ಮೋದೀಜಿ ನಮಗೆ ಸಹಾಯ ಮಾಡಿ, ಅಳಲು ತೋಡಿಕೊಂಡ POK ವ್ಯಕ್ತಿ!

Suvarna News   | Asianet News
Published : Jan 19, 2022, 01:00 PM ISTUpdated : Jan 19, 2022, 01:01 PM IST
ಮೋದೀಜಿ ನಮಗೆ ಸಹಾಯ ಮಾಡಿ, ಅಳಲು ತೋಡಿಕೊಂಡ POK ವ್ಯಕ್ತಿ!

ಸಾರಾಂಶ

ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ದಬ್ಬಾಳಿಕೆ ಭಾರತ ಸರ್ಕಾರ ಹಾಗೂ ಪ್ರಧಾನಿ ಮೋದಿ ಸಹಾಯ ಕೇಳಿದ ಪಿಒಕೆ ವ್ಯಕ್ತಿ ಹಿಂದುಗಳಿಗೆ ಸೇರಿದ ಜಾಗವನ್ನು ಪಾಕಿಸ್ತಾನ ಸರ್ಕಾರ ವಶಪಡಿಸಿಕೊಳ್ಳುತ್ತಿದೆ ಎಂದಿರುವ ವಿಡಿಯೋ ವೈರಲ್

ಮುಜಾಫರಾಬಾದ್ (ಜ.19): ಪಾಕಿಸ್ತಾನದಲ್ಲಿ(Pakistan ) ಹಿಂದೂಗಳು (Hindu) ಹಾಗೂ ಸಿಖ್ ಗಳ (Sikh) ಮೇಲೆ ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದೆ. ಪಾಕಿಸ್ತಾನದ ಸರ್ಕಾರ ಹಿಂದುಗಳ ದೇವಸ್ಥಾನವನ್ನು (Temple) ಕೆಡವಿದ ಸುದ್ದಿಗಳು ಬರುತ್ತಿರುವ ನಡುವೆಯೇ, ಹಿಂದುಗಳು ಹಾಗೂ ಸಿಖ್ ಜನರಿಗೆ ಸೇರಿದ ಆಸ್ತಿಯ ಮೇಲೂ ಪಾಕಿಸ್ತಾನ ಸರ್ಕಾರ ಹಕ್ಕು ಸಾಧಿಸಲು ಮುಂದಾಗಿದೆ. ವರ್ಷಗಳಿಂದ ವಾಸವಿದ್ದ ಹಿಂದುಗಳು ಹಾಗೂ ಸಿಖ್ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳ ಸಾಕ್ಷಿಯಾಗಿ ಬುಧವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ವ್ಯಕ್ತಿಯೊಬ್ಬ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕೆಲವು ಪೊಲೀಸರು ಹಿಂದು ವ್ಯಕ್ತಿಯ ಮನೆಗೆ ಹೊಕ್ಕು ಮನೆಯಲ್ಲಿದ್ದವರನ್ನು ಹೊರಹಾಕಿ ಆಸ್ತಿಯನ್ನು ವಶಪಡಿಸಿಕೊಳ್ಳುತ್ತಿರುವ ವಿಡಿಯೋ ಇದಾಗಿದೆ. ಇದನ್ನು ವಿಡಿಯೋ ಮಾಡಿರುವ ಮಲೀಕ್ ವಸೀಂ (Malik Wasim) ಎನ್ನುವ ವ್ಯಕ್ತಿ, ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯಕ್ಕೆ ಅಂಗಲಾಚಿದ್ದಾರೆ.

ಇಲ್ಲಿರುವ ಆಸ್ತಿಗಳು ಹಿಂದುಗಳು ಹಾಗೂ ಸಿಖ್ ಅವರಿಗೆ ಸೇರಿದ್ದು ಎಂದು ಹೇಳಿರುವ ವಸೀಂ, ಭಾರತ ಸರ್ಕಾರ (Indian government) ಹಾಗೂ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi ) ಇಲ್ಲಿನವರ ಸಹಾಯಕ್ಕೆ ಧಾವಿಸಬೇಕು ಎಂದು ವಿಡಿಯೋದಲ್ಲಿ ಕೇಳಿಕೊಂಡದ್ದಾರೆ.  "ಬನ್ನಿ ನಮ್ಮನ್ನು ರಕ್ಷಿಸಿ' ಎಂದು ಅವರು ಹೇಳಿರುವ ಮಾತುಗಳು ಸಾಕಷ್ಟು ವೈರಲ್ ಆಗಿದೆ. ಸ್ಥಳೀಯ ಪೊಲೀಸರು ತಮ್ಮ ಮನೆಗೆ ಸೀಲ್ ಮಾಡಿದ್ದಾರೆ, ಕುಟುಂಬ ಮತ್ತು ಮಕ್ಕಳನ್ನು ಜನವರಿಯ ಚಳಿಯಲ್ಲಿ ಬೀದಿಯಲ್ಲಿ ವಾಸ ಮಾಡುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

“ಪೊಲೀಸ್ ಸಿಬ್ಬಂದಿ ನಮ್ಮ ಮನೆಯನ್ನು ಸೀಲ್ ಮಾಡಿದ್ದಾರೆ. ಮನೆಯನ್ನು ನಮಗೆ ಹಸ್ತಾಂತರ ಮಾಡುವಂತೆ ಮುಜಾಫರಾಬಾದ್ ಕಮೀಷನರ್ ಅವರನ್ನು ಈ ಮೂಲಕ ಕೇಳುತ್ತಿದ್ದೇನೆ. ನನ್ನ ಮಕ್ಕಳು ಬೀದಿಯಲ್ಲಿ ನಿಂತಿರುವುದನ್ನು ನೀವು ನೋಡುತ್ತಿದ್ದೀರಿ. ನನಗೇನಾದರೂ ಆದಲ್ಲಿ, ಇಲ್ಲಿನ ಕಮೀಷನರ್ ಹಾಗೂ ತಹಶೀಲ್ದಾರ್ ಅವರನ್ನೇ ಹೊಣೆ ಮಾಡಬೇಕು. ನನ್ನ ಮನೆಯಲ್ಲಿ ವಾಸಿಸಲು ನನಗೆ ಬಿಡಬೇಕು. ಇಲ್ಲದಿದ್ದಲ್ಲಿ ನಾನು ಭಾರತ ಸರ್ಕಾರದ ಸಹಾಯವನ್ನು ಕೇಳತ್ತೇನೆ. ಇಲ್ಲಿನವರಿಗೆ ಪ್ರಧಾನಿ ಮೋದಿ ಅವರು ಪಾಠ ಕಲಿಸಬೇಕು ಎಂದು ಮನವಿ ಮಾಡುತ್ತೇನೆ' ಎಂದು ಮಲೀಕ್ ವಸೀಂ ವಿಡಿಯೋದಲ್ಲಿ ಹೇಳಿದ್ದಾರೆ. "ಈ ದುಷ್ಕೃತ್ಯಗಳಿಂದ ನಮ್ಮನ್ನು ರಕ್ಷಿಸುವಂತೆ ನಾನು ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ" ಎಂದು ಅವರು ಹೇಳಿದ್ದಾರೆ.
 


ಕಣ್ಣು ಕಾಣಿಸದಿದ್ದರೂ ಹರಿಯಿತು ಕಣ್ಣೀರ ಕೋಡಿ... ಭಾವುಕ ವಿಡಿಯೋ
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಬೆಂಡೆತ್ತಿದ ಭಾರತ: ಇದರ ನಡುವೆ ಭಾರತವು ವಿಶ್ವಸಂಸ್ಥೆಯಲ್ಲಿ(UN) ಪಾಕಿಸ್ತಾನವನ್ನು ಬೆಂಡೆತ್ತಿದೆ. 1993ರ ಮುಂಬೈ ಬಾಂಬ್ ಸ್ಫೋಟಕ್ಕೆ ಕಾರಣರಾದ ಅಪರಾಧ ಸಿಂಡಿಕೇಟ್ ಗುಂಪಿಗೆ ಪಾಕಿಸ್ತಾನದಲ್ಲಿ ಕೇವಲ ರಾಜ್ಯ ರಕ್ಷಣೆ ಮಾತ್ರವಲ್ಲೆ, ಪಂಚತರಾ ಆತಿಥ್ಯವನ್ನೂ ಅನುಭವಿಸಿದೆ ಎಂದು ಮಂಗಳವಾರ ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ. ಡಿ-ಕಂಪನಿ ಮುಖ್ಯಸ್ಥ ದಾವೂದ್ ಇಬ್ರಾಹಿಂ ಇನ್ನೂ ಪಾಕಿಸ್ತಾನದಲ್ಲಿಯೇ ತಲೆಮರೆಸಿಕೊಂಡಿದ್ದಾನೆ ಎಂದು ಭಾರತ ನೇರ ಆರೋಪ ಮಾಡಿದೆ.

Most Followed Instagram: ಟಾಪ್‌ 10ರಲ್ಲಿ ರೊನಾಲ್ಡೊ, ಕೈಲಿ ಜೆನ್ನರ್‌, ಮೆಸ್ಸಿ!
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಟಿಎಸ್ ತಿರುಮೂರ್ತಿ (Permanent Representative of India to the UN, Ambassador TS Tirumurti) ಮಾತನಾಡಿ, ಗ್ಲೋಬಲ್ ಕೌಂಟರ್ ಟೆರರಿಸಂ ಕೌನ್ಸಿಲ್ ಆಯೋಜಿಸಿದ್ದ ಅಂತರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮ್ಮೇಳನ 2022 ರಲ್ಲಿ ಭಯೋತ್ಪಾದನೆ ಮತ್ತು ಅಂತರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಬಂಧಗಳನ್ನು ತೀವ್ರವಾಗಿ ಪರಿಹರಿಸಬೇಕಾಗಿದೆ ಎಂದು ಹೇಳಿದರು. "1993 ರ ಮುಂಬೈ ಬಾಂಬ್ ಸ್ಫೋಟಕ್ಕೆ (1993 Mumbai Bomb Blast) ಕಾರಣವಾದ ಅಪರಾಧ ಸಿಂಡಿಕೇಟ್ ಕೇವಲ ರಾಜ್ಯ ರಕ್ಷಣೆಯನ್ನು ನೀಡಲಿಲ್ಲ ಆದರೆ ಪಂಚತಾರಾ ಆತಿಥ್ಯವನ್ನು ಆನಂದಿಸುವುದನ್ನು ನಾವು ನೋಡಿದ್ದೇವೆ" ಎಂದು ಅವರು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?