಳಿದ್ದಾರೆ.

ಬರ್ಖಾ ದತ್ ಅವರ ಪುಸ್ತಕದಲ್ಲಿ ಅವರು (ನವಾಜ್ ಷರೀಫ್) ಸ್ವಂತ ಸೇನೆಯಿಂದ ರಕ್ಷಿಸಿಕೊಳ್ಳುವ ಸಲುವಾಗಿ, ನೇಪಾಳದಲ್ಲಿ ನರೇಂದ್ರ ಮೋದಿ ಅವರ ಜೊತೆ ರಹಸ್ಯ ಸಭೆಗಳನ್ನು ನಡೆಸುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ," ಎಂದು ಇಮ್ರಾನ್ ಖಾನ್ ಹೇಳಿದ್ದರು.

"Barkha Dutt ki kitaab me likha hua hai ki Nawaaz Sharif Narendra Modi se milta tha baahar chhup-chhup k".
- Imran Khan
😂😂 pic.twitter.com/YQ850zmhyX

— Observer (@Satyanveshi22)


ಅಲ್ಲದೆ, ತಮ್ಮ ಸರ್ಕಾರವನ್ನು ಉರುಳಿಸುವ ಕಾರ್ಯದಲ್ಲಿ ವಿದೇಶಿ ಪಿತೂರಿ ಇದೆ ಎಂದು ಖಾನ್ ಪ್ರತಿಪಾದಿಸಿದರು. ತನ್ನ ಸರ್ಕಾರವನ್ನು ಉರುಳಿಸಲು "ವಿದೇಶಿ ಸಂಚುಕೋರರಿಗೆ" ಸಹಕರಿಸುತ್ತಿರುವ ಶತ್ರುಗಳು ದೇಶದೊಳಗೆ ಇದ್ದಾರೆ ಎಂದು ಅವರು ಆರೋಪಿಸಿದರು. ಇಮ್ರಾನ್ ಖಾನ್ ಅವರು ಪಾಕಿಸ್ತಾನದಲ್ಲಿ ಅಧಿಕಾರದಲ್ಲಿ ಮುಂದುವರಿದರೆ ದೇಶವು ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ ಮತ್ತು ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಸಂಬಂಧವು ಹದಗೆಡುತ್ತದೆ ಎಂದು ಬೆದರಿಕೆ ಪತ್ರವೊಂದು ಬಹಿರಂಗವಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ತಾವು ಮುಂದೆ ಅಧಿಕಾರದಲ್ಲಿ ಉಳಿಯದಿದ್ದರೆ, ಏನೂ ಆಗುವುದಿಲ್ಲ ಮತ್ತು ಯುಎಸ್ ಜೊತೆಗಿನ ಪಾಕಿಸ್ತಾನದ ಸಂಬಂಧಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

Tap to resize

Latest Videos

ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

ಎರಡು ಪ್ರಮುಖ ಮಿತ್ರಪಕ್ಷಗಳ ಪಕ್ಷಾಂತರದ ನಂತರ 342-ಸದಸ್ಯ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವರು ಬಹುಮತವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಇಮ್ರಾನ್ ಖಾನ್ ಅವರ ಭಾಷಣ ಪ್ರಮುಖವಾಗಿದೆ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಿಲ್ಲದೆ ಪಾಕಿಸ್ತಾನದ ಸಂಸತ್ತನ್ನು ಭಾನುವಾರಕ್ಕೆ ಮುಂದೂಡಲಾಗಿದ್ದರೂ, ಖಾನ್ ಅವರ ಮುಂದಿನ ಹಾದಿಯು ಕಠೋರವಾಗಿರಬಹುದು ಮತ್ತು ಶೀಘ್ರದಲ್ಲೇ ಅವರನ್ನು ಕಚೇರಿಯಿಂದ ಪದಚ್ಯುತಗೊಳಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಇಮ್ರಾನ್ ಖಾನ್ ಹೇಳಿಕೆಗೆ ಅಮೆರಿಕ ಕೆಂಗಣ್ಣು!
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು "ವಿದೇಶಿ ಪಿತೂರಿ"ಯಲ್ಲಿ ವಾಷಿಂಗ್ಟನ್ ಪಾತ್ರದ ಬಗ್ಗೆ ಮಾಡಿದ ಒಳನೋಟಗಳನ್ನು ಅಮೆರಿಕ (USA) ಗುರುವಾರ ತಿರಸ್ಕರಿಸಿದೆ."ಈ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ. ನಾವು ಪಾಕಿಸ್ತಾನದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಪಾಕಿಸ್ತಾನದ ಸಾಂವಿಧಾನಿಕ ಪ್ರಕ್ರಿಯೆ ಮತ್ತು ಕಾನೂನಿನ ನಿಯಮವನ್ನು ಗೌರವಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ತಿಳಿಸಿದ್ದಾರೆ.

Imran Khan ಎಂಕ್ಯೂಎಂ ಪಕ್ಷದ ಬೆಂಬಲ ವಾಪಸ್, ಅವಿಶ್ವಾಸಕ್ಕೂ ಮುನ್ನವೇ ಇಮ್ರಾನ್ ರಾಜೀನಾಮೆ ಗುಸುಗುಸು!

ಅವಿಶ್ವಾಸ ನಿರ್ಣಯದ ಮೊದಲು ಪಾಕಿಸ್ತಾನದ ಜನರನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್, "ಇಮ್ರಾನ್ ಖಾನ್ ಅವರನ್ನು ತೆಗೆದುಹಾಕಬೇಕು ಇಲ್ಲದಿದ್ದರೆ ದೇಶವು ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂಬ ಸಂದೇಶವನ್ನು ವಿದೇಶಿ ರಾಷ್ಟ್ರವೊಂದು ಕಳುಹಿಸಿದೆ" ಎಂದು ಹೇಳಿದರು. ಬಹುತೇಕರು ಇಮ್ರಾನ್ ಖಾನ್ ಈ ಆರೋಪವನ್ನು ಅಮೆರಿಕವನ್ನು ಗುರಿಯಾಗಿಸಿಕೊಂಡು ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಮಾತನ ಭರದಲ್ಲಿ ಯುನೈಟೆಡ್ ಸ್ಟೇಡ್ಸ್ ಎಂದೂ ಇಮ್ರಾನ್ ಖಾನ್ ಹೇಳಿದ್ದು ದಾಖಲಾಗಿದೆ. ಬಳಿಕ, "ವಿದೇಶಿ ದೇಶ" ಎಂದು ಸರಿಪಡಿಸಿಕೊಂಡ ಅವರು ಪಾಕಿಸ್ತಾನದ ವಿರುದ್ಧ ಬೆದರಿಕೆ ಮೆಮೊ ಕಳುಹಿಸಿದೆ ಎಂದು ಹೇಳಿದ್ದರು.

click me!