Pak minister mocks Abhinandan : ಅಭಿನಂದನ್ ಲೇವಡಿ ಮಾಡಿದ ಪಾಕ್ ಹರಕು ಬಾಯಿ!

Published : Nov 24, 2021, 06:39 PM ISTUpdated : Nov 24, 2021, 07:11 PM IST
Pak minister mocks Abhinandan : ಅಭಿನಂದನ್ ಲೇವಡಿ ಮಾಡಿದ ಪಾಕ್ ಹರಕು ಬಾಯಿ!

ಸಾರಾಂಶ

* ಹರಕು ಬಾಯಿ ಪಾಕ್ ಸಚಿವನ ಕಿತಾಪತಿ * ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನ್ ಬಗ್ಗೆ ವ್ಯಂಗ್ಯ * ಪಾಕಿಸ್ತಾನದಲ್ಲೇ ವ್ಯಾಪಕ ಟೀಕೆಗೆ ಗುರಿಯಾದ ಸಚಿವ * ಪಾಕ್ ವಿಮಾನ ಹೊಡೆದುರುಳಿಸಿ ಶೌರ್ಯ ಮೆರೆದಿದ್ದ ಅಭಿನಂದನ್ 

ನವದೆಹಲಿ(ನ. 24) ಪಾಕಿಸ್ತಾನದ (Pakistan)ಈ ಸಚಿವನದ್ದು ಹರಕು ಬಾಯಿ. ಬಾಯಿಗೆ ಬಂದಂತೆ ಮಾತನಾಡಿ ವಿವಾದ ಸೃಷ್ಟಿಸುವುದು ಹೊಸದೇನೂ ಅಲ್ಲ ಬಿಡಿ.  ಅವರ ದೇಶದ ಒಳಗೆ ವಿವಾದ ಮಾಡಿಕೊಂಡು ಇದ್ದರೆ ಆದೀತು. ಭಾರತದ (India) ಸುದ್ದಿಗೆ  ಬಂದರೆ.

ಫೆಬ್ರವರಿ 2019 ರಲ್ಲಿ ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್ -16 (F-16) ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (Wing Commander Abhinandan Varthaman) ಅವರಿಗೆ ಸೋಮವಾರ, ನವೆಂಬರ್ 22 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramanath Kovind) ಅವರು ವೀರ ಚಕ್ರವನ್ನು (Vir Chakra) ಪ್ರದಾನ ಮಾಡಿದ್ದರು. ಆದರೆ ಇದೇ ವಿಚಾರವನ್ನು  ಅಭಿನಂದನ್  ಹೆಸರುನ್ನು ಪಾಕ್ ಸಚಿವ ಫವಾದ್ ಚೌಧರಿ ಕೆಣಕಿದ್ದಾರೆ.

ಎಫ್ -16 ಯುದ್ಧ ವಿಮಾನ ಹೊಡೆದುರುಳಿಸಿದ ಏಕೈಕ ಮಿಗ್ -21 ಪೈಲಟ್ (Mig-21) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಭಿನಂದನ್ ಅವರನ್ನು ಭಾರತೀಯ ವಾಯುಪಡೆ ಕಮಾಂಡರ್ ಅಭಿನಂದನ್ ಪೋಸ್ಟ್ ಗೆ ಬಡ್ತಿ ನೀಡಲಾಗಿತ್ತು.

ಸದಾ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಭಜನೆ ಮಾಡುವ ಫವಾದ್ ಚೌಧರಿ ಈ  ಬಾರಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಕೆಣಕುವ ಯತ್ನ ಮಾಡಿದ್ದಾರೆ.  #AbhiNoneDone ಎಂದು ವೀರ  ಚಕ್ರ ಪುರಸ್ಕಾರಕ್ಕೆ ಪಾತ್ರವಾದ ಅಭಿನಂದನ್ ಅವರ ಹೆಸರಿನ ಮೇಲೆಯೇ ಕಮೆಂಟ್ ಮಾಡಿದ್ದು  ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದೂಸ್ಥಾನ ನೆಲಕ್ಕೆ ನುಗ್ಗಿ ದಾಳಿ ಮಾಡುವ ಛಾತಿ ಇಮ್ರಾನ್ ಖಾನ್ ಆಡಳಿತದ ಯಶಸ್ಸು ಎಂದು ಹಿಂದೊಮ್ಮೆ ಇದೇ ಸಚಿವ ಭಜನೆ ಮಾಡಿದ್ದರು.  ಪಾಕಿಸ್ತಾನ ಸಚಿವ ಫವಾದ್ ಚೌಧರಿ ರಾಜಾರೋಶವಾಗಿ ಹೇಳಿದ್ದರು. ಚೌಧರಿ ಅಧೀಕೃತ ಹೇಳಿಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕಳ್ಳಾಟವನ್ನು ಬಯಲು ಮಾಡಿತ್ತು. ಪ್ರಧಾನಿ ಇಮ್ರಾನ್ ಖಾನ್‌ಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು

Video: ಅಭಿನಂದನ್ ಈಸ್ ಬ್ಯಾಕ್, ಆಗಸದಲ್ಲಿ ಮತ್ತೆ ರಣಧೀರನ ಆರ್ಭಟ ಶುರು

ಪಾಕಿಸ್ತಾನ ಹಾಗೂ ಪ್ರಧಾನಿ  ಅಸಲಿ ಮುಖ ಬಯಲು ಮಾಡಿದ ಫವಾಧ್ ಚೌಧರಿಗೆಪ್ರಧಾನಿ  ಇಮ್ರಾನ್ ಖಾನ್ ಸಮನ್ಸ್ ನೀಡಿದ್ದರು.  ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಸೂಚಿಸಿ ಪುಲ್ವಾಮಾ ದಾಳಿ, ಭಾರತ ಹಾಗೂ ಪಾಕಿಸ್ತಾನ ಗಡಿ ಸಮಸ್ಯೆಗಳ ಕುರಿತು ಯಾವುದೇ ಹೇಳಿಕೆ ನೀಡದಂತೆ ತಿಳಿಸಲಾಗಿತ್ತು. ಆದರೂ ಹರಕು ಬಾಯಿ ಸುಮ್ಮನಿರಬೇಕಲ್ಲ.

ಅಭಿನಂದನ್  ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ F-16 ಅನ್ನು ಹೊಡೆದುರುಳಿಸಿದರು ಆದರೆ ಅವರ ವಿಮಾನವನ್ನು ಶತ್ರು ಪಡೆಗಳು ಹೊಡೆದುರುಳಿಸಿದ ನಂತರ ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಪಡೆಗಳು ವಾಯುದಾಳಿ ನಡೆಸಿದ ಮರುದಿನವೇ, ವಾಯುಪಡೆ ವಿಮಾನದ ಪತನದ ಕಾರಣ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು.  ಇದಾದ ಮೇಲೆ ಹಲವು ಬೆಳವಣಿಗೆಗಳು ನಡೆದು ಪಾಕಿಸ್ತಾವೇ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಗಡಿವರೆಗೆ ತಂದು ಬಿಟ್ಟು ಹೋಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!